BMTC: 3,000 ಬಿಎಂಟಿಸಿ ಬಸ್‌ಗಳ ವೇಳಾಪಟ್ಟಿ ಪರಿಷ್ಕರಣೆ: ಮಾಹಿತಿ ಇಲ್ಲಿದೆ

BMTC: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣಿಕರನ್ನು ಅವರು ತಲುಪಬೇಕಾದ ಗಮ್ಯಸ್ಥಾನಕ್ಕೆ ಹೊತ್ತೊಯ್ಯುತ್ತವೆ ಈ ಬಸ್‌ಗಳು. ಇನ್ನು ಇವುಗಳ ಚಾಲಕರು, ನಿರ್ವಾಕರಂತೂ ಕೆಲಸದ ಅವಧಿ ಮುಗಿಯುವವರೆಗೂ ಕೆಲ ಪ್ರಯಾಣಿಕರು ಕೊಡುವ ಕಾಟಗಳನ್ನೆಲ್ಲಾ ಸಹಿಸಿಕೊಂಡು ಕರ್ತವ್ಯ ನಿರ್ಹಿಸುತ್ತಲಿದ್ದಾರೆ. ಮತ್ತೊಂದೆಡೆ, ಕೆಲಸದ ಅವಧಿ ಕೂಡ ಹೆಚ್ಚಿದ್ದು, ಒತ್ತಡ ಬಿದ್ದಾಂತಾಗಿದೆ. ಇದೀಗ ಇದನ್ನು ತಪ್ಪಿಸಲು ಬಿಎಂಟಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಅಪಘಾತಗಳ ಸಂಖ್ಯೆ ಹೆಚ್ಚಗುತ್ತಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಗಳು ಸಂಭವಿಸಿ ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

BMTC Revises Schedules of 3 000 Buses Know details

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತ ಮತ್ತು ಸಾವುಗಳ ಸಂಖ್ಯೆ ಹೆಚ್ಚಳ ಆಗುತ್ತಲಿದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸಾರಿಗೆ ಸಂಸ್ಥೆ ಅಪಘಾತಗಳನ್ನು ನಿತಂತ್ರಣಕ್ಕೆ ತರಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವತ್ತ ಗಮನಹರಿಸಿದೆ. ಚಾಲಕರ ಮೇಲಿನ ಒತ್ತಡ ಕಡಿಮೆಗೊಳಿಸಲು ಬಿಎಂಟಿಸಿ ಸುಮಾರು 3,000 ಬಸ್ ಮಾರ್ಗಗಳ ವೇಳಾಪಟ್ಟಿಯನ್ನ ಪರಿಷ್ಕರಣೆಗೊಳಿಸಿದೆ.

ಚಾಲಕರ ಮೇಲಿನ ಒತ್ತಡದಿಂದಲೇ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಕೆಲಸದ ಸಮಯದಲ್ಲಿ ಬದಲಾವಣೆ ಇಲ್ಲದಿರುವುದು ಹಾಗೂ ಕರ್ತವ್ಯದ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಚಾಲಕರಿಗೆ ಒತ್ತಡ ಹೆಚ್ಚಾಗುವಂತೆ ಮಾಡಿದೆ ಎಂದು ಚಾಲಕರು ಹಾಗೂ ಕಾರ್ಮಿಕ ಸಂಘಟನೆಗಳ ಆರೋಪವಾಗಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿದ್ದಾರೆ. ಸಾರಿಗೆ ಕಾರ್ಮಿಕರನ್ನು ನಿಯಂತ್ರಿಸುವ 1961ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ ಪ್ರಕಾರ ಚಾಲಕನಿಗೆ ಕೇವಲ ಎಂಟು ಗಂಟೆಗಳ ಕೆಲಸ ಮಾಡಿಸಬೇಕು. ಆದರೂ ಚಾಲಕರು ಅವರಿಗೆ ನಿಗದಿಪಡಿಸಿದ ಟ್ರಿಪ್‌ಗಳನ್ನು ಪೂರ್ಣಗೊಳಿಸಲು ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮಾರ್ಗಗಳ ಚಾಲನೆ ಸಮಯ ಹೆಚ್ಚಳ ಆಗುತ್ತಿದ್ದು, ಇದರಿಂದ ಕರ್ತವ್ಯದ ಸಮಯ ಕೂಡ ಹೆಚ್ಚಾಗುತ್ದಿದೆ. ಆದ್ದರಿಂದ ಕೆಲಸದ ಸಮಯ 8 ಗಂಟೆಗಳಿಗೂ ಹೆಚ್ಚು ಆದ್ರೆ, ಚಾಲಕನಿಗೆ ಪರಿಹಾರ ಕೊಡಬೇಕು. ಆದರೆ, ನಿಗಮ ಸಮಯದ ಲೆಕ್ಕವನ್ನು ಪಕ್ಕಕ್ಕೆ ಇಟ್ಟು ಟ್ರಿಪ್‌ಗಳಿಗೆ ಅನುಸಾರ ವೇತನ ಕೊಡುತ್ತಿದೆ. ಚಾಲಕರು ಕನಿಷ್ಟ 2 ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಅದರೆ, ಅವರಿಗೆ ಇದಕ್ಕೆ ತಕ್ಕೆ ಪರಿಹಾರವಾಗಿ ಹೆಚ್ಚುವರಿ ಹಣ ನೀಡುವುದಿಲ್ಲೆ ಎಂದು ಆಕ್ರೋಶ ಹೊರಹಾಕಿದರು.

ತಮಗೆ ನಿಯೋಜನೆ ಮಾಡಲಾದ ಟ್ರಿಪ್‌ಗಳನ್ನ ಪೂರ್ಣಗೊಳಿಸಲು ಆತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬರುತ್ತಿದೆ. ಆದ್ದರಿಂದ ಚಾಲಕರು ಟ್ರಿಪ್‌ಗಳನ್ನು ಬೇಗ ಮುಗಿಸುವ ಒತ್ತಡದಲ್ಲಿರುತ್ತಾರೆ. ಇದು ಅಪಘಾತಗಳಿಗೆ ಕಾರಣ ಆಗುತ್ತದೆ. ಈ ಹಿನ್ನೆಲೆ ನಿಗಮವು ಚಾಲಕರ ಒತ್ತಡ ನಿವಾರಿಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಆದರೆ, ಯಾವ ಆಧಾರದ ಮೇಲೆ ಹೀಗೆ ಹೇಳುತ್ತಿದೆ ಅಂತೂ ಪ್ರಶ್ನೆ ಮಾಡಿದ್ದಾರೆ.

ಸಂಚಾರ, ರಸ್ತೆ ಕಾಮಗಾರಿಗಳು, ಮೆಟ್ರೋ ಕಾಮಗಾರಿಗಳು, ಗುಂಡಿಗಳು, ವೇಗ ತಡೆಗಳ ಸಂಖ್ಯೆ, ಬಸ್ ನಿಲ್ದಾಣಗಳ ಸಂಖ್ಯೆ ಮತ್ತು ಬಸ್‌ಗಳ ಲೋಡ್ ಸೇರಿದಂತೆ ಮುಂತಾದ ಎಲ್ಲಾ ಅಂಶಗಳನ್ನು ಪರಿಗಣಿಸಿ, ಫಾರ್ಮ್ 4ರ ನಿಯತಕಾಲಿಕ ವೈಜ್ಞಾನಿಕ ಪರಿಷ್ಕರಣೆ ಮತ್ತು ಚಾಲಕರು 8 ಗಂಟೆಗಳಲ್ಲಿ ತಮ್ಮ ಕರ್ತವ್ಯ ಪೂರ್ಣಗೊಳಿಸುವ ರೀತಿಯಲ್ಲಿ ಟ್ರಿಪ್‌ಗಳ ಸಂಖ್ಯೆಯನ್ನು ನೀಡಬೇಕೆಂದಯ ಆಗ್ರಹಿಸಿದ್ದಾರೆ.

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಅವರು ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆ ಮತ್ತು ಮೆಟ್ರೋ ಕಾಮಗಾರಿಗಳು, ರಸ್ತೆ ತಿರುವುಗಳು ಪ್ರಯಾಣದ ಸಮಯವನ್ನು ಹೆಚ್ಚಳ ಆಗುವುದಕ್ಕೆ ಪ್ರಮುಖ ಕಾರಣವಾಗಿವೆ. ಅದಕ್ಕೆ ತಕ್ಕಂತೆ ಸುಮಾರು 3,000 ಬಸ್‌ಗಳ ವೇಳಾಪಟ್ಟಿಗಳನ್ನು ಪರಿಷ್ಕರಣೆ ಮಾಡಲಾಗಿದೆ. ಬಸ್‌ಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ವಾಹನ ಟ್ರ್ಯಾಕಿಂಗ್ ವ್ಯವಸ್ಥೆಯನ್ನ ಆಧರಿಸಿ ಸಮಯ ಪರಿಷ್ಕರಣೆ ಮಾಡಲಾಗಿದ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಚಾಲಕರ ಮೇಲಿನ ಒತ್ತಡ ತಗ್ಗಿಸಿದರೆ, ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎನ್ನುವುದೇ ಬಹುತೇಕರ ವಾದವಾಗಿತ್ತು. ಇದನ್ನು ಪರಿಗಣೆಗೆ ತೆಗೆದುಕೊಂಡ ಬಿಎಂಟಿಸಿ ಈ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+