ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

|
Google Oneindia Kannada News

Recommended Video

ಗಂಗಾಂಬಿಕೆ ಮಲ್ಲಿಕಾರ್ಜುನ್, ಬೆಂಗಳೂರಿನ 52ನೇ ಬಿಬಿಎಂಪಿ ಮೇಯರ್ ರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ | Oneindia Kannada

ಬೆಂಗಳೂರು, ಸೆ.29: ಸತತ ಎರಡನೇ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆ ಯಾಗಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೂರು ದಶಕಗಳ ಬಳಿಕ ಲಿಂಗಾಯತ ಸಮುದಾಯದ ಬೆಂಗಳೂರು ಮೇಯರ್ ಹುದ್ದೆ ಅಲಂಕರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಅಂದ ಹಾಗೆ ಲಿಂಗಾಯತ ಸಮುದಾಯದ ಮೊದಲ ಮಹಿಳಾ ಮೇಯರ್ ಎಂಬ ಹೆಮ್ಮೆ ಇವರ ಪಾಲಿಗಿದೆ.

ಮೇಯರ್ ಆದ ಬಳಿಕ ಗಂಗಾಂಬಿಕೆ ಮೊದಲ ಭೇಟಿ ಎಲ್ಲಿಗೆ ಗೊತ್ತಾ?ಮೇಯರ್ ಆದ ಬಳಿಕ ಗಂಗಾಂಬಿಕೆ ಮೊದಲ ಭೇಟಿ ಎಲ್ಲಿಗೆ ಗೊತ್ತಾ?

ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು 130 ಮತಗಳಿಂದ ಗೆಲುವು ಸಾಧಿಸಿದ್ದಾರೆ, ಜೆಡಿಎಸ್ ಅಭ್ಯರ್ಥಿ ರಮೀಳಾ ಉಪಮೇಯರ್ ಆಗಿ 129 ಮತಗಳಿಂದ ಗೆಲುವು ಸಾಧಿಸಿದ್ದರು. ಗಂಗಾಂಬಿಕೆ ಮಲ್ಲಿಕಾರ್ಜುನ್ ಜಯನಗರದ 153 ನೇ ವಾರ್ಡ್ ನ ಸದಸ್ಯರಾಗಿದ್ದಾರೆ, ಇವರು 1978 ನವೆಂಬರ್ 11 ರಂದು ಜನಿಸಿದರು, ಬಿ.ಕಾಂ ವಿದ್ಯಾಭ್ಯಾಸ ಪೂರೈಸಿದ್ದಾರೆ. ಪತಿಯ ಹೆಸರು ಬಿ ಮಲ್ಲಿಕಾರ್ಜುನ್ , ಪ್ರಜ್ವಲ್ ಹಾಗೂ ನಂದಿನಿ ಎನ್ನುವ ಇಬ್ಬರು ಮಕ್ಕಳಿದ್ದಾರೆ.ಜಯನಗರ ಪೂರ್ವ 1 ನೇ ಬ್ಲಾಕ್, 7 ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಾಸವಿದ್ದಾರೆ.

 ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು! ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!

Brief profile of Bengaluru new mayor Gangambike Mallikarjun

ಪಾಲಿಕೆ ಸದಸ್ಯೆಯಾಗಿ ಗಂಗಾಂಬಿಕೆ ಚಟುವಟಿಕೆಗಳು

-2010ರಲ್ಲಿ ಮೊದಲ ಬಾರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.

ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

- 2015ರಲ್ಲಿ 2 ನೇ ಬಾರಿಗೆ ಜಯಗಳಿಸಿದ್ದರು.

- ವಾರ್ಡ್ ನಲ್ಲಿ ಅನೇಕ ನಿವಾಸಿ ಸಂಘಗಳನ್ನು ಉತ್ತೇಜಿಸಿ ಪಾಲಿಕೆ ಅಧಿಕಾರಿಗಳೊಡನೆ ಅಂಗವಿಕಲ ಹಾಗೂ ಬಡ ಕುಟುಂಬ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಉತ್ತಮ ಸೌಲಭ್ಯ ಒದಗಿಸುವುದು ಮತ್ತು ಸ್ವಚ್ಛತೆ ಕಾಪಾಡುವುದು.

 ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

- ಭೈರಸಂದ್ರ ಕೆರೆಯ ಮರು ನಿರ್ಮಾಣ, ಎಂಎನ್ ಕೆ ಉದ್ಯಾನದಲ್ಲಿ ಜಿಮ್ ಅಳವಡಿಕೆ, ಸೋಮೇಶ್ವರ ನಗರದಲ್ಲಿ ಪಾಳು ಬಿದ್ದಿದ್ದ ಐತಿಹಾಸಿಕ ಕಲ್ಯಾಣಿಯ ಆಧುನೀಕರಣ ಇನ್ನಿತರೆ ಅಭಿವೃದ್ಧಿ ಕಾರ್ಯಗಳು.

English summary
Gangambike Mallikarjun who has become first citizen of Bengaluru is also first Lingayath lady mayor of the city. Interestingly mayor is a B.Com graduate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X