BMTC: ವಂಡರ್‌ ಲಾ ಕಡೆಗೆ ಬಿಎಂಟಿಸಿ ಬಸ್‌, ಆಸನ ಕಯ್ದಿರಿಸುವ ವಿಧಾನ ಹಾಗೂ ದರಗಳ ವಿವರ ತಿಳಿಯಿರಿ

ಬೆಂಗಳೂರು, ಜನವರಿ, 05: ಬೆಂಗಳೂರಿನ ಜನರ ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿಯು ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಅಲ್ಲದೆ ಹಬ್ಬಗಳು, ವಿಶೇಷ ಕಾರ್ಯಕ್ರಮಗಳ ಅಮಯದಲ್ಲೂ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಇದೀಗ ನಗರದ ಹೊರ ವಲಯದಲ್ಲಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಬಸ್‌ಗಳನ್ನು ಕಲ್ಪಿಸಿದೆ. ಈ ಸೌಲಭ್ಯ ಯಾವಾಗಿನಿಂದ ಆರಂಭವಾಗಲಿದೆ ಹಾಗೂ ಯವ್ಯಾವ ಮಾರ್ಗಗಳಿಮದ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಇಷ್ಟು ದಿನ ನೇರವಾಗಿ ಬಿಎಂಟಿಸಿ ಬಸ್ ಸೌಲಭ್ಯ ಇರಲಿಲ್ಲ. ಇದೀಗ ಜನವರಿ 15ರಿಂದ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಹಂಚಿಕೆ ಮಾಡಲಾಗಿದ್ದು, ಜನವರಿ 15ರಿಂದ ಮುಂಗಡ ಆಸನ ಕಾಯ್ದಿರಿಸಲು ಬಿಎಂಟಿಸಿಯಿಂದ ವಂಡರ್ ಲಾಗೆ ಶುರು ಮಾಡಲಾಗುತ್ತಿದೆ. ಈ ಬಗ್ಗೆ ಡಿಐಪಿಆರ್‌ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

BMTC Bus Service Start to Wonder Law, Know date and price details

ವಂಡರ್‌ ಲಾಗೆ ತೆರಳುವ ಪ್ರಯಾಣಿಕರಿಗೆ ಅವತಾರ್‌ ತಂತ್ರಾಂಶದಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಬೆಂಗಳೂರು ನಗರದ ವಿವಿಧ ಭಾಗಗಳಿಂದ ನಾಲ್ಕು ಮಾರ್ಗಗಳಲ್ಲಿ ವಂಡರ್‌ ಲಾ ಕಡೆಗೆ 10 ಬಸ್‌ಗಳು ದಿನಕ್ಕೆ 20 ಟ್ರಿಪ್‌ಗಳನ್ನು ಏಕಮುಖವಾಗಿ ನಡೆಸಲಿವೆ. ಜನವರಿ 15ರಿಂದ ಕೆಎಸ್‌ಆರ್‌ಟಿಸಿ ಅವತಾರ್‌ ತಂತ್ರಾಂಶದಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ಮಾರ್ಗಗಳ ವಿವರ: ಮೆಜೆಸ್ಟಿಕ್ ಮತ್ತು ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್ ನಡುವಿನ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ಬೆಂಗಳೂರಿಗರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.

226KBS: ನಾಲ್ಕು ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮತ್ತು ವಂಡರ್ಲಾ ನಡುವೆ ಕಾಟನ್‌ಪೇಟೆ ಆಸ್ಪತ್ರೆ, ಸಿರ್ಸಿ ಸರ್ಕಲ್, ಮೈಸೂರು ರಸ್ತೆ ಬಸ್ ನಿಲ್ದಾಣ, ನಾಯಂಡಹಳ್ಳಿ ಮತ್ತು ಕೆಂಗೇರಿ ಮೂಲಕ ಸಂಚರಿಸಲಿವೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ: ಟಿಕೆಟ್‌ಗಳನ್ನು ಕೆಎಸ್‌ಆರ್‌ಟಿಸಿ ಕೌಂಟರ್‌ಗಳು, ಅಧಿಕೃತ ಆನ್‌ಲೈನ್ (www.ksrtc.in) ಮತ್ತು KSRTC ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.

ಪ್ರವೇಶ ಶುಲ್ಕದಲ್ಲಿ ರಿಯಾಯಿತಿ: ಪ್ರಯಾಣಿಕರು ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಟಿಕೆಟ್ ತೋರಿಸಿದರೆ ವಂಡರ್ಲಾ ಪ್ರವೇಶ ಶುಲ್ಕದಲ್ಲಿ 15% ರಿಯಾಯಿತಿ ಸಿಗುತ್ತದೆ.

ಇನ್ನು ಇ-ಬುಕ್ಕಿಂಗ್ ಸಮಯದಲ್ಲಿ ಒಂದೇ ಬಾರಿ ನಾಲ್ವರು ಅಥವಾ ಅಧಿಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿದರೆ, ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಬಾರಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ, ಮೂಲ ಪ್ರಯಾಣ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+