ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಏರ್‌ಪೋರ್ಟ್‌ ಬಸ್‌ಗಳನ್ನು ಆನ್‌ಲೈನ್‌ ಮೂಲಕವೂ ಬುಕ್ ಮಾಡಬಹುದು

|
Google Oneindia Kannada News

ಬೆಂಗಳೂರು, ನವೆಂಬರ್ 21:ಇನ್ನುಮುಂದೆ ಏರ್‌ಪೋರ್ಟ್‌ ಬಸ್‌ಗಳನ್ನು ಆನ್‌ಲೈನ್ ಮೂಲಕವೂ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿಕೊಟ್ಟಿದೆ.

ಟಿಕೆಟ್ ದರದಿಂದ ಕಳೆದ ಜನವರಿ ತಿಂಗಳಿನಲ್ಲಿ ರೂ.9.48 ಕೋಟಿ ಆದಾಯ ಗಳಿಸಿದ್ದ ನಿಗಮವು ಅಕ್ಟೋಬರ್ ನಲ್ಲಿ ರೂ.3.22 ಕೋಟಿಗೆ ಕುಸಿದಿದೆ. ಇದೀಗ ವಿಮಾನಗಳಲ್ಲಿ ಪ್ರಯಾಣಿಸುತ್ತಿರುವ ಜನರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಬಸ್ ಗಳ ಸೇವೆ ಬಳಕೆ ಕೂಡ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕಳೆದ ವರ್ಷದ ಬಿಎಂಟಿಸಿ ಪಾಸ್ ಮಾನ್ಯವಿದ್ಯಾರ್ಥಿಗಳ ಕಳೆದ ವರ್ಷದ ಬಿಎಂಟಿಸಿ ಪಾಸ್ ಮಾನ್ಯ

2008ರ ಮೇ ತಿಂಗಳಿನಲ್ಲಿ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ವಾಯು ವಜ್ರ ಬಸ್‌ಗಳನ್ನು ಆನ್‌ಲೈನ್ನ್‌ನಲ್ಲಿ ಬುಕ್ ಮಾಡಲು ಅವಕಾಶ ನೀಡಲಾಗಿದೆ.

BMTC To Launch Online Booking Facility For Airport Buses

ಕೊರೊನಾ ಪರಿಣಾಮ ಮಾರ್ಚ್ 23ರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್‌ಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್.3ರಿಂದ ಮರಳಿ ಸೇವೆಗಳನ್ನು ಆರಂಭಿಸಲಾಗಿತ್ತು. ಲಾಕ್‌ಡೌನ್‌ಗೂ ಮೊದಲು ನಿತ್ಯ 768 ಟ್ರಿಪ್‌ಗಳು ತೆರಳುತ್ತಿದ್ದ ಬಸ್ ಗಳು ಇದೀಗ 335 ಟ್ರಿಪ್ ಗಳನ್ನು ನಡೆಯುತ್ತಿವೆ.

ಮುಂದಿನ ವಾರ ಈ ಸೇವೆ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿವೆ. ಪ್ರಯಾಣದ ದಿನದ ಒಂದು ತಿಂಗಳಿಗೂ ಮೊದಲು ಬುಕಿಂಗ್ ಆರಂಭಿಸಲಾಗುತ್ತದೆ. ನಿರ್ಗಮನಕ್ಕೂ 30 ನಿಮಿಷಗಳಿಗೂ ಮುನ್ನ ಬುಕಿಂಗ್ ಕ್ಲೋಸ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಅವತಾರ್ ಪ್ಲಾಟ್‌ಫಾರ್ಮ್‌ನಲ್ಲಿ ಬುಕಿಂಗ್ ಆರಂಭಿಸಲಾಗುತ್ತದೆ. ಮುಂಗಡ ಟಿಕೆಟ್ ಖರೀದಿಸಿದರೆ ಪ್ರಯಾಣಿಕರು ಬಸ್‌ಗಾಗಿ ಕಾಯುವ ಅವಕಾಶವಿರುವುದಿಲ್ಲ. ವಿಮಾನ ನಿಲ್ದಾಣಕ್ಕೆ ಸೂಕ್ತ ಸಮಯಕ್ಕೆ ಹೋಗುತ್ತದೆಯೇ ಇಲ್ಲವೇ, ಬಸ್ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಕೂಡ ಪ್ರಯಾಣಿಕರಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಕ್ಯಾಬ್‌ಗಳಿಗೆ ಹೋಲಿಸಿದರೆ ಅಗ್ಗದ ವೆಚ್ಚದಿಂದಾಗಿ ವಿಮಾನ ನಿಲ್ದಾಣದ ಬಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಸಾಮಾನ್ಯವಾಗಿ ಕ್ಯಾಬ್'ಗಳು ವಿಮಾನ ನಿಲ್ದಾಣಕ್ಕೆ ತೆರಳಲು ರೂ.800ರಿಂದ ರೂ.2,000ವರೆಗೂ ಪಡೆಯುತ್ತವೆ. ಆದರೆ, ಬಸ್ ಗಳಲ್ಲಿ ರೂ.100-320 ಆಗುತ್ತದೆ.

2020 ರ ಜನವರಿಯಲ್ಲಿ ಪ್ರತಿದಿನ 15,200 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಕ್ಟೋಬರ್‌ನಲ್ಲಿ ಈ ಸಂಖ್ಯೆ ದಿನಕ್ಕೆ 4,603 ಇಳಿದಿದೆ.

Recommended Video

26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada

ವೈಟ್‌ಫೀಲ್ಡ್ ಬನಶಂಕರಿ, ಟಿಟಿಎಂಸಿ ಮತ್ತು ಕೆ ಆರ್ ಪುರಂನ ವಾಯು ವಜ್ರ ಮಾರ್ಗಗಳಲ್ಲಿ ಹೆಚ್ಚು ಜನರು ಪ್ರಯಾಣಿಸದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಯುವಜ್ರ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

English summary
For the first time since its launch in May 2008, the Vayu Vajra buses of the Bangalore Metropolitan Transport Corporation will be opened up for online reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X