ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್ ಉತ್ಪಾದನಾ ಘಟಕ

ಬೆಂಗಳೂರು ಫೆಬ್ರವರಿ 22: ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್ ಉತ್ಪಾದನಾ ಘಟಕವನ್ನು ಶೀಘ್ರ ಸ್ಥಾಪಿಸಲಾಗುವುದು ಎಂದು ಬೋಯಿಂಗ್ ಇಂಡಿಯಾ ಹಂಗಾಮಿ ಅಧ್ಯಕ್ಷ ಸುನೀಲ್ ತಿಳಿಸಿದ್ದಾರೆ.

ಬೆಂಗಳೂರಿಗೆ ಹತ್ತಿರವಿರುವ ದೇವನಹಳ್ಳಿಯಲ್ಲಿ ಕಂಪನಿಯು ಘಟಕ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಎಂಜಿನಿಯರಿಂಗ್ ಕ್ಯಾಂಪಸ್ ಸಹಿತ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, ಮುಂದಿನ ವರ್ಷದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.

ಬೋಯಿಂಗ್ ಕಂಪನಿಯು ಅಂತಾರಾಷ್ಟ್ರೀಯ ಉಪಾಧ್ಯಕ್ಷ ಮೈಕೆಲ್ ಕುಕ್ ಕಂಪನಿಯು ಐದನೇ ಪೀಳಿಗೆಯ ಯುದ್ಧವಿಮಾನವಾದ ಎಫ್‌/ಎ-18 ಸೂಪರ್ ಹಾರ್ನೆಟ್ ಏರ್‌ಕ್ರಾಫ್ಟ್‌ನ್ನು ತಯಾರಿಸಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಚ್‌ಎಎಲ್ ಹಾಗೂ ಮಹೀಂದ್ರ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಮುಂದಿನ ಮೂರು ವರ್ಷದಲ್ಲಿ ಮೊದಲ ವಿಮಾನ ಹೊರಬರಲಿದೆ.

Boeing will start production unit at Bengaluru

ಜಾಲಹಳ್ಳಿಯ ಐಎಎಫ್ ಸ್ಟೇಷನ್ ನಲ್ಲಿ ಪೈಲಟ್‌ಗಳ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ಇದಕ್ಕಾಗಿ 60 ಸಾವಿರ ಚದರಡಿ ವಿಸ್ತೀರ್ಣದ ಜಾಗವನ್ನು ಗುರುತು ಮಾಡಲಾಗಿದೆ. ವಿಶ್ವದ ಅತ್ಯುತ್ಕೃಷ್ಟ ಅತಿ ಭಾರದ ಚಿಕೂನ್ ಹೆಲಿಕಾಪ್ಟರ್ ಇತ್ತೀಚೆಗಷ್ಟೇ ಭಾರತಕ್ಕೆ ತಲುಪಿದೆ. ಮುಂಬರುವ ಮಾರ್ಚ್ ನಲ್ಲಿ ಮೊದಲ ಹಂತವಾಗಿ 4 ಹೆಲಿಕಾಪ್ಟರ್ ಹಸ್ತಾಂತರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+