ಪ್ರಯಾಣಿಕರೇ ಗಮನಿಸಿ: ನೈಸ್ ರೋಡ್ ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ

ಬೆಂಗಳೂರು, ಜುಲೈ 17: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣ ದರ ಏರಿಕೆಯಾಗಲಿದೆ. ಎಲ್ಲಾ ಮಾದರಿ ಬಸ್‌ಗಳಲ್ಲಿ ಅಲ್ಲ, ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳಿಗೆ ಮಾತ್ರ ಅನ್ವಯವಾಗುವಂತೆ ದರ ಏರಿಕೆಯಾಗಲಿದೆ.

ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಜುಲೈ 1ರಿಂದ ಅನ್ವಯವಾಗುವಂತೆ ನೈಸ್ ರಸ್ತೆಯ ಟೋಲ್‌ ದರದಲ್ಲಿ ಏರಿಕೆಯಾಗಿದೆ. ಆದ್ದರಿಂದ ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳ ದರವೂ ಹೆಚ್ಚಾಗಲಿದೆ.

BMTC To Hike NICE Road Bus Fares Soon

ಸುಮಾರು 170 ಟ್ರಿಪ್‌ಗಳಲ್ಲಿ ಬಿಎಂಟಿಸಿ ಬಸ್‌ಗಳು ನೈಸ್ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ. ಈ ಬಸ್‌ಗಳ ಟಿಕೆಟ್ ದರದಲ್ಲಿ ಟೋಲ್ ದರವೂ ಸೇರಿದೆ. ಈಗ ಟೋಲ್‌ ದರ ಹೆಚ್ಚಾಗಿದ್ದರಿಂದ ಟಿಕೆಟ್ ದರವನ್ನು ಬಿಎಂಟಿಸಿ ಏರಿಕೆ ಮಾಡಲಿದೆ.

ಸಚಿವರು ಹೇಳಿದ್ದೇನು?; ಬಿಎಂಟಿಸಿ ಮಾದಾವರ-ಎಲೆಕ್ಟ್ರಾನಿಕ್ ಸಿಟಿ ನಡುವೆ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ನೈಸ್ ರಸ್ತೆ ಮೂಲಕ ಬಸ್‌ಗಳನ್ನು ಓಡಿಸುತ್ತಿದೆ. 21 ಬಸ್‌ಗಳು 170 ಟ್ರಿಪ್ ಸಂಚಾರ ನಡೆಸುತ್ತದೆ. ಪ್ರಸ್ತುತ ಟಿಕೆಟ್ ದರ 60 ರೂ.ಗಳು, ಇದರಲ್ಲಿ 25 ರೂ. ಟೋಲ್‌ ದರವೂ ಸೇರಿದೆ.

ಬಸ್‌ ನೈಸ್ ರಸ್ತೆಯಲ್ಲಿ ಒಂದು ಟ್ರಿಪ್ ಸಂಚಾರ ನಡೆಸಲು 675 ರೂ. ಟೋಲ್ ನೀಡಬೇಕಿತ್ತು. ಈಗ ಜುಲೈ 1ರಿಂದ ಟೋಲ್ ದರ ಹೆಚ್ಚಳವಾಗಿರುವ ಕಾರಣ ಒಂದು ಬಸ್ ಟ್ರಿಪ್‌ಗೆ 785 ರೂ. ನೀಡಬೇಕಿದೆ. ಆದ್ದರಿಂದ ಟಿಕೆಟ್ ದರವನ್ನು 5 ರೂ. ಏರಿಕೆ ಮಾಡುವ ನಿರೀಕ್ಷೆಇದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾತನಾಡಿದ್ದಾರೆ, "ನೈಸ್ ರೋಡ್ ಟೋಲ್ ಮೂಲಕ ಸಂಚಾರ ನಡೆಸುವ ಬಿಎಂಟಿಸಿ ಬಸ್‌ಗಳ ಪ್ರಯಾಣ ದರವನ್ನು ಏರಿಕೆ ಮಾಡಲಾಗುತ್ತದೆ. ಮಾದಾವರ-ಎಲೆಕ್ಟ್ರಾನಿಕ್ ಸಿಟಿ ನಡುವಿನ ಮಾರ್ಗದ ಟಿಕೆಟ್ ದರ ಹೆಚ್ಚಳವಾಗಲಿದೆ" ಎಂದು ಸಚಿವರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜುಲೈ 1ರಿಂದ ಜಾರಿಗೆ ಬರುವಂತೆ ಟೋಲ್ ದರಗಳನ್ನು ಪರಿಷ್ಕರಣೆ ಮಾಡಿತ್ತು. ಬಳಿಕ ನೈಸ್ ರಸ್ತೆ ಸಹ ಟೋಲ್ ದರಗಳನ್ನು ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದರಿಂದಾಗಿ ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳ ಪ್ರಯಾಣದರವನ್ನು ಏರಿಕೆ ಮಾಡಿ ಟೋಲ್ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ.

ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ಬಿಎಂಟಿಸಿ ಬಸ್‌ಗಳಿಗೆ ಸಹ ಮಾಸಿಕ ಪಾಸುಗಳನ್ನು ಪರಿಚಯಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಾನಿಕ್ ಸಿಟಿಯ ಐಟಿ-ಬಿಟಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಾಗೂ ಸದರಿ ವಲಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಸ್ ರಸ್ತೆಯ ಮೂಲಕ ಬಸ್‌ ಓಡಿಸುತ್ತಿದೆ.

ಸಾಮಾನ್ಯ ಮಾಸಿಕ ಪಾಸು ದರ ಟೋಲ್ ಶುಲ್ಕ ಒಳಗೊಂಡಂತೆ ರೂ. 2000. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ಸಂಸ್ಥೆಯ ಇತರ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ನೈಸ್ ರಸ್ತೆಯನ್ನು ಹೊರತುಪಡಿಸಿ, ಇತರೆ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಅನ್ವಯಿಸುವ ಟೋಲ್ ಶುಲ್ಕ ಹಾಗೂ ಅನ್ವಯವಾಗುವ ಇತರ ಶುಲ್ಕಗಳನ್ನು ಪಾವತಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+