ಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆ

ಬೆಂಗಳೂರು, ಮೇ 09 : 'ಆವಾಗ 1 ಗಂಟೆಯಲ್ಲಿ ಟ್ಯಾಂಕ್ ತುಂಬುತ್ತಿತ್ತು, ಈಗ ಎರಡು ಗಂಟೆ ಮೋಟಾರ್ ಓಡಿಸಿದರೂ ಟ್ಯಾಂಕ್ ಭರ್ತಿಯಾಗಲ್ಲ. ಕಾವೇರಿ ನೀರಿನ ಮೇಲೆ ಅವಲಂಬನೆ ಅನಿವಾರ್ಯ' ಎಂದು ಮಾತು ಆರಂಭಿಸಿದರು ಹನುಮಂತನಗರದ ಚಂದ್ರಪ್ಪ.

ಹನುಮಂತನಗರದ ಎಸ್‌ಎಲ್‌ವಿ ಹೋಟೆಲ್‌ ಬಳಿ ಗುರುವಾರ ಬೆಳಗ್ಗೆ ಚಂದ್ರಪ್ಪ ಮಾತಿಗೆ ಸಿಕ್ಕರು. ಸುಮಾರು 53 ವರ್ಷದ ಪ್ರಾಯದ ಚಂದ್ರಪ್ಪ ಹಿಂದಿನ ಬೆಂಗಳೂರು ಕಂಡವರು. ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ನೀರಿನ ಟ್ಯಾಂಕರ್ ಕಂಡ ಅವರು, 'ಇವರಿಗೆ ಈಗ ಹಬ್ಬ' ಎಂದು ನಿಟ್ಟುಸಿರು ಬಿಟ್ಟರು.

'ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಈ ಬಾರಿ ಮಳೆ ಬರಲಿಲ್ಲ. ಬಿಸಿಲಿನ ಝಳ ಹೆಚ್ಚಿದೆ ಇದರಿಂದಾಗಿ ಕೊಳವೆ ಬಾವಿ ಬತ್ತಿ ಹೋಗಿದೆ. 2 ಗಂಟೆ ಮೋಟಾರ್ ಹಾಕಿದರೂ ನೀರಿನ ಟ್ಯಾಂಕ್ ಭರ್ತಿ ಆಗುತ್ತಿಲ್ಲ. ಒಂದೇ ಬಿಲ್ಡಿಂಗ್‌ನಲ್ಲಿ ಮೂರು, ನಾಲ್ಕು ಮನೆ ಇದ್ದರೆ ನೀರು ಕೊಡುವುದೇ ಸಮಸ್ಯೆ' ಎಂದು ನಗರದ ದೊಡ್ಡ ಸಮಸ್ಯೆಯನ್ನು ತೆರೆದಿಟ್ಟರು.

Borewell dried up demand rise for Cavery water in Bengaluru

ಚಂದ್ರಪ್ಪ ಅವರು ಹೇಳುವಂತೆ ಬೆಂಗಳೂರು ನಗರದಲ್ಲಿ ಕಾವೇರಿ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚುತ್ತಿದೆ. ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕಾವೇರಿ ನೀರು ಮತ್ತು ಬೋರ್‌ವೆಲ್ ಎರಡನ್ನೂ ಹೊಂದಿದ ಮನೆ ಮಾಲೀಕರು ಈಗ ಕಾವೇರಿ ನೀರಿನ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.

'ನಮ್ಮ ಏರಿಯಾ ಆದರೂ ಬೇಕು ಕೆಲವು ಏರಿಯಾದಲ್ಲಿ ಮನೆ ಓನರ್‌ಗಳು ಟ್ಯಾಂಕರ್ ನೀರು ತರಿಸಿ ಬಾಡಿಗೆಗೆ ಇರುವವರಿಗೆ ನೀಡುತ್ತಾರೆ. ಅದಕ್ಕೆ ಎಕ್ಸ್‌ಟ್ರಾ ಚಾರ್ಜ್ ಮಾಡುತ್ತಾರೆ. ಒಟ್ನಲ್ಲಿ ಮಳೆ ಬರುವ ತನಕ ಇವರಿಗೆ ಹಬ್ಬ' ಎಂದರು.

'ಓನರ್‌ಗಳು ಬೋರ್‌ವೆಲ್‌ಗೆ ನೀರು ಇಂಗಿಸುವ ಬಗ್ಗೆ ಯೋಚಿಸಲ್ಲ. ರಸ್ತೆಯಲ್ಲಿ ಹರಿವ ನೀರು ಸೀದಾ ಚರಂಡಿ ಪಾಲಾಗುತ್ತದೆ. ಎಲ್ಲಾ ಕಡೆ ಕಾಂಕ್ರೀಟ್ ರಸ್ತೆ ಮಾಡಿ ನೀರು ಇಂಗದಂತೆ ಮಾಡ್ತಾ ಇದಾರೆ' ಎಂದು ಚಂದ್ರಪ್ಪ ವೈಟ್ ಟಾಪಿಂಗ್ ರಸ್ತೆ ಮೇಲೆ ಆರೋಪ ಮಾಡಿದರು.

'ಮನೆಗಳಲ್ಲಿ ಇಂಗು ಗುಂಡಿ ಮಾಡ್ಕಳ್ಳಿ ಎಂದು ಪಾಲಿಕೆ ಅವರು ಹೇಳಿದ್ರು. ಅದನ್ನು ಪಾಲಿಕೆ ಅಧಿಕಾರಿಗಳೇ ಪಾಲಿಸಲ್ಲ. ಇನ್ನು ಜನ ಇವರ ಮಾತು ಕೇಳ್ತಾರಾ?, ನಡೆಯುವಷ್ಟು ದಿನ ನಡೆಯತ್ತೆ, ನೀರಿಗೆ ಬರ ಬಂದಾಗ ಗೊತ್ತಾಗುತ್ತೆ' ಎಂದು ಚಂದ್ರಪ್ಪ ಭವಿಷ್ಯದ ಕರಾಳ ದಿನಗಳನ್ನು ನೆನಪು ಮಾಡಿದರು.

ಅಂಕಿ ಅಂಶಗಳ ಮಾಹಿತಿಯಂತೆ ನಗರದಲ್ಲಿ ಸುಮಾರು 3.73 ಲಕ್ಷ ಕೊಳವೆ ಬಾವಿಗಳಿವೆ. ಸಾಕಷ್ಟು ಮನೆಗಳಲ್ಲಿ ಕಾವೇರಿ ನೀರು ಬರುತ್ತದೆ, ಅವರು ಸ್ವಂತ ಬೋರ್‌ ವೆಲ್ ಹೊಂದಿದ್ದಾರೆ. ಆದರೆ, ಈಗ ಬೋರ್‌ ವೆಲ್ ಖಾಲಿಯಾಗಿದ್ದು, ಕಾವೇರಿ ನೀರಿಗೆ ಬೇಡಿಕೆ ಹೆಚ್ಚಿದೆ.

ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಪ್ರಕಾರ ನಗರಕ್ಕೆ ಪ್ರತಿದಿನ 145 ಕೋಟಿ ಲೀಟರ್ ನೀರು ಸರಬರಾಜು ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕಾವೇರಿ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನೀರು ಪೂರೈಕೆ ಮಾಡುವ ಜಲಾಶಯಗಳಲ್ಲೂ ಸಾಕಷ್ಟು ನೀರಿದ್ದು, ಜನರು ನೆಮ್ಮದಿಯಿಂದ ಇರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+