BMTC ಪ್ರಯಾಣಿಕರೇ ಗಮನಿಸಿ: ಪ್ರತಿನಿತ್ಯ ಬೆಂಗಳೂರು ಪ್ರೇಕ್ಷಣೀಯ ಸ್ಥಳಗಳಿಗೆ ಬಸ್ ವ್ಯವಸ್ಥೆ

ಬೆಂಗಳೂರು, ನವೆಂಬರ್ 09: ನಗರಾದ್ಯಂತ ಜನರಿಗೆ ಸಂಚಾರ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಹೊಸದಾಗಿ 'ಬೆಂಗಳೂರು ದರ್ಶಿನಿ' ಉಪಕ್ರಮ ಪರಿಚಯಿಸಿದೆ. ಇದರಡಿ ನೀವು ಪ್ರತಿ ದಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಯಾವೆಲ್ಲ ಪ್ರವಾಸಿ ಸ್ಥಳಗಳು, ಸಮಯ, ಟಿಕೆಟ್ ದರ ಹಾಗೂ ಪೂರ್ತಿ ವೇಳಾಪಟ್ಟಿ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ( BMTC) ಸಂಸ್ಥೆಯು ಬೆಂಗಳೂರು ಟೋರಿಸಂ ಸಹಕಾರದಲ್ಲಿ ಈ ಉಪಕ್ರಮ ಪರಿಚಯಿಸಿದೆ. ಬಿಎಂಟಿಸಿ ಬೆಂಗಳೂರು ದರ್ಶಿನಿ ಬಸ್‌ಗಳಲ್ಲಿ ನೀವು ಪ್ರಯಾಸ ರಹಿತ ಪ್ರಯಾಣ, ನುರಿತ ಸಿಬ್ಬಂದಿಯಿಂದ 12 ಪ್ರೇಕ್ಷಣಿಯ ಸ್ಥಳಗಳ ಅಮೋಘ ದರ್ಶನ್ ಪಡೆಯಬಹುದಾಗಿದೆ.

BMTC introduced Bengaluru Darshini Tourist bus service See Ticket Fare and Travel Timings

ಅತೀ ಕಡಿಮೆ ದರದಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ, ಐತಿಹಾಸಿಕ ಸೇವಸ್ಥಾನಗಳಿಗೆ ಈ ಬಸ್‌ಗಳು ನಿಮ್ಮನ್ನು ಕರೆದೊಯ್ಯಲಿವೆ. ಮನೆಯಲ್ಲಿಯೇ ಇದ್ದು ಬೇಸರಾದವರಿಗೆ, ಅಲ್ಲಿ ಇಲ್ಲಿ ಹೋಗಬೇಕೆಂದು ಕೊಂಡು ಪ್ರತಿ ಬಾರಿಯು ಪ್ಲಾನ್ ಕ್ಯಾನ್ಸಲ್ ಆದವರು ಒಮ್ಮೆ ಈ ಬಸ್‌ಗಳನ್ನು ಪ್ರಯಾಣಿಸಿ ಅನುಭವ ಪಡೆಯಬಹುದಾಗಿದೆ.

ಯಾವೆಲ್ಲ ಪ್ರವಾಸಿ ಸ್ಥಳಗಳಿಗೆ ಬಸ್ ವ್ಯವಸ್ಥೆ ಇದೆ?

* ಇಸ್ಕಾನ್ ದೇವಸ್ಥಾನ

* ವಿಧಾನಸೌಧ

* ಟಿಪ್ಪು ಅರಮನೆ

* ಗವಿಗಂಗಾಧರೇಶ್ವರ ದೇವಸ್ಥಾನ

* ಬುಲ್ ದೇವಸ್ಥಾನ (ದೊಡ್ಡ ಗಣಪತಿ ದೇವಸ್ಥಾನ)

* ಕರ್ನಾಟಕ ಸಿಲ್ಕ್ ಎಂಪೋರಿಯಂ

* ವಸ್ತು ಸಂಗ್ರಹಾಲಯ

* ಕರ್ನಾಟಕ ಚಿತ್ರಕಲಾ ಪರಿಷತ್ತು

* ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ

* ವೆಂಕಟಪ್ಪ ಆರ್ಟ್ ಗ್ಯಾಲರಿ

* ಕಬ್ಬನ್ ಉದ್ಯಾನ

BMTC introduced Bengaluru Darshini Tourist bus service See Ticket Fare and Travel Timings

ಬಿಎಂಟಿಸಿ ಬಸ್ ಹೊರಡುವ ಸಮಯ

ಈ ಬಿಎಂಟಿಸಿ 'ಬೆಂಗಳೂರು ದರ್ಶಿನಿ' ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಹೊರಟು ಸಂಜೆ 7ಗಂಟೆಗೆ ಮೆಜೆಸ್ಟಿಕ್‌ಗೆ ಕರೆತಂದು ಬಿಡಲಿದೆ. ಇದರಿಂದ ನಾಗರಿಕರಿಗೆ ಕಡಿಮೆ ದರದಲ್ಲಿ, ಸಂಚಾರ ದಟ್ಟಣೆಯ ಈ ಮಹಾನಗರದಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಕರೆತಂದು ಬಿಡುವ ಯೋಜನೆ ಇದಾಗಿದೆ.

'ಬೆಂಗಳೂರು ದರ್ಶಿನಿ' ಟಿಕೆಟ್ ದರ ಎಷ್ಟು?

ಈ ಉಪಕ್ರಮದಡಿ ಬಸ್‌ನಲ್ಲಿ ಪ್ರಯಾಣಿಸುವ ಆಸಕ್ತ ವಯಸ್ಕರಿಗೆ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಬಿಟ್ಟು ರೂ. 400, ಮಕ್ಕಳಿಗೆ ಜಿಎಸ್‌ಟಿ ರೂ.300 ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು 70220 30257, 77609 91068 ಅಥವಾ 080 22483777 ಗೆ ಸಂಪರ್ಕಿಸಬಹುದು. ಸಾಮಾಜಿಕ ಜಾಲತಾಣದಲ್ಲೂ ನಮ್ಮನ್ನು ಸಂಪರ್ಕಿಸುವಂತೆ, ಮಾಹಿತಿ ಪಡೆಯುವಂತೆ ಬಿಎಂಟಿಸಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+