BMTC; ಭದ್ರತಾ ಸಿಬ್ಬಂದಿಗಳ ವರ್ಗಾವಣೆ, ಸ್ಥಳ ನಿಯೋಜನೆ ಮಾರ್ಗಸೂಚಿ

ಬೆಂಗಳೂರು, ಜುಲೈ 03: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೆ.ಎಸ್.ಟಿ ಹವಲ್ದಾರ್ ಮತ್ತು ಕೆ.ಎಸ್.ಟಿ ಪೇದೆಗಳ ಸ್ಥಳ ನಿಯೋಜಿಸುವ ಬಗ್ಗೆ ಸುತ್ತೋಲೆಯೊಂದನ್ನು ಪ್ರಕಟಿಸಿದೆ. ಸಮಾಲೋಚನೆ ಮೂಲಕ ಸ್ಥಳ ನಿಯೋಜಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಸುತ್ತೋಲೆ ಪ್ರಕಟಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಮುಖ ಇಲಾಖೆಗಳಲ್ಲಿ ಒಂದಾದ ಭದ್ರತಾ ಹಾಗೂ ಜಾಗೃತಾ ಇಲಾಖೆಯು ಸಂಸ್ಥೆಯ ಸ್ವತ್ತನ್ನು ಕಾಪಾಡುತ್ತಾ ಸಿಬ್ಬಂದಿಗಳನ್ನು ಶಿಸ್ತು ಮತ್ತು ಸಂಯಮವನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದ್ದಾರೆ.

BMTC Guidelines For KST Havaldar And KST Constable Posting

ಕೆ.ಎಸ್.ಟಿ ಹವಲ್ದಾರ್ ಮತ್ತು ಕೆ.ಎಸ್.ಟಿ ಪೇದೆಗಳು ಭದ್ರತಾ & ಜಾಗೃತಾ ಇಲಾಖೆಯ ಆಧಾರ ಸ್ತಂಭಗಳಂತೆ. ಶಿಸ್ತಿನ ಸಿಪಾಯಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸಂಸ್ಥೆಯು 50 ಘಟಕಗಳು, 4 ಕಾರ್ಯಾಗಾರಗಳು ಮತ್ತು 11 ಟಿ.ಟಿ.ಎಂ.ಸಿ ಗಳನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ನೂತನ ಘಟಕ ಮತ್ತು ಬಸ್ ನಿಲ್ದಾಣಗಳು ಪ್ರಾರಂಭವಾದ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಗಳ ನಿಯೋಜನೆಯಲ್ಲಿ ಸಮತೋಲನೆಯನ್ನು ಕಾಯ್ದಿರಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಕೆ.ಎಸ್.ಟಿ ಹವಲ್ದಾರ್ ಮತ್ತು ಕೆ.ಎಸ್.ಟಿ ಪೇದೆಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲಾಗಿದ್ದು, ಕಾರ್ಯನಿರ್ವಹಣೆಯಲ್ಲಿ ಅಸಮತೋಲನಾ ಉಂಟಾಗಿರುವುದನ್ನು ಗಮನಿಸಲಾಗಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಹಲವು ವರ್ಷಗಳಿಂದ ಎರವಲು ಸೇವೆಯ ಮೇಲೆ ಸಂಸ್ಥೆಯ ಇತರೆ ಕಾರ್ಯಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಿಂದ, ಕೆಲವು ಕಾರ್ಯಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಕಾರ್ಯ ನಿರ್ವಹಣೆಗೆ ಲಭ್ಯವಿದ್ದು, ಹಾಗೂ ಕೆಲವು ಕಾರ್ಯಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಗಳು ಲಭ್ಯವಿಲ್ಲದೇ ಕೊರತೆ ಉಂಟಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೆ.ಎಸ್.ಟಿ ಹವಲ್ದಾರ್ ಮತು ಕೆ.ಎಸ್.ಟಿ ಪೇದೆ ಸಿಬ್ಬಂದಿಗಳನ್ನು ಒಂದು ಬಾರಿಗೆ ಅನ್ವಯವಾಗುವಂತೆ ಪಾರದರ್ಶಕವಾಗಿ ಸೇವಾ ಜೇಷ್ಠತೆಯನ್ವಯ ಸಮಾಲೋಚನೆ (ಕೌನ್ಸಿಲಿಂಗ್‌) ಮೂಲಕ ವರ್ಗಾವಣೆಗೊಳಿಸಿ, ಸ್ಥಳ ನಿಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ಪ್ರಕಟಿಸಲಾಗಿದೆ.

ಮಾರ್ಗಸೂಚಿಗಳು

* ಕೆ.ಎಸ್.ಟಿ ಪೇದೆಗಳಿಗೆ ಪರೀಕ್ಷಾಣಾರ್ಥಿ ದಿನಾಂಕ ಮತ್ತು ಕೆ.ಎಸ್.ಟಿ ಹವಲ್ದಾರ್‌ರವರಿಗೆ ಪದೋನ್ನತಿ ಹೊಂದಿದ ದಿನಾಂಕದ ಆಧಾರದ ಮೇರೆಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಲಾಗುವುದು.

* ಜೇಷ್ಠತೆಯ ಅನುಗುಣವಾಗಿ ಸಮಾಲೋಚನೆ ನಡೆಸಲಾಗುವುದು. ಪ್ರಸ್ತುತ ಕಾರ್ಯಸ್ಥಳದಲ್ಲಿ 5 ವರ್ಷಗಳು ಹಾಗೂ ಮೇಲ್ಪಟ್ಟ ಅವಧಿಗೆ ಕರ್ತವ್ಯ ನಿರ್ವಹಿಸಿದ್ದಲ್ಲಿ, ಅದೇ ಸ್ಥಳಕ್ಕೆ ಪುನಃ ನಿಯೋಜಿಸಲಾಗುವುದಿಲ್ಲ. ಮಹಿಳಾ ಭದ್ರತಾ ಸಿಬ್ಬಂದಿಗಳ ನಿಯೋಜನೆಯಲ್ಲಿ ಸಮತೋಲನ ತರುವಲ್ಲಿ ಅವಕಾಶ ಕಲ್ಪಿಸಿದೆ. ಘಟಕದಲ್ಲಿ 5 ಭದ್ರತಾ ಸಿಬ್ಬಂದಿಗಳ ಮಂಜೂರಾತಿ ಇದ್ದಲ್ಲಿ ಗರಿಷ್ಠ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಅಥವಾ 4 ಭದ್ರತಾ ಸಿಬ್ಬಂದಿಗಳ ಮಂಜೂರಾತಿ ಇದ್ದಲ್ಲಿ, ಒಬ್ಬರು ಮಹಿಳಾ ಭದ್ರತಾ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುವುದು.

* ಪ್ರತಿಯೊಂದು ಕಾರ್ಯಸ್ಥಳದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಮಿತಿಗೊಳಿಸಿರುವುದರಿಂದ ಮಹಿಳಾ ಸಿಬ್ಬಂದಿಗಳಿಗೆ ಸಮಾಲೋಚನೆಯ ಸ್ಥಳ ನಿಯೋಜನೆಯಲ್ಲಿ ಆದ್ಯತೆ ನೀಡಲಾಗುವುದು. ಶಿಸ್ತು ಪ್ರಕರಣಗಳಲ್ಲಿ ಭಾಗಿಯಾಗಿ ವರ್ಗಾವಣೆಯಾದವರನ್ನು ಪುನಃ ಅದೇ ಘಟಕಕ್ಕೆ ನಿಯೋಜಿಸಲಾಗುವುದಿಲ್ಲ.

* ಸಮಾಲೋಚನೆ ಪ್ರಕ್ರಿಯೆಯನ್ನು ಯಾವುದೇ ಹಂತದಲ್ಲಿ ಸಿಬ್ಬಂದಿಗಳು ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ. ವರ್ಗಾವಣೆಗೊಳಿಸಿದ ನಂತರ ಯಾವುದೇ ಕಾರಣಕ್ಕೂ ನಿಯೋಜಿಸಿದ ಕಾರ್ಯಸ್ಥಳವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಸದರಿ ಷರತ್ತುಗಳನ್ನೊಳಗೊಂಡಂತೆ ಸಮಾಲೋಚನೆ ಪ್ರಕ್ರಿಯೆಗೆ ಗಣಕ ಶಾಖೆಯಿಂದ ಪ್ರತ್ಯೇಕ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು.

ಕಾರ್ಯಸ್ಥಳ ಆಯ್ಕೆ ವಿಧಾನ: ಕಾರ್ಯಸ್ಥಳ ಆಯ್ಕೆ ಪ್ರಕ್ರಿಯೆಯ ಆನ್‌ಲೈನ್ ಸಮಾಲೋಚನೆಯು ದಿನಾಂಕ 5/7/2023 ರಿಂದ 20/07/2023 17:00 ಗಂಟೆಯವರೆಗೆ ತೆರೆದಿದ್ದು, ತಂತ್ರಾಂಶದಲ್ಲಿ ಕಾರ್ಯಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. https://ems.mybmtc.com/BMTC/login.php ಲಿಂಕ್‌ ಅನ್ನು ಬಳಸಿಕೊಂಡು ತಮ್ಮ ಇ.ಎಂ.ಎಸ್‌ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್‌ ಮೂಲಕ ಲಾಗಿನ್ ಆಗುವುದು.

ಲಾಗಿನ್ ಆದ ನಂತರ ಭದ್ರತಾ ಸಿಬ್ಬಂದಿ ವರ್ಗಾವಣೆಯ ಸಮಾಲೋಚನೆ ಎಂಬ ಅಂಕ್‌ ಅನ್ನು ಬಳಸಿಕೊಂಡು ಮಂಜೂರಾತಿಯಿರುವ ಎಲ್ಲಾ ಕಾರ್ಯಸ್ಥಳಗಳನ್ನು ಆದ್ಯತೆಯನ್ವಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಪ್ರಸ್ತುತ ಹುದ್ದೆವಾರು ಖಾಲಿಯಿರುವ ಕಾರ್ಯಸ್ಥಳಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಪ್ರಕಟಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.

ಒಮ್ಮೆ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಸ್ಥಳಗಳನ್ನು ಆದ್ಯತಾವಾರು ಆಯ್ಕೆ ಮಾಡಿಕೊಂಡ ನಂತರ ಯಾವುದೇ ಹಂತದಲ್ಲೂ ಬದಲಾವಣೆ ಅಥವಾ ಹಿಂಪಡೆಯಲು ಅವಕಾಶವಿರುವುದಿಲ್ಲ. ಘಟಕ ವ್ಯವಸ್ಥಾಪಕರು/ ಶಾಖಾ ಮುಖ್ಯಸ್ಥರು, ಭದ್ರತಾ ಸಿಬ್ಬಂದಿಗಳು ವರ್ಗಾವಣೆಗಾಗಿ ಸಲ್ಲಿಸಿರುವ ಆದ್ಯತಾ ಪಟ್ಟಿಯನ್ನು ಕೇಂದ್ರ ಕಛೇರಿಯ ಭದ್ರತಾ ಇಲಾಖೆಗೆ ದಿನಾಂಕ 25/07/2023 ರೊಳಗಾಗಿ ಸಲ್ಲಿಸುವುದು.

ದಿನಾಂಕ 31/07/2023ರೊಳಗಾಗಿ ಸಮಾಲೋಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರ್ಗಾವಣೆ ಆದೇಶಗಳನ್ನು ತಂತ್ರಾಂಶದಲ್ಲಿ ಸ್ವಯಂ ಚಾಲಿತವಾಗಿ ಹೊರಡಿಸುವುದು. ಸಮಾಲೋಚನೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಜರುಗಿಸುವ ಪೂರ್ಣ ಜವಾಬ್ದಾರಿಯನ್ನು ವಹಿಸಬೇಕು ಎಂದು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+