• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಂಟಿಸಿ ಬಸ್‌ಪಾಸ್ ಇನ್ನು ಇವಿಎಂ ಯಂತ್ರದಲ್ಲಿ ಮಾತ್ರ ಲಭ್ಯ

|

ಬೆಂಗಳೂರು, ನವೆಂಬರ್ 12: ಬಿಎಂಟಿಸಿ ನಿತ್ಯ ಬಸ್‌ಪಾಸುಗಳು ಇನ್ನು ಇವಿಯಂ( ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್) ಮೂಲಕವೇ ದೊರೆಯಲಿದೆ. ಮುಂಚಿತವಾಗಿಯೇ ಮುದ್ರಿಸಿದ ಪಾಸ್‌ಗಳ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಸಿಬ್ಬಂದಿ ವೆಚ್ಚಕ್ಕೆ ಕಡಿವಾಣ ಹಾಕಲು ಈ ಯೋಜನೆಯನ್ನು ರೂಪಿಸಲಾಗಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಈ ಯೋಜನೆ ಶೀಘ್ರ ಜಾರಿಗೆ ಬರಲಿದ್ದು, ನಿರ್ವಾಹಕರು 70ರೂ ಹಾಗೂ 140ರೂ ಮೊತ್ತದ ಪಾಸುಗಳನ್ನು ಇಟಿಎಂ ಮೂಲಕವೇ ವಿತರಣೆ ಮಾಡಲಿದ್ದಾರೆ. ಜೂನ್ ನಲ್ಲಿ ಘಟಕ 28ರಲ್ಲಿ ಪ್ರಾಯೋಗಿಕವಾಗಿ ಇಟಿಎಂ ಮೂಲಕ ನಿತ್ಯದ ಪಾಸ್ ಪಡೆಯಬಹುದು.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಇಟಿಎಂ ಮೂಲಕ ಪಾಸ್ ವಿತರಿಸುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಫೋಟೊ ಇರುವ ಗುರುತಿನ ಚೀಟಿ ತೋರಿಸಿ ಪಾಸ್ ತೆಗೆದುಕೊಳ್ಳಬೇಕು. ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಪಿಡಿಎಫ್ ಮಾದರಿಯಲ್ಲಿರುವ ಗುರುತಿನ ಚೀಟಿ ತೋರಿಸಿಯೂ ಪಾಸ್ ಪಡೆಯಬಹುದು.

ನಿತ್ಯದ ಬಸ್ ಪಾಸ್ ಕೊಳ್ಳಲು ಗುರುತಿನ ಚೀಟಿ ಕಡ್ಡಾಯಗೊಳಿಸಿದ ಬಳಿಕ ಬಿಎಂಟಿಸಿಗೆ ವಾರ್ಷಿಕ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಗುರುತಿನ ಚೀಟಿ ಇಲ್ಲದಿರುವ ಪ್ರಯಾಣಿಕರಿಗೆ ಪಾಸ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಂಸ್ಥೆಗೆ ನಷ್ಟವಾಗುವ ಸಾಧ್ಯತೆ ಇದೆ.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

ಗುರುತಿನ ಚೀಟಿ ಸಂಖ್ಯೆ, ದಿನ ಸೇರಿ ಹೆಚ್ಚಿನ ಮಾಹಿತಿ ಮುದ್ರಿತವಾಗುವುದರಿಂದ ದುರುಪಯೋಗ ಕಡಿಮೆ, ಥರ್ಮಲ್ ಇಂಕ್‌ನಲ್ಲಿ ಮಾಹಿತಿ ಮುದ್ರಿಸುವುದರಿಂದ ಕಡಿಮೆ ಅವಧಿ ಬಾಳಿಕೆ. 24 ಗಂಟೆ ನಂತರ ಇಂಕ್ ಕ್ರಮೇಣ ಮಾಸಿ ಹೋಗುತ್ತದೆ.

English summary
BMTC has decided to distribute daily bus pass through Electronic Ticketing Machine to curb duplicate passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X