Bmtc Good News: ಬಿಎಂಟಿಸಿ ಬಸ್ ಟ್ರಿಪ್ ಟೈಮ್ ವಿಸ್ತರಣೆ: ಪ್ರಯಾಣಿಕರಿಗೆ ಸಿಗುವ ಲಾಭವೇನು
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಬೆಂಗಳೂರಲ್ಲಿ ಬಿಎಂಟಿಸಿ ಸಂಚಾರ ಜೀವನಾಡಿ. ಕೆಲಸಕ್ಕೆ ಹೋಗುವವರು ಹಾಗೂ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ ಸೇವೆಯನ್ನೇ ಅವಲಂಬಿಸಿದ್ದಾರೆ. ಈ ರೀತಿ ಇರುವಾಗಲೇ ಬಿಎಂಟಿಸಿಯಿಂದ ಕೆಲವು ಲೋಪದೋಷಗಳು ಆಗುತ್ತಿರುವುದು ಒಮ್ಮೊಮ್ಮೆ ವರದಿಯಾಗುತ್ತಲ್ಲೇ ಇರುತ್ತದೆ. ಬಿಎಂಟಿಸಿ ಚಾಲಕರಿಂದ ಅಪಘಾವಾಗುವುದು ಹಾಗೂ ಸಾರ್ವಜನಿಕರಿಗೆ ಗಾಯ ಅಥವಾ ಸೋವು ಸಂಭವಿಸುವುದು ವರದಿಯಾಗುತ್ತಲ್ಲೇ ಇರುತ್ತದೆ. ಇದೀಗ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.
ಬೆಂಗಳೂರಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಾರಿಗೆ ಸೇವೆಯಿಂದ ಲಕ್ಷಾಂತರ ಜನರ ಪ್ರಯಾಣ ಸುಲಭವಾಗಿದೆ. ಇವೆರಡು ಬೆಂಗಳೂರಿನ ಜನರ ಜೀವನಾಡಿಯಂತೆ ಸಂಚಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಅಲ್ಲದೇ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ತಪ್ಪಿಸುವಲ್ಲಿ ಬಿಎಂಟಿಸಿ ಪಾತ್ರವು ದೊಡ್ಡದಿದೆ. ಆದರೆ, ಬಿಎಂಟಿಸಿ ಡ್ರೈವರ್ಸ್ ಹಾಗೂ ಕಂಡೆಕ್ಟರ್ಸ್ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಟ್ರಿಪ್‌ಗಳನ್ನು ಮುಗಿಸುವುದರಲ್ಲಿ (ಬಸ್ ದಿನಕ್ಕೆ ಇಷ್ಟು ಟ್ರಿಪ್ ಸುತ್ತಬೇಕು ಮುಖ್ಯ ಬಸ್‌ನಿಲ್ದಾಣದಿಂದ ಎನ್ನುವ ನಿಯಮವಿದೆ) ಸುಸ್ತಾಗುತ್ತಿದ್ದಾರೆ.

ಬೆಂಗಳೂರಿನಲ್ಲಿನ ವಿಪರೀತ ಟ್ರಾಫಿಕ್ ಜಾಮ್ ಕಿರಿಕಿರಿಯು ಬಿಎಂಟಿಸಿ ಬಸ್ ಡ್ರೈವರ್ಸ್ ಹಾಗೂ ಕಂಡೆಕ್ಟರ್ಸ್‌ಗಳನ್ನು ಹೈರಾಣಾಗಿಸಿದೆ. ಇದರ ನಡುವೆ ಬಿಎಂಟಿಸಿ ಆಡಳಿತ ಮಂಡಳಿಯು ಬಸ್‌ಗಳ ಟ್ರಿಪ್ ಟೈಮ್ ಹೆಚ್ಚಿಸಿದೆ ಇದರಿಂದ ಬಿಎಂಟಿಸಿ ಬಸ್ ಡ್ರೈವರ್ಸ್ ಹಾಗೂ ಕಂಡೆಕ್ಟರ್ಸ್ ತುಸು ನಿರಾಳರಾಗಿದ್ದಾರೆ. ಸಾಮಾನ್ಯವಾಗಿ ಪ್ರತಿದಿನವೂ ಬಸ್‌ಗಳು ಮುಖ್ಯ ನಿಲ್ದಾಣಕ್ಕೆ ಇಷ್ಟು ಸಮಯದ ಒಳಗೆ ಇಷ್ಟು ಟ್ರಿಪ್ ಹೋಗಬೇಕು ಎನ್ನುವ ನಿಯಮವಿರುತ್ತೆ. ಉದಾ: ಮೆಜೆಸ್ಟಿಕ್‌ನಿಂದ ಕೃಷ್ಣರಾಜಪುರಕ್ಕೆ ಒಂದು ದಿನದಲ್ಲಿ ಇಂತಿಷ್ಟು ಟ್ರಿಪ್ ಹಾಗೂ ಇಂತಿಷ್ಟು ಅವಧಿಯಲ್ಲಿ ಮುಕ್ತಾಯವಾಗಬೇಕು ಅಂತ ಇರುತ್ತೆ.

ಇದೇ ಕಾರಣಕ್ಕೆ ಬಸ್ ಡ್ರೈವರ್‌ಗಳು ಒತ್ತಡಕ್ಕೆ ಒಳಗಾಗುವುದು ಇದೆ. ವೇಗವಾಗಿ ಬಸ್ ಚಾಲನೆ ಮಾಡಿದಾಗ ಆಕ್ಸಿಡೆಂಟ್ ಆಗುವುದು ಹಾಗೂ ಇತರ ವಾಹನ ಸವಾರರೊಂದಿಗೆ ಗಲಾಟೆ ಆಗುವುದು ನಡೆಯುತ್ತೆ. ಈ ರೀತಿಯ ಅನಾಹುತಗಳನ್ನು ಈ ಟ್ರಿಪ್ ಸಮಯದ ಅವಧಿ ವಿಸ್ತರಣೆಯಿಂದ ತಪ್ಪಿಸಬಹುದಾಗಿದೆ. ಅಲ್ಲದೇ ಪ್ರಯಾಣಿಕರ ಮೇಲೆ ಕೆಲವು ಬಸ್‌ಡ್ರೈವರ್‌ಗಳು ಹಾಗೂ ಕಂಡೆಕ್ಟರ್ಸ್ ಕಿರುಚಾಡುವುದು ಇಲ್ಲವೇ ಕೋಪದಿಂದ ವರ್ತಿಸುವುದು ತಪ್ಪಲಿದೆ. ಈ ಎಲ್ಲಾದಕ್ಕೂ ಒತ್ತಡವೇ ಕಾರಣವಾಗಿದೆ. ಇದನ್ನು ತಪ್ಪಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕರಿಗೂ ಇದರಿಂದ ಇನ್ನಷ್ಟು ಉತ್ತಮ ಸೇವೆ ಸಿಗಲಿದೆ ಎಂದು ನಿರೀಕ್ಷೆ ಇದೆ.
ಹಳೆಯ ಪದ್ಧತಿ: ಬಿಎಂಟಿಸಿ ಬಸ್ ಟ್ರಿಪ್ ಪದ್ಧತಿಯು ಅಂದಾಜು ಎರಡರಿಂದ ಮೂರು ದಶಕಗಳ ಮುಂದಿನದ್ದು ಎನ್ನಲಾಗಿದೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಈಗ ಇರುವಷ್ಟು ಟ್ರಾಫಿಕ್ ಜಾಮ್ ಸಮಸ್ಯೆ ಇರಲಿಲ್ಲ. ಈಗ ಬೆಂಗಳೂರಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ಬದಲಾಯಿಸಿ ವೈಜ್ಞಾನಿಕವಾಗಿ ಸಮಯ ನಿಗದಿ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಇನ್ನಷ್ಟು ಬಸ್‌ಗಳ ಸೇರ್ಪಡೆಗೂ ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ಚಾಲಕರು ಹಾಗೂ ನಿರ್ವಾಹಕರು ಸಹ ಒತ್ತಡ ರಹಿತ ಕೆಲಸ ಮಾಡಲಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications