Bengaluru Schools: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ, 40ಕ್ಕೂ ಹೆಚ್ಚು ಶಾಲೆಗಳಲ್ಲಿ ತಪಾಸಣೆ
ಬೆಂಗಳೂರಿನ ಪೋಷಕರು ಎಂದಿನಂತೆ ಇವತ್ತು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು, ಹೀಗೆ ಮಕ್ಕಳು ಕೂಡ ಪಾಠ ಕೇಳಲು ಸಿದ್ಧರಾಗಿ ಶಾಲೆ ತಲುಪಿದ್ದರು. ಆದರೆ ದಿಢೀರ್ ಒಂದು ಆಘಾತ ಸೃಷ್ಟಿಸುವ ಸುದ್ದಿ ಸಿಕ್ಕಿತ್ತು. ಅಂದಹಾಗೆ ಕಿಡಿಗೇಡಿಗಳು ಈಗ ಬೆಂಗಳೂರು ನಗರದ 40ಕ್ಕೂ ಹೆಚ್ಚು ಶಾಲೆಗಳಿಗೆ 40 ಬಾಂಬ್ ಇಟ್ಟಿರೋದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ತಕ್ಷಣವೇ ಎಚ್ಚೆತ್ತು ಪರಿಶೀಲನೆ ನಡೆಸಲಾಗಿದೆ. ಹಾಗಿದ್ರೆ ಬೆಂಗಳೂರಿನ ಯಾವೆಲ್ಲಾ ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಅಂದಹಾಗೆ ಶಾಲೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇರುತ್ತಾರೆ, ಇದೇ ಕಾರಣಕ್ಕೆ ಪೋಕಷರು ಕೂಡ ತುಂಬಾನೆ ಆತಂಕ & ಯೋಚನೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಹೀಗಿದ್ದಾಗ ದಿಢೀರ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದರೆ ಹೇಗೆ ಇರಬೇಡ ಹೇಳಿ? ಹೌದು, ಇಂದು ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂತಹದ್ದೇ ಘಟನೆ ನಡೆದು ಹೋಗಿದೆ. ಅಂದಹಾಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಸೇರಿ ಕೆಂಗೇರಿ ಹಾಗೆ ಬೆಂಗಳೂರಿನ ಹಲವು ಶಾಲೆಗಳಿಗೆ ಈ ರೀತಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಹಾಕಲಾಗಿದೆ ಅಂತಾ ಆರೋಪ ಮಾಡಲಾಗಿದೆ. ಇನ್ನು ಈ ಸುದ್ದಿ ಕೇಳಿದ ತಕ್ಷಣವೇ ಮಕ್ಕಳ ಪೋಷಕರು ಕೂಡ ಹೆದರಿಬಿಟ್ಟರು.

40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬೆದರಿಕೆ
ಅಂದಹಾಗೆ ಪದೇ ಪದೇ ಶಾಲೆಗಳಿಗೆ ಈ ರೀತಿಯಾಗಿ ಹುಸಿ ಬಾಂಬ್ ಬೆದರಿಕೆ ಬರುತ್ತಿದ್ದು, ಇತ್ತೀಚೆಗೆ ಈ ರೀತಿ ಘಟನೆಗಳು ಕಡಿಮೆ ಆಗಿದ್ದವು. ಆದರೆ ಇಂದು ದಿಢೀರ್ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು, ಬ್ಯಾಗ್ ಒಳಗೆ ಬಾಂಬ್ ಇಟ್ಟಿದ್ದೀವಿ ಅಂತಾ ಕಿಡಿಗೇಡಿ ಕಿರಾತಕರು ಮೇಲ್ ಮೂಲಕ ಹೇಳಿದ್ದಾರೆ. ಈ ಘಟನೆ ಮಕ್ಕಳ ಪೋಷಕರಿಗೆ ಕೂಡ ಭಾರಿ ಆತಂಕ ಮೂಡಿಸಿದ್ದು, ತಕ್ಷಣ ಶಾಲೆಗಳ ಬಳಿ ಓಡಿ ಬಂದು ತಮ್ಮ ತಮ್ಮ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ಹಾಗೇ ಹಲವು ಪೋಷಕರು ತಕ್ಷಣ ತಮ್ಮ ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಬೆದರಿಕೆ ಹಾಕಿದ್ದು ಯಾವ ಮೇಲ್ ಐಡಿ?
ರೋಡ್ ಕಿಲ್ ಆಟೊಮಿಕ್ ಎಂಬ ಹೆಸರಿನಲ್ಲಿ ಇದೀಗ ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಮಾಡಲಾಗಿದೆ. ಇನ್ನು ಬೆದರಿಕೆ ಮೇಲ್ ಬಂದ ಶಾಲೆಗಳಲ್ಲಿ ತಕ್ಷಣ ಪರಿಶೀಲನೆ ನಡೆಸಲಾಗಿದ್ದು, ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೊಂದು ಕಡೆ ಕರ್ನಾಟಕ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ ನಗರದಲ್ಲಿ ಕೂಡ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಇನ್ನು ಈ ವಿಚಾರ ತಿಳಿದ ತಕ್ಷಣ ಬಾಂಬ್ ಸ್ಕ್ವಾಡ್ ಸಿಬ್ಬಂದಿ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಈ ರೀತಿಯ ಘಟನೆಗಳ ಬಗ್ಗೆ ಮಕ್ಕಳ ಪೋಷಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications