BMTC: ಬಿಎಂಟಿಸಿ ಬಸ್‌ಗಳ ತಪಾಸಣೆ ತೀವ್ರ: 5706 ಪ್ರಕರಣ, ₹12 ಲಕ್ಷಕ್ಕೂ ಅಧಿಕ ದಂಡ ವಸೂಲಿ

ಬೆಂಗಳೂರು, ಜೂನ್ 29: ರಾಜ್ಯ ರಾಜಧಾನಿ ಜೀವನಾಡಿಯಾಗಿರುವ ಮತ್ತು ನಾಗರಿಕರ ದೈನಂದಿನ ಅವಲಂಬಿತ ಸಾರಿಗೆಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳ ತಪಾಸಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಟಿಕೆಟ್ ಇಲ್ಲದೇ ಪ್ರಯಾಣ ಮಾಡುವವರಿಗೆ ಬುದ್ಧಿ ಕಲಿಸಲು ತಪಾಸಣಾ ಸಿಬ್ಬಂದಿ ನಗರಾದ್ಯಂತ ಕಾರ್ಯಪ್ರವೃತ್ತರಾಗಿದ್ದಾರೆ.

ಬಿಎಂಟಿಸಿ ಬಸ್‌ಗಳ ತಪಾಸಣಾ ಸಿಬ್ಬಂದಿ ಟಿಕೆಟ್ ರಹಿತ ಪ್ರಯಾಣವನ್ನು ಪತ್ತೆಹಚ್ಚಲು ನಗರದ ಒಳಗೆ ಮತ್ತು ಸುತ್ತಮುತ್ತ ಕಾರ್ಯನಿರ್ವಹಿಸುವ ಬಸ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ನಿತ್ಯ ಒಂದಿಲ್ಲೊಂದು ಮಾರ್ಗಗಳಲ್ಲಿ ತಪಾಸಣೆ ಮಾಡುತ್ತಿದ್ದಾರೆ. ಕಳೆದ ಎರಡೇ ತಿಂಗಳಲ್ಲಿ ಬರೋಬ್ಬರಿ 38000ಕ್ಕೂ ಹೆಚ್ಚು ಟ್ರೀಪ್‌ಗಳನ್ನು ಪರಿಶೀಲಿಸಿದ್ದಾರೆ ಇದರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ.

BMTC Bus Intensified Checks and Detected 5706 Ticketless Travel Cases Rs 12 Lakh Fine imposed

ಹಿಂದಿನ ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ತಪಾಸಣಾ ಸಿಬ್ಬಂದಿಯು ಬರೋಬ್ಬರಿ 38,116 ಟ್ರಿಪ್‌ಗಳನ್ನು ಪರಿಶೀಲಿಸಿ 5,706 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದ್ದಾರೆ. ಆ ಎಲ್ಲ ಪ್ರಕರಣಗಳಿಂದ ಒಟ್ಟಾರೆಯಾಗಿ 12,64,051 ರೂಪಾಯಿ ದಂಡ ರೂಪದಲ್ಲಿ ಹಣ ಸಂಗ್ರಹವಾಗಿದೆ.

ಪ್ರಯಾಣಿಕರಿಗೆ ಮಾತ್ರವಲ್ಲದೇ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಬಿಎಂಟಿಸಿ ಅಷ್ಟು ಟ್ರಿಪ್‌ಗಳ ನಿರ್ವಾಹಕರ ವಿರುದ್ಧ 3,500 ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಹಿಳೆಯರಿಗೆ ಮೀಸಲಾದ ಸೀಟುಗಳನ್ನು ಕೂತಿದ್ದಕ್ಕಾಗಿ ಒಟ್ಟು 652 ಪುರುಷ ಪ್ರಯಾಣಿಕರಿಂದ ಒಟ್ಟು 65,200 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಸುಮಾರು 6,358 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ, 13,29,251 ರೂ. ದಂಡ ವಿಧಿಸಲಾಗಿದೆ.

ಬಿಎಂಟಿಸಿ ಹೊಸ ಉಪ್ರಕಮಗಳಿಗೆ ವ್ಯಾಪಕ ಸ್ಪಂದನೆ

ಬಿಎಂಟಿಸಿ ಬಸ್ ಸದ್ಯ 'ಘಾಟಿ-ಈಶಾ ಫೌಂಡೇಶನ್' ಹೆಸರಿನಲ್ಲಿ ಬೆಂಗಳೂರು ಸುತ್ತಮತ್ತಲಿನ ಪ್ರದೇಶಗಳಿಗೆ ಟೂರ್ ಪ್ಯಾಕೇಜ್ಘೋಷಣೆ (BMTC tour package) ಮಾಡಿದೆ. ಶನಿವಾರ ಮತ್ತು ಭಾನುವಾರ ತೆರಳಲು ಅವಕಾಶ ಇದೆ.

ಇದರೊಂದಿಗೆ ಬೆಂಗಳೂರಿನ ಐದು ಪ್ರಮುಖ ಹಾಗೂ ದೂರ ಮಾರ್ಗಗಳಿಗೆ 'ವೇಗಧೂತ ಎಕ್ಸ್‌ಪ್ರೆಸ್' ಬಸ್ (BMTC express bus Service) ಸಾರಿಗೆ ಸೇವೆ ಆರಂಭಿಸಿದೆ. ನೆಲಮಂಗಲ, ಅತ್ತಿಬೆಲೆ, ದೇವನಹಳ್ಳಿ ಹೀಗೆ ಎಕ್ಸ್‌ಪ್ರೆಸ್ ಬಸ್‌ಗಳು ಕಡಿಮೆ ಸಮಯ ಹಾಗೂ ಕಡಿಮೆ ನಿಲುಗಡೆ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಜನರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+