ಬೆಂಗಳೂರು ಸಮಸ್ಯೆಗಳನ್ನು ಪಟ್ಟಿ ಮಾಡಿದ ಯುವಕರು
ಬೆಂಗಳೂರು, ಫೆ.3 : ಸಂಚಾರ ಸಮಸ್ಯೆ, ಟ್ರಾಫಿಕ್ ಜಾಮ್, ಒಳಚರಂಡಿ ಸಮಸ್ಯೆ, ಕಸದ ಸಮಸ್ಯೆ ಹೀಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಯುವಕರು ಪಟ್ಟಿ ಮಾಡಿದ್ದಾರೆ. ಸ್ಥಳೀಯ ವಾರ್ಡ್ ಸದಸ್ಯರೊಂದಿಗೆ ಸೇರಿ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬ ಯೋಜನೆಯನ್ನು ತಯಾರಿಸಿದರು. ಇದಕ್ಕೆ ವೇದಿಕೆಯಾಗಿದ್ದು "BNY Urban Action Internship 2014".
ಪ್ರೊ. ಎಂವಿ ರಾಜೀವ್ ಗೌಡ ಅವರ ಬೆಂಗಳೂರು ನೀಡ್ಸ್ ಯೂ ವತಿಯಿಂದ ಹಮ್ಮಿಕೊಂಡಿದ್ದ "BNY Urban Action Internship 2014" ನಲ್ಲಿ ಕೆಆರ್ ಪುರಂ, ಹೆಬ್ಬಾಳ, ಬ್ಯಾಟರಾನಪುರದ ಯುವಕರು ಇಂತಹ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿದರು. ಸಮಸ್ಯೆಗಳ ಬಗ್ಗೆ ಮೊದಲು ಚರ್ಚಿಸಿ ನಂತರ ಅವುಗಳನ್ನು ಪರಿಹಾರ ಮಾಡುವ ಯೋಜನೆ ರೂಪಿಸಿಸಲು ಬಿಎನ್ ವೈ ಈ ಕಾರ್ಯಕ್ರಮವನ್ನು ರೂಪಿಸಿದೆ.
ಪ್ರೊ.ಎಂವಿ ರಾಜೀವ್ ಗೌಡ ಅವರು 'Urban Action Internship 2014 ಮೂಲಕ ಯುವಕರಿಗೆ ತಮ್ಮ ವಾರ್ಡ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ಯುವಕರು ಮಾತ್ರವಲ್ಲದೇ ವಾರ್ಡ್ ನ 100ಕ್ಕೂ ಅಧಿಕರ ನಿವಾಸಿಗಳು ಪಾಲ್ಗೊಳ್ಳುತ್ತಾರೆ. ಬಿಎನ್ ವೈ ಕಾರ್ಯಕ್ರಮದ ಕುರಿತ ಮಾಹಿತಿ ಚಿತ್ರಗಳಲ್ಲಿ.

ಬೆಂಗಳೂರು ನೀಡ್ಸ್ ಯೂ ವತಿಯಿಂದ ಕಾರ್ಯಕ್ರಮ
ಪ್ರೊ. ಎಂವಿ ರಾಜೀವ್ ಗೌಡ ಅವರ ಬೆಂಗಳೂರು ನೀಡ್ಸ್ ಯೂ ವತಿಯಿಂದ "BNY Urban Action Internship 2014" ಕಾರ್ಯಕ್ರಮ ನಡೆಸಲಾಗುತ್ತದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳನ್ನು ಪರಿಹಾರ ಮಾಡಲು ಯೋಜನೆ ರೂಪಿಸಿ, ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಅವುಗಳನ್ನು ಪರಿಹಾರ ಮಾಡಲು ಪ್ರಯತ್ನಿಸಲಾಗುತ್ತದೆ.

ಎಲ್ಲಿ ನಡೆಯಿತು ಈ ಕಾರ್ಯಕ್ರಮ
ಭಾನುವಾರ ಬೆಂಗಳೂರು ಉತ್ತರ ಭಾಗದ ಕೆಆರ್ ಪುರಂ, ಹೆಬ್ಬಾಳ, ಬ್ಯಾಟರಾನಪುರದದಲ್ಲಿ "BNY Urban Action Internship 2014" ಹಮ್ಮಿಕೊಳ್ಳಲಾಗಿತ್ತು.

ಪ್ರಮುಖ ಸಮಸ್ಯೆಗಳು
"BNY Urban Action Internship 2014" ನಲ್ಲಿ ಸಂಚಾರ ಸಮಸ್ಯೆ, ಟ್ರಾಫಿಕ್ ಜಾಮ್, ಒಳಚರಂಡಿ ಸಮಸ್ಯೆ, ಕಸದ ಸಮಸ್ಯೆ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಯುವಕರು ತಮ್ಮ ವಾರ್ಡ್ ಗಳಲ್ಲಿ ಇಂತಹ ಸಮಸ್ಯೆ ಇದೆ ಎಂದು ಚರ್ಚಿಸಿ ಅವುಗಳನ್ನು ಪರಿಹಾರ ಮಾಡುವ ಕುರಿತು ಯೋಜನೆ ರೂಪಿಸಿದರು.

ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಿದ್ದರು
"BNY Urban Action Internship 2014" ಕಾರ್ಯಕ್ರಮದಲ್ಲಿ ಯುವಕರು, ಸ್ಥಳೀಯ ವಾರ್ಡ್ ನ 100ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿದ್ದರು. ಸ್ಥಳೀಯ ಬಿಬಿಎಂಪಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿದ್ದರು, ವಾರ್ಡ್ ನ ನೀಲನಕ್ಷೆ ತಯಾರಿಸಿ ಅದರ ಮೂಲಕ ಯೋಜನೆಗಳನ್ನು ರೂಪಿಸಲಾಗುತ್ತದೆ.

ಅರ್ಬಲ್ ಆಕ್ಷನ್ ಗೂಪ್ ಸ್ಥಾಪನೆ
ಕಾರ್ಯಕ್ರಮದಲ್ಲಿ ವಾರ್ಡ್ ನಲ್ಲಿರುವ ಎಲ್ಲಾ ಜನರನ್ನು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆರ್ಬನ್ ಆಕ್ಷನ್ ಗ್ರೂಪ್ ಸ್ಥಾಪನೆ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿದ್ದವರು
ತಜ್ಞರಾದ ಗುರುಪ್ರಸಾದ್, ಬ್ಯಾಟರಾಯನಪುರ ಬಿಬಿಎಂಪಿ ಸದಸ್ಯರಾದ ಇಂದಿರಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ಯುವ ಕಾಂಗ್ರೆಸ್ ಸದಸ್ಯರಾದ ನರೇಶ್ ನರಸಿಂಹ ಮುಂತಾದವರು ಭಾಗವಹಿಸಿದ್ದರು.












Click it and Unblock the Notifications