ಉಕ್ರೇನ್‌ನಿಂದ್ ನವೀನ್ ಮೃತದೇಹ ಕರೆತರುವ ಕುರಿತು ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಮಾರ್ಚ್ 4: ಉಕ್ರೇನ್‌ನಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ನವೀನ್ ಶೇಖರಗೌಡ ಅವರ ಶವವನ್ನು ಕರ್ನಾಟಕಕ್ಕೆ ತರಲು ಅವರ ಕುಟುಂಬ ಕಾಯುತ್ತಿರುವಾಗ, ಬಿಜೆಪಿ ಶಾಸಕರೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ವಿಮಾನದಲ್ಲಿ ನವೀನ್ ಮೃತದೇಹ ತರಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ" ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ನವೀನ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಹಾವೇರಿಗೆ ಯಾವಾಗ ತರಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ, 'ಶವಪೆಟ್ಟಿಗೆಯ ಬದಲಿಗೆ ಸುಮಾರು ಎಂಟರಿಂದ 10 ಜನರಿಗೆ ವಿಮಾನದಲ್ಲಿ ಸ್ಥಳಾವಕಾಶವಾಗುತ್ತದೆ' ಎಂದು ಉತ್ತರಿಸಿದ್ದಾರೆ.
"ನವೀನ್ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಉಕ್ರೇನ್ ಯುದ್ಧ ವಲಯವಾಗಿದೆ ಮತ್ತು ಅದು ಎಲ್ಲರಿಗೂ ತಿಳಿದಿದೆ. ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಸಾಧ್ಯವಾದರೆ ದೇಹವನ್ನು ಮರಳಿ ತರಲಾಗುವುದು" ಎಂದು ಬೆಲ್ಲದ್ ಸುದ್ದಿಗಾರರಿಗೆ ತಿಳಿಸಿದರು.

"ಜೀವಂತವಾಗಿರುವವರನ್ನು ಮರಳಿ ಕರೆತರುವುದು ತುಂಬಾ ಸವಾಲಿನದ್ದಾಗಿದೆ. ಹೀಗಿರುವಾ ಮೃತ ದೇಹವು ವಿಮಾನದಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ ಎಂಬ ಕಾರಣದಿಂದ ಸತ್ತವರನ್ನು ಮರಳಿ ತರುವುದು ಹೆಚ್ಚು ಕಷ್ಟಕರವಾಗಿದೆ. ಮೃತದೇಹದ ಬದಲಿಗೆ ಎಂಟರಿಂದ 10 ಜನರಿಗೆ ಸ್ಥಳಾವಕಾಶ ನೀಡಿದಂತಾಗುತ್ತದೆ. ಮೃತ ದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ" ಎಂದು ಬಿಜೆಪಿ ಶಾಸಕ ಬೆಲ್ಲದ್ ಹೇಳಿದ್ದಾರೆ.
ಜೊತೆಗೆ ನವೀನ್ ಅವರ ಮೃತದೇಹವನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ನವೀನ್ ಅವರ ತಂದೆ ಶೇಖರಗೌಡ ಅವರು ಬುಧವಾರ ಸುದ್ದಿಗಾರರಿಗೆ ನವೀನ್ ದೇಹವನ್ನು "ಎರಡು ದಿನಗಳಲ್ಲಿ" ಮನೆಗೆ ತರಲಾಗುವುದು ಎಂದು ಸರ್ಕಾರದಿಂದ ಭರವಸೆ ನೀಡಲಾಗಿದೆ ಎಂದು ಹೇಳಿದ್ದರು. ಮಗನ ಶವವನ್ನು ಮನೆಗೆ ತರಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರಲ್ಲಿಯೂ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದರು. ಆದರೆ ಶಾಸಕರ ಈ ಹೇಳಿಕೆ ಸದ್ಯ ಆಕ್ರೋಶಕ್ಕೆ ಗುರಿಯಾಗಿದೆ.
ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ನವೀನ್ ಆಹಾರಕ್ಕಾಗಿ ಹೊರಬಂದಾಗ ಸರ್ಕಾರಿ ಕಟ್ಟಡದ ಮೇಲೆ ರಷ್ಯಾದ ಶೆಲ್ ದಾಳಿಗೆ ಬಲಿಯಾದರು. ಅವರು ಇತರ ವಿದ್ಯಾರ್ಥಿಗಳೊಂದಿಗೆ ಬಂಕರ್‌ನಲ್ಲಿ ತಂಗಿದ್ದರು ಮತ್ತು ಮಂಗಳವಾರ ಗಡಿಗೆ ರೈಲು ಹಿಡಿಯುವ ಮೊದಲು ಆಹಾರವನ್ನು ಸಂಗ್ರಹಿಸಲು ಹೊರಟಿದ್ದರು ಎಂದು ಅವರ ರೂಮ್‌ಮೇಟ್ ಹೇಳಿದ್ದಾರೆ.
ಉಕ್ರೇನ್-ರಷ್ಯಾ ನಡುವಿನ ಯುದ್ಧ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಕರುನಾಡು ಒಬ್ಬ ವಿದ್ಯಾವಂತ ಯುವಕನನ್ನು ಕಳೆದುಕೊಂಡಿದೆ. ಇದು ಯಾರಿದಂಲೂ ಭರಸಲಾಗದ ನಷ್ಟ. ಉಕ್ರೇನ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಹಾವೇರಿ ಮೂಲದ ನವೀನ್ (21) ರಷ್ಯಾ ದಾಳಿಗೆ ಬಲಿಯಾಗಿದ್ದಾನೆ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಕೊನೆ ಬಾರಿ ಮುಖವನ್ನಾದರು ನೋಡಬೇಕು ಎಂದು ಕುಟುಂಬ ಮರುಕ ವ್ಯಕ್ತಪಡಿಸುತ್ತಿದೆ. ಸರ್ಕಾರಕ್ಕೆ ಪರಿ ಪರಿಯಾಗಿ ಮನವಿ ಮಾಡಿಕೊಳ್ಳುತ್ತಿದೆ. ಈ ವೇಳೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಸರಿ ಇದ್ದಿದ್ದರೆ ನಮ್ಮ ಮಕ್ಕಳು ನಮ್ಮ ಕಣ್ಣು ಮುಂದೆ ಇರುತ್ತಿದ್ದರು ಎಂದು ತಂದೆ ನೋವು ತೋಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ತಂದೆ ಶೇಖರಗೌಡ, ನವೀನ್ ಮೃತದೇಹವನ್ನು ಕರೆತರಲು ಮನವಿ ಮಾಡಿದರು. ಪ್ರತಿಭಾವಂತರಿಗೆ ಇಲ್ಲಿ ಬೆಲೆ ಇಲ್ಲ. ಕೋಟಿಗೆ ಮಾತ್ರ ಇಲ್ಲಿ ಬೆಲೆ ಇರೋದು. ಶಿಕ್ಷಣ ವ್ಯವಸ್ಥೆ ಬದಲಾಗಿದೆ ಎಂದು ನಾವು ಅಂದುಕೊಂಡಿದ್ದೇವು. ಆದರೆ ಬದಲಾಗಿಲ್ಲ. ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಹೇಳುತ್ತಾರೆ. ಆದರೆ ಶಿಕ್ಷಣ ವ್ಯವಸ್ಥೆ ಹೇಗಿದೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು.
ಈ ಸಂದರ್ಭದಲ್ಲಿ ತಂದೆ ನವೀನ್ ಶೇಖರಗೌಡ ಮಾತನಾಡಿ, ಮಗನ ನಿಧನದ ನಂತರ ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದರೂ ರಾಜ್ಯದಲ್ಲಿ ಮೆಡಿಕಲ್ ಸೀಟು ಪಡೆಯಲು ಸಾಧ್ಯವಾಗಿಲ್ಲ, ಮೆಡಿಕಲ್ ಸೀಟು ಪಡೆಯಲು ಕೋಟ್ಯಂತರ ರೂಪಾಯಿ ನೀಡಿ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ವಿದೇಶದಲ್ಲಿ ಅದೇ ಶಿಕ್ಷಣ ಕಡಿಮೆ ಹಣಕ್ಕೆ ಸಿಗುತ್ತದೆ ಎಂದಿದ್ದಾರೆ. ತಮ್ಮ ಮಗನನ್ನು ಜೀವಂತವಾಗಿ ನೋಡಲಿಲ್ಲ ಕಡೇಪಕ್ಷ ಮೃತದೇಹವನ್ನಾದರೂ ತರಿಸಿಕೊಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications