Bomb Threat: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ.!
Bomb Threat: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯಂತಹ ಪ್ರಕರಣಗಳು ದಾಖಲಾಗಿರುವ ಉದಾಹರಣೆಗಳಿವೆ. ಮತ್ತೆ ಇದೀಗ ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ದುಷ್ಕರ್ಮಿಗಳು ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸಮಯವನ್ನು ಕೂಡ ತಿಳಿಸಿದ್ದು, ಇದು ಆತಂಕವನ್ನು ಸೃಷ್ಟಿಸಿತ್ತು.
ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದ್ದು, ಬೆಳಗ್ಗೆ 6:57ರ ಸುಮಾರಿಗೆ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. ಶಾಲೆ ಆವರಣದಲ್ಲಿರುವ 5 ಪೈಪ್ ಲೈನ್‌ಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದ್ದು, ಮಧ್ಯಾಹ್ನ 1:30 ವೇಳೆಗೆ ಬ್ಲಾಸ್ಟ್ ಆಗಲಿದೆ ಅಂತಾ ಬೆದರಿಕೆ ಮೇಲ್ ಮಾಡಲಾಗಿದೆ.
ಫಾದರ್ ಕೊಡಾಚಿ ಹೆಸರಿನ [email protected] ಹಾಗೂ [email protected] ಎಂಬ ಐಡಿಯಿಂದ ಬೆದರಿಕೆ ಕಳುಹಿಸಿದ್ದು, ಬಳಿಕ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಶಾಲಾ ಮಕ್ಕಳಿಗೆ ರಜೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ಬಳಿಕ ಕೂಡಲೇ ಗೋವಿಂದಪುರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆ ಆಗಿಲ್ಲ. ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಬೆದರಿಕೆ ಮೇಲ್ ಕಳಿಹಿಸಿರುವ ಆರೋಪಿಯ ಪತ್ತೆಗೆ ಶೋಧಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications