ಬೆಂಗಳೂರು: ಬೋರ್ ವೆಲ್ ನೀರಿಗೂ ಬಂತು ಮೀಟರ್

ಬೆಂಗಳೂರು, ಫೆ. 6: ಮನೆಗೊಂದು ಸ್ವಂತ್ ಬೋರ್ ವೆಲ್ ಇಟ್ಟುಕೊಂಡು ಮನಸೋ ಇಚ್ಛೆ ನೀರು ಬಳಸುತ್ತಿದ್ದವರಿಗೆ ಬ್ರೇಕ್ ಹಾಕಲು ಬೆಂಗಳೂರು ಜಲಮಂಡಳಿ ಮುಂದಾಗಿದೆ. ಗೃಹ ಮತ್ತು ವಾಣಿಜ್ಯ ಬಳಕೆಗೆ ಉಪಯೋಗವಾಗುತ್ತಿರುವ ಬೋರ್ ವೆಲ್ ಗಳಿಗೆ ಮೀಟರ್ ಅಳವಡಿಸಲು ಸಿದ್ಧತೆ ನಡೆಸಿದೆ.

ನಗರದಲ್ಲಿ ಅಂತರ್ಜಲದ ಅವ್ಯಾಹತ ಬಳಕೆ ನಡೆಯುತ್ತಿದೆ. ಇದಕ್ಕೆ ಯಾವ ನಿರ್ಬಂಧ ಹೇರಲಾಗಿಲ್ಲ. ಪರಿಸರ ಸಂರಕ್ಷಣೆ ಉದ್ದೇಶದಿಂದಲೂ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಅಜಿಂ ಪರ್ವೇಜ್ ತಿಳಿಸಿದ್ದಾರೆ.[ಬೆಂಗಳೂರು ನಗರಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ]

bwssb

ಸದ್ಯ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿಗೆ ಮಾತ್ರ ಮೀಟರ್ ಇದೆ. ನಗರದಲ್ಲಿ ಸುಮಾರು 2.16 ಲಕ್ಷ ಬೋರ್ ವೆಲ್ ಗಳಿದ್ದು ಜನವರಿ ಅಂತ್ಯಕ್ಕೆ 92,790 ಗಳನ್ನು ಮಾಲೀಕರು ನೋಂದಣಿ ಮಾಡಿಸಿದ್ದಾರೆ.

ಪೈಪ್ ಲೈನ್ ಮೂಲಕ ಸರಬರಾಜಾಗುವ ನೀರಿನ ದರ ಹೆಚ್ಚಳ ಮಾಡಿದ್ದರೂ ಜಲಮಂಡಳಿ ನಷ್ಟದಲ್ಲೇ ಸಾಗುತ್ತಿದೆ. ಈಗ ಕೊಳವೆ ಬಾವಿಗಳ ಮೇಲೂ ಕರ ವಿಧಿಸಿ ಆದಾಯ ಸಂಗ್ರಹಣೆಗೆ ಜಲಮಂಡಳಿ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+