ಮದ್ಯಪ್ರಿಯರಿಗೆ ಶಾಕ್: ಏ.1ರಿಂದ ಮದ್ಯ ಮತ್ತಷ್ಟು ದುಬಾರಿ
Recommended Video

ಬೆಂಗಳೂರು, ಮಾರ್ಚ್ 30: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿದೆ ಅದರೊಂದಿಗೆ ಮದ್ಯದ ದರವೂ ಏರಿಕೆಯಾಗಿದ್ದು ಪಾನಪ್ರಿಯರು ಶೇ 8ರಷ್ಟು ಹಣ ತೆರಬೇಕಾಗಿದೆ.
2018-19ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ತೆರಿಗೆ ಏರಿಕೆಯಾಗಿದ್ದರಿಂದ ಮದ್ಯದ ದರ ಹೆಚ್ಚಳವಾಗಲಿದ್ದು, ಅದಕ್ಕಾಗಿ ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ. ಸತತ ರಜೆ ಹಿನ್ನೆಲೆಯಲ್ಲಿ ಬಹುತೇಕ ಶನಿವಾರ ಅಥವಾ ಸೋಮವಾರ ದರ ಹೆಚ್ಚಳದ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಲಿದೆ.
ತೆರಿಗೆ ಹೆಚ್ಚಳ ಪ್ರಕ್ರಿಯೆ ಪ್ರತಿವರ್ಷ ಏ.1ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ನಡೆಯುವ ಹಣಕಾಸು ಪ್ರಕ್ರಿಯೆಯಾಗಲಿದೆ. ಹಾಗಾಗಿ ಇದಕ್ಕ ಚುನಾವಣಾ ಮಾದರಿ ನೀತಿ ಸಂಹಿತೆ ಅಡ್ಡಿಯಾಗದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಮಾರಾಟ ದರ ಹೆಚ್ಚಳಕ್ಕೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ನಿಗದಿಯಂತೆ ಏ.1ರಂದು ಹೊಸ ದರ ಜಾರಿಗೆ ಬರಲಿದೆ. ಆ ಬಗ್ಗೆ ಚುನಾವಣಾ ಆಯೋಗದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯಕ್ಕೆ ಭಾರಿ ಬೇಡಿಕೆ ಬರಲಿದೆ. ಚುನಾವಣೆ ಘೋಷಣೆಗೂ ಮುನ್ನ ಈಗಾಗಲೇ ರಾಜ್ಯದ ಹಲವೆಡೆ ಮುಂಚಿತವಾಗಿಯೇ ಮದ್ಯವನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಮಧ್ಯೆ ಇದೇ ಮೊದಲ ಬಾರಿಗೆ 2017-18ನೇ ಸಾಲಿನಲ್ಲಿ ನಿಗದಿಪಡಿಸಿದ್ದ 17,600ಕೋಟಿ ಅಬಕಾರಿ ಆದಾಯದ ಗುರಿಯನ್ನು ಇಲಾಖೆ ಈಗಾಗಲೇ ಸಾಧಿಸಿದೆ. ಪ್ರತಿ ವರ್ಷ ಆದಾಯ ಸಂಗ್ರಹಕ್ಕೆ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು. ಆದರೂ ಸಹ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿರಲಿಲ್ಲ.












Click it and Unblock the Notifications