ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1500 ಬಸ್‌ಗಳಿಗೆ ಬಿಎಂಟಿಸಿ ಟೆಂಡರ್ ಆಹ್ವಾನ, ಖಾಸಗೀಕರಣ ಭಯ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸದ್ದಿಲ್ಲದೆ ಗುತ್ತಿಗೆ ಆಧಾರದಲ್ಲಿ 1500 ಡೀಸೆಲ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ.

ಹಲವು ವರ್ಷಗಳ ಹಿಂದೆ ಖಾಸಗಿಯವರಿಂದ ಗುತ್ತಿಗೆಯಲ್ಲಿ ಒಂದು ಸಾವಿರ ಬಸ್ ಪಡೆದು ಕಾರ್ಯಾಚರಣೆ ಮಾಡುವ ಪ್ರಯೋಗ ನಡೆದಿತ್ತು. ಈ ಮಾದರಿ ಬಿಎಂಟಿಸಿ ನಿಗಮ ಹಾಗೂ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಲಾಭ ನೀಡದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು.

ಸಾರಿಗೆ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು, ಖಾಸಗಿ ಬಸ್‌ಗಳಿಗೆ ಅವಕಾಶಸಾರಿಗೆ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು, ಖಾಸಗಿ ಬಸ್‌ಗಳಿಗೆ ಅವಕಾಶ

ಇದೀಗ ಮತ್ತೆ ಖಾಸಗಿಯವರಿಂದ ಬಸ್ ಪಡೆದು ಕಾರ್ಯಾಚರಿಸುವ ಸಾಹಸಕ್ಕೆ ಬಿಎಂಟಿಸಿ ಮುಂದಾಗಿದೆ. ಈಗಾಗಲೇ ಕೇಂದ್ರದ ಫೇಮ್ ಯೋಜನೆಯ ಎರಡನೇ ಹಂತದಲ್ಲಿ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಲ್ಲಿ 300 ವಿದ್ಯುತ್ ಬಸ್ ಪಡೆಯುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಬೆನ್ನಲ್ಲೇ ಗುತ್ತಿಗೆ ಮಾದರಿಯಲ್ಲಿ 1500 ಡೀಸೆಲ್ ಪಡೆಯುವ ಸಂಬಂಧ ಟೆಂಡರ್ ಆಹ್ವಾನಿಸಲಾಗಿದೆ.

BMTC Decided To Induct 1,500 Buses On Lease Basis, Staff Fear Privatisation Move

ಗುತ್ತಿಗೆ ಮಾದರಿಯಲ್ಲಿ ಬಸ್ ಪೂರೈಸುವ ಕಂಪನಿಯೇ ಬಸ್‌ಗಳ ನಿರ್ವಹಣೆ ಮಾಡಬೇಕು. ಬಿಎಂಟಿಸಿ ಕಿ.ಮೀ ಲೆಕ್ಕದಲ್ಲಿ ಕಂಪನಿಗೆ ಹಣ ಪಾವತಿಸಲಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳು ಎಷ್ಟು ಮೊತ್ತಕ್ಕೆ ಬಿಡ್ ಸಲ್ಲಿಸಲಿವೆ ಎಂಬುದರ ಮೇಲೆ ಬಿಎಂಟಿಸಿ ಕಿ.ಮೀಗೆ ದರ ನಿಗದಿ ಮಾಡಲಿದೆ.

Recommended Video

ಎಲ್ಲೆಲ್ಲೂ GO BACK MODI ಘೋಷಣೆ! | Oneindia Kannada

ಟಿಕೆಟ್ ಮಾರಾದಿಂದ ಸಂಗ್ರಹಿಸುವ ಹಣವನ್ನು ಬಿಎಂಟಿಸಿ ಪಡೆದುಕೊಳ್ಳಲಿದೆ. ಈ ಗುತ್ತಿಗೆ ಮಾದರಿ ಬಸ್‌ಗಳ ಬಣ್ಣ ಕೂಡ ಬದಲಾಗಲಿದೆ. ಇದಕ್ಕೆ ಬಿಎಂಟಿಸಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

English summary
BMTC On Monday floated a tender to select a service provider for procurement, operation and maintenance of non AC diesel buses on Lease model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X