ಟೋಲ್ ದರ ಹೆಚ್ಚಳ, ವಾಯುವಜ್ರ ಬಸ್ ದರ ಹೆಚ್ಚಿಸಿದ ಬಿಎಂಟಿಸಿ

ಬೆಂಗಳೂರು, ಏ.2: ದೇವನಹಳ್ಳಿ ಟೋಲ್ ದರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ವಾಯುವಜ್ರ ಬಸ್‌ ದರವನ್ನೂ ಕೂಡ ಬಿಎಂಟಿಸಿ ಏರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಟೋಲ್‌ನಲ್ಲಿ ಈ ಹಿಂದೆ ಬಸ್‌ಗೆ ಏಕಮುಖ ಸಂಚಾರಕ್ಕೆ 270 ರೂ ಇದ್ದ ಶುಲ್ಕವನ್ನು 280ಕ್ಕೆ ಏರಿಸಲಾಗಿದೆ. ದಿನಕ್ಕೆ 2 ಸಿಂಗಲ್ ಜರ್ನಿಗೆ 405 ಇದ್ದ ಶುಲ್ಕವನ್ನು 420 ಹಾಗೂ ಮಾಸಿಕ ಪಾಸ್ ಶುಲ್ಕವನ್ನು 8945ರಿಂದ 9330ಕ್ಕೆ ಹೆಚ್ಚಿಸಲಾಗಿದೆ. ಈ ಹಿನ್ನೆಲಯಲ್ಲಿ ಬಿಎಂಟಿಸಿ ಏ.1ರಿಂದ ಅನ್ವಯವಾಗುವಂತೆ ಬಸ್ ಬಳಕೆದಾರರ ಶುಲ್ಕವನ್ನು 13ರಿಂದ 14ಕ್ಕೆ ಹೆಚ್ಚಳ ಮಾಡಿದೆ.

ಸಾಮಾನ್ಯ ಬಸ್‌ಗಳ ಬಳಕೆದಾರರ ಶುಲ್ಕ ಹಿಂದಿನಂತೆಯೇ 6ರೂ ಮುಂದುವರೆಸಿದೆ. ಈ ದರ ದೈನಂದಿನ, ಮಾಸಿಕ ಹಾಗೂ ಇತರೆ ಪಾಸುದಾರರಿಗೆ ಅನ್ವಯವಾಗಲಿದೆ.

BMTC increased Vayu Vajra bus fare

ಆದರೆ ವಿದ್ಯಾರ್ಥಿ ರಿಯಾಯಿತಿ ಹಾಗೂ ಅಂಗವಿಕಲ ಪಾಸುದಾರರಿಗೆ ಪರಿಷ್ಕೃತ ದರ ಅನ್ವಯವಾಗುವುದಿಲ್ಲ.
ಹೊಸ ದರ ನಿನ್ನೆಯಿಂದಲೇ ಜಾರಿಗೆ ಬಂದಿದೆ. ಕಾರು, ಜೀಪು, ವ್ಯಾನ್ ಗಳಿಗೆ 85 ರೂ ಇದ್ದ ಶುಲ್ಕವನ್ನು 90ರೂ ಗೆ ಹೆಚ್ಚಿಸಲಾಗಿದೆ.ವಾಪಸ್ ಬರುವಾಗ 130 ರೂ ಇದ್ದ ಶುಲ್ಕ 135 ರೂಗಳಿಗೆ ಹೆಚ್ಚಿಸಲಾಗಿದೆ.

ತಿಂಗಳ ಪಾಸ್ ಶುಲ್ಕ 2895 ರೂ ಇದ್ದಿದ್ದನ್ನು 3,020 ರೂಗೆ ಏರಿಸಲಾಗಿದೆ. ಲಘು ವಾಣಿಜ್ ವಾಹನಗಳಿಗೆ 135 ರೂ ಇದ್ದಿದ್ದನ್ನು 140ರೂಗೆ ಹೆಚ್ಚಿಸಲಾಗಿದೆ. ವಾಪಸ್ ಬರುವಾಗ 200 ರೂ ಇದ್ದಿದ್ದನ್ನು 210 ರೂಗೆ ಹೆಚ್ಚಳ ಮಾಡಲಾಗಿದೆ.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ತಿಂಗಳ ಪಾಸ್ ದರ 4,450 ರೂ ನಿಂದ 4640ರೂಗೆ ಏರಿಕೆ ಮಾಡಲಾಗಿದೆ. ಟ್ರಕ್‌ಗಳಿಗೆ 270ರಿಂದ 280 ಹಾಗೂ ವಾಪಸ್ ಮಾರ್ಗದಲ್ಲಿ 405 ರೂಪಾಯಿಯಿಂದ 420ಕ್ಕೆ ಏರಿಕೆ ಮಾಡಲಾಗಿದೆ. ಭಾರಿ ಗಾತ್ರದ ವಾಹನಗಳಿಗೆ 405ರೂ ನಿಂದ 425 ರೂ, ವಾಪಸ್ ಮಾರ್ಗಕ್ಕೆ 610 ರೂನಿಂದ 635 ರೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+