Namma Metro: ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣ: ಹಣ ನೀಡಿದ ಕಂಪನಿ ಹೆಸರಿನಿಂದಲೇ ನಾಮಕರಣ

ಬೆಂಗಳೂರು ಮಾರ್ಚ್ 15: ಬೊಮ್ಮಸಂದ್ರ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದ ಕಂಪನಿ ಹೆಸರಿನಿಂದಲೇ ಮೆಟ್ರೋಗೆ ನಾಮಕರಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಬೊಮ್ಮಸಂದ್ರ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ವೆಚ್ಚದ 65 ಕೋಟಿ ಮೊತ್ತವನ್ನು ಭರಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಇಂಡಿಯಾ ಫ್ರೈವೇಟ್‌ ಲಿಮಿಟೆಡ್ ಕಂಪನಿ ಮುಂದೆ ಬಂದಿದೆ. ಹೀಗಾಗಿ ಕಂಪನಿ ಒಡಂಬಡಿಕೆ ಹಿನ್ನೆಲೆಯಲ್ಲಿ ನಾಮಕರಣ ಹಕ್ಕು ಪಡೆಯಲಿದೆ.

ಈ ಹಣವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಪಾವತಿಸುವ ಮೂಲಕ 30 ವರ್ಷ 'ಡೆಲ್ಟಾ ಎಲೆಕ್ಟ್ರಾನಿಕ್' ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಾಮಕರಣ ಹಕ್ಕನ್ನು ಪಡೆಯಲಿದೆ. ಬಿಎಂಆರ್‌ಸಿಎಲ್ ಹಾಗೂ ಡೆಲ್ಟಾ ಗುರುವಾರ ಈ ಒಪ್ಪಂದ ಮಾಡಿಕೊಂಡಿದೆ. ಮೊದಲ ಕಂತು 10 ಕೋಟಿಯನ್ನು ನಮ್ಮ ಮೆಟ್ರೋಗೆ ನೀಡಿತು. ಡೆಲ್ಟಾ ಎಲೆಕ್ಟ್ರಾನಿಕ್ಸ್‌ ತ್ರೈವಾನ್‌ ದೇಶದ ಉತ್ಪಾದನಾ ಕಂಪನಿಯಾಗಿದ್ದು, ಪರಿಸರ ಸುಸ್ಥಿರತೆಗೆ ಬದ್ಧತೆ ಹೊಂದಿದೆ.

Bommasandra Metro Station is named after the company that funded its construction

ಒಪ್ಪಂದದ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್‌, ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಅಧ್ಯಕ್ಷ ಬೆಂಜಮಿನ್ ಲಿನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್‌ ನಾಯಕ್ ಉಪಸ್ಥಿತರಿದ್ದರು. ಈ ಒಪ್ಪಂದದ ಮೂಲಕ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಕಂಪನಿಗಳ ಜೊತೆ ಮಾಡಿಕೊಂಡ ಮೂರನೇ ಒಡಂಬಡಿಕೆ ಇದಾಗಿದೆ. ಈ ಹಿಂದೆ ಕೋನಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ಕುರಿತು ಕ್ರಮವಾಗಿ ಇನ್ಸೋಸೀಸ್ ಫೌಂಡೇಶನ್ ಮತ್ತು ಬಯೋಕಾನ್‌ ಫೌಂಡೇಶನ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

4 ಕಡೆ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗ

ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಅನುಸರಿಸಲಾದ ಡಬಲ್ ಡೆಕ್ಕರ್ ಮಾದರಿಯನ್ನು ನಗರದ ಇತರ ಕಡೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರದ ಆಶಯದಂತೆ ಇದೀಗ ಬೆಂಗಳೂರು ಮೆಟ್ರೋ ನಿಗಮ ಮುಂದಿನ ಮೂರನೇ ಹಂತದ ಮೂರು ಕಾರಿಡಾರ್‌ನಲ್ಲಿ ಡಬಲ್ ಡೆಕ್ಕರ್‌ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ವರದಿ ರೂಪಿಸಿಕೊಳ್ಳಲು ಮುಂದಾಗಿದೆ.

Bommasandra Metro Station is named after the company that funded its construction

ಮೆಟ್ರೋದ ಮೂರನೇ ಹಂತದ ಯೋಜನೆಯ ಮೊದಲ ಕಾರಿಡಾರ್‌ ಜೆಪಿ ನಗರ ನಾಲ್ಕನೇ ಹಂತದಿಂದ ಹೆಬ್ಬಾಳ, ಎರಡನೇ ಕಾರಿಡಾರ್‌ ಹೊಸಹಳ್ಳಿ-ಕಡಬಗೆರೆ ಮತ್ತು ಸರ್ಜಾಪುರ-ಇಬ್ಬಲೂರು ಮತ್ತು ಮೂರು ಎ ಹಂತದಲ್ಲಿನ ಮೂರನೇ ಕಾರಿಡಾರ್‌ ಆಗರ-ಕೋರಮಂಗಲ ಮೂರನೇ ಬ್ಲಾಕ್‌ವರೆಗೆ ಆಗರ-ಕೋರಮಂಗಲ ಮೂರನೇ ಬ್ಲಾಕ್‌ವರೆಗೆ ನಡುವೆ ಡಬಲ್‌ ಡೆಕ್ಕರ್ ನಿರ್ಮಾಣಕ್ಕೆ ಯೋಚಿಸಿದೆ.

ಫ್ಲೈಓವರ್‌ ಕಂ ಮೆಟ್ರೋ ಅಂದರೆ ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ಗುರುವಾರ ಟೆಂಡರ್‌ ಕರೆಯಲಾಗಿದೆ. ನಮ್ಮ ಮೆಟ್ರೋ ಪ್ರತ್ಯೇಕವಾಗಿ ಮೂರರನೇ ಎ ಹಂತದಲ್ಲಿ ಸರ್ಜಾಪುರದಿಂದ ಆಗರ, ಕೋರಮಂಗಲ ಡೇರಿ ಸರ್ಕಲ್ ಮತ್ತು ಮೇಖ್ರಿ ಸರ್ಕಲ್ ಮೂಲಕ ಹೆಬ್ಬಾಳ ಸಂಪರ್ಕಿಸುವ ಮೆಟ್ರೋ ಮಾರ್ಗ ರೂಪಿಸಿಕೊಳ್ಳಲು ಡಿಪಿಆರ್ ತಯಾರಿಕೆಗೆ ಯೋಚಿಸಿದ್ದು, ಸರ್ಕಾರದ ಒಪ್ಪಿಗೆ ಬಾಕಿ ಇದೆ.

ಪ್ರಸ್ತುತ, ನಮ್ಮ ಮೆಟ್ರೋ ಹಳದಿ ಲೈನ್ ಅಂದರೆ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ರಾಗಿಗುಡ್ಡ-ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಣ 3.35ಕಿ.ಮೀ ಮರೇನಹಳ್ಳಿ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್‌ ಎಂದು ಕರೆಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+