BMTC: ನಾನ್-ಎಸಿ ಹೊಸ ಮಾರ್ಗಗಳ ಪರಿಚಯ, ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ, 14: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿಯಾದ ಬಿಎಂಟಿಸಿ ಪ್ರಯಾಣಕರ ಅನುಕೂಲತೆಗೆ ತಕ್ಕಂತೆ ಆಗಾಗ ವಿಶೇಷ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಹಾಗೆಯೇ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸ ನಾನ್-ಎಸಿ ಬಸ್ ಮಾರ್ಗಗಳನ್ನು ಪರಿಚಯಿಸಿದೆ. ಹಾಗಾದರೆ ಆ ಮಾರ್ಗಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
355: ಬೆಂಗಳೂರಿನ ಹೃದಯಭಾಗದಂತಿರುವ ಮೆಜೆಸ್ಟಿಕ್‌ನಿಂದ ಬೊಮ್ಮಸಂದ್ರಕ್ಕೆ ಮಾರ್ಗ-ಕಾರ್ಪೊರೇಷನ್ ಸರ್ಕಲ್, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್, ಮಡಿವಾಳ ಮತ್ತು ಇ-ಸಿಟಿ ಮೂಲಕ ಸಂಚರಿಸಲಿದ್ದು, ಇದು ದಿನಕ್ಕೆ 6 ಟ್ರಿಪ್‌ಗಳ ಸೇವೆಯನ್ನು ನೀಡುತ್ತದೆ.

ನೈಸ್-6: ಸುಂಕದಕಟ್ಟೆ, ಗೊಲ್ಲರಹಟ್ಟಿ ಮತ್ತು ನೈಸ್ ರಸ್ತೆ ಮೂಲಕ ಬಸವೇಶ್ವರ ನಗರದಿಂದ ಇ-ಸಿಟಿ ವಿಪ್ರೋ ಗೇಟ್‌ವರೆ ಸಂಚರಿಸಲಿದ್ದು, ದಿನಕ್ಕೆ ಎರಡು ಟ್ರಿಪ್ ಸೇವೆ ನೀಡಲಿದದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಂಡರ್ ಲಾ ಕಡೆ ಪ್ರಯಾಣ ಬೆಳೆಸುವವರಿಗೆ BMTC ಸಿಹಿಸುದ್ದಿ
ನಗರದ ಹೊರ ವಲಯದಲ್ಲಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಬಸ್‌ಗಳನ್ನು ಕಲ್ಪಿಸಿದೆ. ಈ ಸೌಲಭ್ಯ ಯಾವಾಗಿನಿಂದ ಆರಂಭವಾಗಲಿದೆ ಹಾಗೂ ಯವ್ಯಾವ ಮಾರ್ಗಗಳಿಮದ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಇಷ್ಟು ದಿನ ನೇರವಾಗಿ ಬಿಎಂಟಿಸಿ ಬಸ್ ಸೌಲಭ್ಯ ಇರಲಿಲ್ಲ. ಇದೀಗ ಜನವರಿ 15ರಿಂದ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಹಂಚಿಕೆ ಮಾಡಲಾಗಿದ್ದು, ಜನವರಿ 15ರಿಂದ ಮುಂಗಡ ಆಸನ ಕಾಯ್ದಿರಿಸಲು ಬಿಎಂಟಿಸಿಯಿಂದ ವಂಡರ್ ಲಾಗೆ ಶುರು ಮಾಡಲಾಗುತ್ತಿದೆ. ಈ ಬಗ್ಗೆ ಡಿಐಪಿಆರ್ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ವಂಡರ್ ಲಾಗೆ ತೆರಳುವ ಪ್ರಯಾಣಿಕರಿಗೆ ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಬೆಂಗಳೂರು ನಗರದ ವಿವಿಧ ಭಾಗಗಳಿಂದ ನಾಲ್ಕು ಮಾರ್ಗಗಳಲ್ಲಿ ವಂಡರ್ ಲಾ ಕಡೆಗೆ 10 ಬಸ್‌ಗಳು ದಿನಕ್ಕೆ 20 ಟ್ರಿಪ್‌ಗಳನ್ನು ಏಕಮುಖವಾಗಿ ನಡೆಸಲಿವೆ. ಜನವರಿ 15ರಿಂದ ಕೆಎಸ್‌ಆರ್‌ಟಿಸಿ ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.












Click it and Unblock the Notifications