'ಕೇಂದ್ರ ಸರ್ಕಾರ ಅನುದಾನ ಕೊಟ್ಟರೆ ಬಿಎಂಟಿಸಿ ಪ್ರಯಾಣ ದರ ಕಡಿತ'

ಬೆಂಗಳೂರು, ಫೆಬ್ರವರಿ 05 : ಕೇಂದ್ರ ಸರ್ಕಾರವು 150 ಬಿಎಂಟಿಸಿ ಬಸ್ ಗಳಿಗೆ ಅನುದಾನ ನೀಡಿದರೆ ಶೇ.50 ರಷ್ಟು ಬಸ್ ದರವನ್ನು ಕಡಿಮೆ ಮಾಡುವುದಾಗಿ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದ್ದಾರೆ.

ಶಾಂತಿನಗರದಲ್ಲಿ ಬಸ್ ದಿನಾಚರಣೆ ಸಂಗವಾಗಿ ಸೋಮವಾರ ಏರ್ಪಡಿಸಿದ್ದ ಬಸ್ ಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಬೆಂಗಳೂರನ್ನು ಸ್ಮಾರ್ಟ್ ಸಿಟಿ ಎಂದು ಕರೆದಿದ್ದಾರೆ. ಆದರೆ ಕೇವಲ 40 ಬಸ್ ಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. 150 ಬಸ್ ಗಳಿಗೆ ಅನುದಾನ ನೀಡಿದರೆ ಬಸ್ ದರವನ್ನು ಕಡಿಮೆ ಮಾಡುತ್ತೇವೆ ಎಂದು ತಿಳಿಸಿದರು.

ಯಾವ ಬಸ್ ಅಸ್ವಚ್ಛತೆಯಿಂದ ಕೂಡಿರುತ್ತದೋ ಆ ಬಸ್ ನಿರ್ವಹಿಸುವವರನ್ನು ವಜಾಗೊಳಿಸುವುದಾಗಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. 6,500 ಬಸ್ ಗಳ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಘಟಕ, ಕಚೇರಿ ಹಾಗೂ ಬಸ್ ಗಳ ಸ್ವಚ್ಛತೆ ಮಾಡುವ ಮೂಲಕ ಅಭಿಯಾನವನ್ನು ಕೈಗೊಂಡಿದ್ದೇವೆ. ತಾಂತ್ರಿಕವಾಗಿ ಹಾಗೂ ಮಾನಸಿಕವಾಗಿ ಪ್ರಯಾಣಿಕರಿಗೆ ಯಾವುದೇ ಕಿರಿಕಿರಿಯಾಗದಂತೆ ಸ್ವಚ್ಛತೆ ದೃಷ್ಟಿಯಿಂದ ಈ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದರು.

BMTC fare will go 50 percent cut down if central fund for 150 buses

ರಾಜ್ಯದ 6.500 ಸಾವಿರ ವಾಹನಗಳನ್ನು ಹೊಂದಿದೆ. 4ಲಕ್ಷ ದ್ವಿಚಕ್ರ ವಾಹನವಿದೆ. ಇವುಗಳನ್ನು ದಿನ ಕಳೆದಂತೆ ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದೇವೆ. ಶೇ.37ರಷ್ಟು ವಜ್ರ ಬಸ್ ಗಳ ದರವನ್ನು ಕಡಿಮೆಗೊಳಿಸಿ ಮಧ್ಯಮ ವರ್ಗದವರು ಸಹ ಎಸಿ ಬಸ್‍ನಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ. ಅಲ್ಲದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆಗೆ ತೆರಳುವ ಬಸ್ ಗಳ ದರವನ್ನು ಸಹ ಕಡಿಮೆಗೊಳಿಸಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+