BMTC Good News: ಮೆಜೆಸ್ಟಿಕ್-ನೆಲಮಂಗಲ ನಡುವೆ ಬಿಎಂಟಿಸಿ ವಜ್ರ ಬಸ್ ಸೇವೆ ಆರಂಭ: ಇಲ್ಲಿದೆ ಮಾರ್ಗ, ಸಮಯಗಳ ವಿವರ
BMTC Good News: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿ ಆಗಿರುವ ಬಿಎಂಟಿಸಿ ಪ್ರಯಾಣಕರ ಅನುಕೂಲತೆಗೆ ತಕ್ಕಂತೆ ಆಗಾಗ ಹೊಸ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಒದಗಿಸುತ್ತಲೇ ಬಂದಿದೆ. ಹಾಗೆಯೇ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನವೆಂಬರ್ 3 ಸೋಮವಾರದಿಂದ ಈ ಮಾರ್ಗಗಳಲ್ಲಿ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್‌ಗಳು ಓಡಿಸಲು ನಿರ್ಧಾರ ಮಾಡಿದೆ. ಹಾಗಾದ್ರೆ, ಎಲ್ಲೆಲ್ಲಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಒಂದು ದಿನ ಇಲ್ಲ ಅಂದ್ರೆ, ನಗರದ ಜನರಿಗೆ ತುಂಬಾ ಸಮಸ್ಯೆಯಾಗುವುದಂತೂ ಖಂಡಿತ. ಪ್ರತಿನಿತ್ಯ ಏನಿಲ್ಲ ಅಂದ್ರೂ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಇದೀಗ ಪ್ರಯಾಣಿಕರಿಗೆ ಬಿಎಂಟಿಸಿ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.

ಮೆಜೆಸ್ಟಿಕ್‌ನಿಂದ ನೆಲಮಂಗಲ ನಡುವೆ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್‌ಗಳು ನವೆಂಬರ್ 3 ರಿಂದ ಸಂಚಾರ ಮಾಡಲಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್-ನೆಲಮಂಗಲ ನಡುವೆ ಹೊಸ ಮಾರ್ಗ ಆರಂಭಿಸಲಾಗಿದೆ. 30 ನಿಮಿಷ ಅಂತರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಎಲ್ಲಿಂದ ಎಲ್ಲಿಗೆ ಸಂಚಾರ?
* ಕೆಂಪೇಗೌಡ ಬಸ್ ನಿಲ್ದಾಣ - ನೆಲಮಂಗಲ ಬಸ್ ನಿಲ್ದಾಣ
* ಮಾರ್ಗ ಸಂಖ್ಯೆ - ವಿ 258 ಸಿ
* ಬಸ್ ಮಾದರಿ - ನೂತನ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್
ಇನ್ನೂ ಬಸ್‌ಗಳು ಸೆಂಟ್ರಲ್ ಟಾಕೀಸ್, ಮಲ್ಲೇಶ್ವರ 8ನೇ ಕ್ರಾಸ್, ಗೋವರ್ಧನ ಟಾಕೀಸ್, ಗೊರಗುಂಟೆಪಾಳ್ಯ, ಅರಶಿನಕುಂಟೆಯಲ್ಲಿ ನಿಲುಗಡೆ ಆಗಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 6, 6.40, 7.10, 7.40, 8.20, 8.50, 9.30, 10.05, 10.35, 11.05, 12.05, ಮಧ್ಯಾಹ್ನ 1.05, 2.40, 3.30, ಸಂಜೆ 4.00, 4.30, 5.00, 5.30, 6.00, 6.50, 7.40, ರಾತ್ರಿ 8.40ಕ್ಕೆ ಹೊರಡಲಿದೆ.
ಮಾರ್ಗ ನೆಲಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 7.35, 8.10, 8.45, 9.15, 9.55, 10.25, 11.10, 11.40, ಮಧ್ಯಾಹ್ನ 12.10, 12.40, 2.00, 3.00, ಸಂಜೆ 4.20, 5.05, 5.35, 6.05, 6.35, 7.10, ರಾತ್ರಿ 8.00, 8.40, 9.20, 10 ಗಂಟೆಗೆ ಹೊರಡಲಿದೆ. ಹೀಗೆ ಬಿಎಂಟಿಸಿ ನಗರದ ಪ್ರಯಾಣಿಕೆ ಅನುಕೂಲಕ್ಕೆ ತಕ್ಕಂತೆ ಆಗಾಗ ಹೊಸ ಮಾರ್ಗಗಳಲ್ಲಿ ಬಸ್ ಸೇವೆಯನ್ನು ಕಲ್ಪಿಸುತ್ತಲೇ ಬಂದಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗುತ್ತಿದೆ. ಇನ್ನೂ ಸಹ ಕೆಲವೆಡೆ ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಆಗ್ರಹಗಳು ಕೇಳಿಬರುತ್ತಲೇ ಇವೆ. ಇವುಗಳನ್ನು ಬಿಎಂಟಿಸಿ ನಿಭಾಯಿಸುತ್ತಲೇ ಇದೆ.












Click it and Unblock the Notifications