ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಜುಲೈ 09 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಬಸ್ ಓಡಿಸಲು ಮುಂದಾಗಿದೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ನಗರದ ವಿವಿಧ ಪ್ರದೇಶಗಳಿಂದ ಆಗಸ್ಟ್‌ನಲ್ಲಿ ಹೆಚ್ಚುವರಿ ಬಸ್ಸುಗಳು ಸಂಚಾರ ಆರಂಭಿಸಲಿವೆ.
ಸದ್ಯ, ನಗರದ 9 ವಿವಿಧ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ 70 ವಾಯು ವಜ್ರ ಬಸ್ಸುಗಳು ಸಂಚಾರ ನಡೆಸುತ್ತಿವೆ. ಸುಮಾರು 480 ಟ್ರಿಪ್‌ಗಳಲ್ಲಿ ಬಸ್ಸುಗಳು ಸಂಚಾರ ನಡೆಸುತ್ತಿವೆ. ಆದರೆ, ಬೇಡಿಕೆ ಹೆಚ್ಚಾಗುತ್ತಿರುವುದರಿಂದ 10 ಹೆಚ್ಚುವರಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. [ಬಿಎಂಟಿಸಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ]

ಐಟಿ ಕಂಪನಿಗಳು ಹೆಚ್ಚಾಗಿರುವ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಬೇಕು ಎಂಬ ಬೇಡಿಕೆ ಬಂದಿದೆ. ಬೇಡಿಕೆಗೆ ಸ್ಪಂದಿಸಿರುವ ಬಿಎಂಟಿಸಿ, ಆಗಸ್ಟ್‌ನಿಂದ ಬಸ್ ಸಂಚಾರ ಆರಂಭಿಸಲಿದೆ. [ವೊಲ್ವೋ ಪಾಸ್ ದರ ಹೆಚ್ಚಳ]
ಬಸ್ಸುಗಳಿಗೆ ಪೈಪೋಟಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒದಗಿಸುವ ಸೇವೆಯಲ್ಲಿ ಬಿಎಂಟಿಸಿ ಭಾರೀ ಪೈಪೋಟಿ ಎದುರಿಸುತ್ತಿದೆ. ಓಲಾ ಮತ್ತು ಊಬರ್ ಟ್ಯಾಕ್ಸಿಗಳು ದರ ಸಮರದ ಮೂಲಕ ಬಸ್ಸುಗಳಿಗೆ ಪೈಪೋಟಿ ನೀಡುತ್ತಿವೆ. [ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]
ಮತ್ತೊಂದು ಕಡೆ ಖಾಸಗಿ ಟ್ಯಾಕ್ಸಿಗಳು, ಖಾಸಗಿ ಮಿನಿ ಬಸ್ಸುಗಳು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರನ್ನು ಸೆಳೆಯುತ್ತಿವೆ. ಪ್ರತಿನಿತ್ಯ 130 ಸಾಮಾನ್ಯ ಬಸ್ ಮತ್ತು 70 ಹವಾನಿಯಂತ್ರಿತ ಬಸ್ಸುಗಳು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುತ್ತಿವೆ.












Click it and Unblock the Notifications