• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಯಾಣಿಕರ ವಿರೋಧ: ದಿನದ ಪಾಸ್‌ ದರ ಇಳಿಸಲು ಹೊರಟ ಬಿಎಂಟಿಸಿ

|

ಬೆಂಗಳೂರು, ಮೇ 21: ಕೊರೊನಾ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಬಿಎಂಟಿಸಿ ರೆಡ್‌ ಝೋನ್, ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಎಲ್ಲಾ ಕಡೆಗೆ ಸಂಚಾರ ಆರಂಭಿಸಿತ್ತು.

ಬಸ್‌ನಲ್ಲಿ ಸಧ್ಯಕ್ಕೆ ಟಿಕೆಟ್ ನೀಡದಿರಲು ಬಿಎಂಟಿಸಿ ನಿರ್ಧರಿಸಿತ್ತು, ದಿನದ ಪಾಸ್ ನೀಡುತ್ತಿತ್ತು. ವಾರದ ಪಾಸ್ ಬೇಕಿದ್ದರೆ ಹತ್ತಿರದ ಡಿಪೊಗಳಿಗೆ ಹೋಗಿ 300 ರೂ ನೀಡಿ ಪಾಸ್ ಪಡೆಯಬೇಕಿತ್ತು. ಇನ್ನು ಟಿಕೆಟ್ ಇಲ್ಲದ ಕಾರಣ ಪ್ರತಿಯೊಬ್ಬರೂ 70 ರೂ. ನೀಡಿ ದಿನದ ಪಾಸ್ ಪಡೆಯಬೇಕಿತ್ತು.

ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?

ಬಿಎಂಟಿಸಿ ನಡೆಯ ವಿರುದ್ಧ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪಾಸಿನ ದರವನ್ನು 50ರೂ.ಗೆ ಇಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬುಧವಾರ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಿಂದ ನಿನ್ನೆ 7,273 ಪ್ರಯಾಣಿಕರು ಸಂಚರಿಸಿದ್ದಾರೆ. ರಾಜ್ಯದ 63 ಕಡೆಗಳಲ್ಲಿ ಬಸ್ ಕಾರ್ಯನಿರ್ವಹಣೆ ಮಾಡಿದ್ದು 789 ಪ್ರಯಾಣಿಕರು ಶಿವಮೊಗ್ಗಕ್ಕೆ 33 ಬಸ್ಸುಗಳಲ್ಲಿ ಹೋಗಿದ್ದಾರೆ, ಅದು ನಿನ್ನೆಯ ದಿನ ಅಧಿಕವಾಗಿತ್ತು.

ನಗರದಲ್ಲಿ ಸುಮಾರು 2 ಸಾವಿರ ಬಸ್ಸುಗಳು ಸಂಚರಿಸುತ್ತಿದ್ದು ಇಂದು ಅದು 4 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೈಬಿಎಂಟಿಸಿ ಆಪ್ ಮೂಲಕ ಆನ್ ಲೈ ನ್ ನಲ್ಲಿ ಟಿಕೆಟ್ ನೀಡಲು ಕ್ಯುಆರ್ ಕೋಡ್ ತಪಾಸಣೆಗೆ ಬಿಎಂಟಿಸಿ ಆರಂಭಿಸಿದ್ದು ಇದುವರೆಗೆ ಶೇಕಡಾ 10ರಷ್ಟು ಪ್ರಯಾಣಿಕರು ಮಾತ್ರ ಬಳಸಿದ್ದಾರೆ. ಬಿಎಂಟಿಸಿ ಇ-ಟಿಕೆಟ್ ವ್ಯವಸ್ಥೆಯನ್ನು ಕೂಡ ಚಿಂತನೆ ನಡೆಸುತ್ತಿದೆ.

English summary
BMTC provided only daily, weekly and monthly passes which start at Rs 70. After receiving flak, the Bangalore Metropolitan Transport Corporation (BMTC) is now proposing to reduce it by 20 to 50. Transport Minister Laxman Savadi is said to have proposed a fare of 50 for daily passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X