ಫೆ.28ಕ್ಕೆ ಬ್ರೆಜಿಲಿಯನ್,ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹ ಉಡಾವಣೆ

ಬೆಂಗಳೂರು,ಫೆಬ್ರವರಿ 05: ಶ್ರೀಹರಿಕೋಟದಿಂದ ಫೆ.28ಕ್ಕೆ ಬ್ರೆಜಿಲಿಯನ್,ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹ ಉಡಾವಣೆಯಾಗಲಿದೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯ ಅಧ್ಯಕ್ಷ ಕೆ.ಶಿವನ್ ಈ ಉಡಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶುಕ್ರವಾರ ಖಚಿತಪಡಿಸಿದ್ದಾರೆ.

ಈ ಉಪಗ್ರಹಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಸಿ -51 ನಲ್ಲಿ ಬೆಳಿಗ್ಗೆ 10.28 ಕ್ಕೆ ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಉಡಾಯಿಸಲಾಗುವುದು.

2021 ರ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಫೆಬ್ರವರಿ 28 ರಂದು ಬ್ರೆಜಿಲಿಯನ್ ಉಪಗ್ರಹ ಅಮೆಜೋನಿಯಾ -1 ಮತ್ತು ಮೂರು ಭಾರತೀಯ ನಿರ್ಮಿತ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದೆ, ಇದರಲ್ಲಿ ಒಂದು ಸ್ವದೇಶೀ ನಿರ್ಮಿತ ಸ್ಟಾರ್ಟ್ ಅಪ್ ಆಗಿದೆ.

Brazilian, Indian Startup Satellite In ISROs First Mission In 2021 On February 28

ಯುನಿಟಿಸಾಟ್ ಮೂರು ಉಪಗ್ರಹಗಳ ಸಂಯೋಜನೆಯಾಗಿದ್ದು, ಜೆಪ್ಪಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀಪೆರುಂಪುಡೂರ್ , ಜಿ.ಎಚ್. ರೈಸೋನಿ ಕಾಲೇಜ್ ಆಫ್ ಎಂಜಿನಿಯರಿಂಗ್, ನಾಗ್ಪುರ ಮತ್ತು ಶ್ರೀ ಶಕ್ತಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಕೊಯಮತ್ತೂರು ಜಂಟಿಯಾಗಿ ನಿರ್ಮಿಸಿದೆ.

ಅಮೆಜೋನಿಯಾ -1 ಎನ್ನುವುದು ಸಂಪೂರ್ಣವಾಗಿ ಬ್ರೆಜಿಲ್ಅಭಿವೃದ್ಧಿಪಡಿಸಿದ ಮೊದಲ ಭೂ ವೀಕ್ಷಣಾ ಉಪಗ್ರಹವಾಗಿದೆ, ಇದು ಪ್ರಾಥಮಿಕ ಉಪಗ್ರಹವಾಗಿರಲಿದೆ.

ಆನಂದ್, ಸತೀಶ್ ಧವನ್ಉಪಗ್ರಹ ಮತ್ತು ಯುನಿಟಿಸಾಟ್ ಇದರೊಡನೆ ಬಾಹ್ಯಾಕಾಶಕ್ಕೇರಲಿರುವ ಇತರೆ ಉಪಗ್ರಹಗಳಾಗಿದೆ. ಆನಂದ್ ಅನ್ನು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ ಅಪ್ ಪಿಕ್ಸೆಲ್ ನಿರ್ಮಾಣ ಮಾಡಿದ್ದರೆ ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ ' ಸಂಸ್ಥೆ 'ಸತೀಶ್ ಧವನ್ ಉಪಗ್ರಹ'ವನ್ನು ನಿರ್ಮಿಸಿದೆ.

Recommended Video

      ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+