ಮಹಿಳೆಯರಿಗೆ ಚಾಲನಾ ತರಬೇತಿ ನೀಡಲು ಬಿಎಂಟಿಸಿ ನಿರ್ಧಾರ

ಮಹಿಳೆಯರಿಗೆ ಚಾಲನಾ ತರಬೇತಿ ನೀಡಲು ಬಿಎಂಟಿಸಿ ನಿರ್ಧಾರ. ಬೆಂಗಳೂರಿನ ಎಲ್ಲಾ ಬಿಎಂಟಿಸಿ ನಿಲ್ದಾಣಗಳಲ್ಲಿ ಮಹಿಳಾ ಚಾಲಕಿಯರಿಗೆ ಪ್ರತ್ಯೇಕ ಕೊಠಡಿ. ಎಲ್ಲಾ ಬಿಎಂಟಿಸಿ ಡ್ರೈವರ್ ಕ್ಯಾಬಿನ್ ಗಳಿಗೆ ಸಿಸಿಟಿವಿ ಅಳವಡಿಸಲು ನಿರ್ಧಾರ.

ಬೆಂಗಳೂರು, ಜುಲೈ 3: ಶೀಘ್ರವೇ ಬೆಂಗಳೂರು ಮೆಟ್ರೊ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) 1 ಸಾವಿರ ಮಹಿಳೆಯರಿಗೆ ಚಾಲನಾ ತರಬೇತಿ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ವಿವಿಧ ಇಲಾಖೆಗಳಲ್ಲಿ ಚಾಲಕ ಸಿಬ್ಬಂದಿಯನ್ನು ಪೂರೈಸುವ ನಿಟ್ಟಿನಲ್ಲಿ ಬಿಎಂ ಟಿಸಿಯು ಈ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ತಗಲುವ ವೆಚ್ಛವನ್ನು ಕೇಂದ್ರ ಸರ್ಕಾರ ಸ್ಥಾಪಿತ ನಿರ್ಭಯಾ ನಿಧಿಯಿಂದ ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

BMTC PLANS TO PUT 1,000 WOMEN BEHIND THE WHEEL

ಸದ್ಯಕ್ಕೆ, ಬಿಎಂಟಿಸಿಯೊಂದೇ ರಾಜ್ಯದಲ್ಲಿ ಮಹಿಳಾ ಚಾಲಕಿಯರನ್ನು ಹೊಂದಿರುವ ಏಕೈಕ ಸರ್ಕಾರಿ ಸಂಸ್ಥೆಯಾಗಿದ್ದು, ಈಗ ಇತರ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವುದರಿಂದ ಇತರ ಇಲಾಖೆಗಳಿಗೂ ಮಹಿಳಾ ಚಾಲಕಿಯರ ಸೇರ್ಪಡೆಯಾಗಲು ಅನುಕೂಲವಾಗುತ್ತದೆ ಎಂಬ ಚಿಂತನೆ ಈ ತರಬೇತಿಯ ಹಿಂದಿದೆ ಎನ್ನಲಾಗಿದೆ.

ಇದಲ್ಲದೆ, ಮಹಿಳಾ ಚಾಲಕಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕ ಕೊಠಡಿ ಹಾಗೂ ಬಸ್ ಗಳ ಚಾಲಕ ಕ್ಯಾಬಿನ್ ಗಳಲ್ಲಿ ಸಿಸಿಟಿವಿ ಅಳವಡಿಕೆಗಾಗಿ ಸುಮಾರು 35 ಕೋಟಿ ರು.ಗಳಿಂದ 40 ಕೋಟಿ ರು. ಖರ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+