ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಾರಿಯರ್ಸ್‌ ಸಹಾಯಕ್ಕೆ ಬಂದ 'ಬೌನ್ಸ್' ಸಂಸ್ಥೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಕೊರೊನಾ ವೈರಸ್‌ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‌ ಸಹಾಯಕ್ಕೆ 'ಬೌನ್ಸ್' ಸಂಸ್ಥೆ ಬಂದಿದೆ. ಕೊರೊನಾ ವಾರಿಯರ್ಸ್‌ ಓಡಾಟಕ್ಕೆ ಸಹಾಯ ಆಗುವಂತೆ ಹೊಸ ಯೋಜನೆಯನ್ನು ಹಾಕಿಕೊಂಡಿದೆ.

'ಬೌನ್ಸ್' ಸಂಸ್ಥೆ 'ಸ್ಕೂಟರ್ ಹೀರೋ' ಎನ್ನುವ ಸೇವೆ ಆರಂಭ ಮಾಡಿದೆ. ಈ ಮೂಲಕ ಜನ ಸಾಮಾನ್ಯರು ಕೊರೊನಾ ಯೋಧರಿಗೆ ಸಹಾಯ ಮಾಡಬಹುದಾಗಿದೆ. ತಮ್ಮ ಬೈಕ್‌ಗಳನ್ನು 'ಸ್ಕೂಟರ್ ಹೀರೋ' ಸೇವೆಗೆ ಸೇರಿಸಬಹುದು ಎಂದು 'ಬೌನ್ಸ್' ಸಂಸ್ಥೆ ತಿಳಿಸಿದೆ.

ಕರ್ನಾಟಕದ ಬೈಕ್ ಪ್ರಿಯರಿಗೆ ಖುಷಿ ಸುದ್ದಿ ನೀಡಿದ Bounce...ಕರ್ನಾಟಕದ ಬೈಕ್ ಪ್ರಿಯರಿಗೆ ಖುಷಿ ಸುದ್ದಿ ನೀಡಿದ Bounce...

scooterhero.bounceshare.com ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನವನ್ನು 'ಸ್ಕೂಟರ್ ಹೀರೋ' ಸೇವೆಗೆ ಸೇರ್ಪಡೆ ಮಾಡಬಹುದಾಗಿದೆ. ಈ ಮೂಲಕ ಕೊರೊನಾ ವಾರಿಯರ್ಸ್‌ಗೆ ನೆರವು ನೀಡಬಹುದು ಎಂದು ಬೌನ್ಸ್ ಸಂಸ್ಥೆ ತಿಳಿಸಿದೆ.

Bounce Company Opened Bounce Hero Service For Corona Warriors

ಜನರು 'ಸ್ಕೂಟರ್ ಹೀರೋ'ಗೆ ಬೈಕ್‌ ಸೇರಿಸುವ ಮೂಲಕ ತಮ್ಮ ಬೈಕ್‌ ಅನ್ನು ಉಚಿತವಾಗಿ ಪ್ರಯಾಣ ಮಾಡಲು ಕೊರೊನಾ ವಾರಿಯರ್ಸ್‌ಗೆ ನೀಡಬಹುದು ಅಥವಾ ಕಡಿಮೆ ದರ ತೆಗೆದುಕೊಳ್ಳಬಹುದು. ಈ ರೀತಿ ಕೊರೊನಾ ವಾರಿಯರ್ಸ್‌ಗೆ ಮನೆಯಲ್ಲಿಯೇ ಕೂತು ಸಹಾಯ ಮಾಡಬಹುದಾಗಿದೆ.

ಇನ್ನೊಂದು ಕಡೆ ಲಾಕ್‌ಡೌನ್ ನಿಂದ ದುಡಿಮೆ ಇಲ್ಲದೆ ಕುಳಿತಿರುವ ಜನ ತಮ್ಮ ಬೈಕ್‌ಅನ್ನು ಈ ಸೇವೆಗೆ ಸೇರಿಸಬಹುದಾಗಿದೆ. ದಿನಕ್ಕೆ 80 ರೂಪಾಯಿ ಶುಲ್ಕ ವಿಧಿಸುವ ಆಯ್ಕೆ ಇದ್ದು, ಆ ಮೂಲಕ ಸಣ್ಣ ಮೊತ್ತಗಳನ್ನು ಗಳಿಸಬಹುದು.

English summary
Bounce bike company opened bounce hero service for corona warriors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X