ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರ್ಶಿನಿಗೆ ಉತ್ತಮ ಸ್ಪಂದನೆ: ಹೆಚ್ಚುವರಿ ಬಸ್‌ಗಳನ್ನು ಆರಂಭಿಸಲಿದೆ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಏ.5: ಬೆಂಗಳೂರು ದರ್ಶಿನಿ ಬಸ್ಸಿಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತ ಬಳಿಕ ಇನ್ನಷ್ಟು ಹೊಸ ಬಸ್‌ಗಳ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿದೆ.

ಲೋಕಸಭಾ ಚುನಾವಣೆ ಮುಗಿದ ಬಳಿಕ ಹೊಸ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಇದೀಗ ಬೆಂಗಳೂರಲ್ಲಿ ಎರಡು ಎಸಿ ಕೋಚ್ ಬಸ್‌ಗಳು ಸಂಚರಿಸುತ್ತಿದೆ. ಬೆಳಗ್ಗೆ 8.30ಕ್ಕೆ ಸಂಚಾರ ಆರಂಭಿಸಲಿದ್ದು ಸಂಜೆ 6 ಗಂಟೆಯವರೆಗೆ ಟ್ರಿಪ್ ಮುಕ್ತಾಯಗೊಳ್ಳಲಿದೆ. ಒಟ್ಟು 41 ಸೀಟುಗಳ ಬಸ್‌ ಇದಾಗಿದೆ.

ಬಿಎಂಟಿಸಿ ಚಾಲಕ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದಿಂದಲ್ಲ ಬಿಎಂಟಿಸಿ ಚಾಲಕ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದಿಂದಲ್ಲ

ದಸರಾ, ಹೊಸ ವರ್ಷ, ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಈ ಬಾರಿ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು, ಪ್ರತಿನಿತ್ಯ ಕನಿಷ್ಠ 150 ಮಂದಿ ಸಂಚರಿಸುತ್ತಾರೆ. ಮುಂಬರುವ ದಿನಗಳಲ್ಲಿ ಇನ್ನೂ 4-5 ಹೆಚ್ಚುವರಿ ಬಸ್‌ ಓಡಿಸಲು ಮುಂದಾಗಿದೆ.

BMTC to introduce new Darshini buses in Bengaluru

ದರ್ಶಿನಿ ಬಸ್ ವಿಧಾನಸೌಧ, ಟಿಪ್ಪು ಸುಲ್ತಾನ್ ಅರಮನೆ, ಕರ್ನಾಟಕ ಸಿಲ್ಕ್ ಎಂಪೋರಿಯಮ್, ಕಬ್ಬನ್ ಪಾರ್ಕ್, ಸರ್ಕಾರಿ ವಸ್ತು ಸಂಗ್ರಹಾಲಯವನ್ನು ತೋರಿಸಲಾಗುತ್ತಿದೆ. ಮಕ್ಕಳಿಗೆ 300, ವಯಸ್ಕರಿಗೆ 400 ರೂ ದರ ಇದೆ. ಟ್ರಿಪ್ ಭಾಷಾ ಆಯ್ಕೆಯನ್ನು ಕೂಡ ನೀಡಿದೆ.

English summary
After recieving a good response from tourists for the Bengaluru Darshini bus services, BMTC is all set to its Darshini fleet this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X