Get Updates
Get notified of breaking news, exclusive insights, and must-see stories!

BMTC: ಎರಡು ಬಿಎಂಟಿಸಿಗಳ ನಡುವೆ ಜಸ್ಟ್‌ ಮಿಸ್‌ ಆದ ಬೈಕ್‌ ಸವಾರ ವಿಡಿಯೋ ವೈರಲ್

ಬೆಂಗಳೂರು, ಡಿಸೆಂಬರ್ 04: ಬೆಂಗಳೂರಿನಲ್ಲಿ ಎಷ್ಟೇ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದರೂ ಸಹಿತ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ರಸ್ತೆ ತುಂಬೆಲ್ಲ ವಾಹನಗಳು ವೇಗವಾಗಿ ಓಡುತ್ತಿರುತ್ತವೆ. ಈ ಮಧ್ಯೆ ಇಲ್ಲೊಬ್ಬ ಬೈಕ್ ಸವಾರ ಅಜಾಗರೂಕತೆ ಮತ್ತು ವೇಗದ ಚಾಲನೆಯಿಂದ ಜೀವಕ್ಕೆ ಕುತ್ತು ತಂದೊಡ್ಡಿಕೊಳ್ಳುತ್ತಿದ್ದ ಘಟನೆ ಬನಶಂಕರಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ. ಈ ಕುರಿತು 'ಕರ್ನಾಟಕ ಪೋರ್ಟ್‌ಫೋಲಿಯೋ' ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು. ವಿಶೇಷವಾಗಿ ಬಸ್ಸುಗಳು, ಲಾರಿಗಳು ಸೇರಿದಂತೆ ದೊಡ್ಡ ದೊಡ್ಡ ವಾಹನಗಳ ಅಕ್ಕಪಕ್ಕ, ಹಿಂದೆ ಮುಂದೆ ಚಲಿಸುವಾಗ ಅಗತ್ಯ ಎಚ್ಚರವಹಿಸಬೇಕು. ಇಲ್ಲವಾದರೆ ಈ ವಿಡಿಯೋದಲ್ಲಿ ಕಾಣುವಂತೆ ತೊಂದರೆಗೆ ಸಿಲುಕಬೇಕಾಗುತ್ತದೆ.

BMTC Bus Hits Bike in Banashankari Video Goes Viral Drive Cautiously

ಬನಶಂಕರಿ ಬಸ್ ನಿಲ್ದಾಣದ ಸಮೀಪ ಮಂಗಳವಾರ ಡಿಸೆಂಬರ್ 3 ರಂದು ಎರಡು ಬಿಎಂಟಿಸಿ ಬಸ್‌ಗಳು ಸಂಚರಿಸುವಾಗ ಮಧ್ಯದಲ್ಲಿ ವೇಗವಾಗಿ ತೆರಳಿ ದಾಟಿಬಿಡಬಹುದು ಎಂಬ ಧಾವಂತದಲ್ಲಿ ಬಂದ ಬೈಕ್ ಸವಾರ ರಸ್ತೆ ಮಧ್ಯೆ ಉರುಳಿ ಬಿದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಧಾವಂತದ ಚಾಲನೆಯಿಂದ ಬೈಕ್ ಸವಾರನಿಗೆ ಕುತ್ತು

ರಸ್ತೆಯಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಬಸ್ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಸಿಗ್ನಲ್ ಮುಂದಿನ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚರಿಸುತ್ತಿದ್ದು, ಅದರ ಹಿಂದೆಯೇ ಅರೆ ಕ್ಷಣ ಅಂತರದಲ್ಲಿ ಮತ್ತೊಂದು ಬಿಎಂಟಿಸಿ ಎಸಿ ಬಸ್ ಬರುತ್ತಿದೆ. ಅದಕ್ಕು ಮೊದಲೇ ತಾನು ಓವರ್‌ಟೆಕ್ ಮಾಡಬೇಕೆಂದುಕೊಂಡ ಬೈಕ್ ಸವಾರು ವೇಗವಾಗಿ ಚಲಿಸಿದ್ದಾರೆ.

BMTC Bus Hits Bike in Banashankari Video Goes Viral Drive Cautiously

ಆದರೆ ಅರೇಕ್ಷಣದಲ್ಲಿ ಹಿಂದೆ ಬಸ್‌ ಸವಾರನ ಬೈಕಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಬ್ರೇಕ್ ಹಾಕಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬಿಟ್ಟು ಸವಾರ ಉರುಳಿ ಬಿದ್ದಿದ್ದಾರೆ. ಬಸ್ ಚಾಲಕನ ಸಮಯ ಪ್ರಜ್ಞೆಗೆ ಜೀವಕ್ಕೆ ಅಪಾಯವಾಗಿಲ್ಲ ಎನ್ನಲಾಗಿದೆ. ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಆಗಿದೆ. ಕೂಡಲೇ ಸವಾರನನ್ನು ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ರಸ್ತೆ ಬದಿಗೆ ಕೈ ಹಿಡಿದು ಕರೆದುಕೊಂಡು ಹೋಗಿದ್ದಾರೆ. ಸಂಚಾರ ಕುರಿತು ತಿಳಿ ಹೇಳಿದ್ದಾರೆ.

ವಾಹನಗಳ ಚಾಲನೆ ವೇಳೆ ಅಂತರ ಕಾಯ್ದುಕೊಳ್ಳಬೇಕು

ಇಂತಹ ದೊಡ್ಡ ವಾಹನಗಳ ಅಕ್ಕ ಪಕ್ಕದಲ್ಲಿ ಚಲಿಸುವಾಗ ಅಂತರ ಕಾಯ್ದುಕೊಳ್ಳಬೇಕು. ನಿಧಾನವಾಗಿ ಚಲಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ಸಂಭವಿಸುತ್ತವೆ. ಜೀವ ಹಾನಿ ಸಾಧ್ಯತೆ ಇರುತ್ತದೆ ಎಂದು ಈ ವಿಡಿಯೋ ಜಾಗೃತಿ ಮೂಡಿಸುತ್ತದೆ.

ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ ಬಗ್ಗೆ ಸದಾ ಎಚ್ಚರ ವಹಿಸಬೇಕು. ಕೆಲವೊಮ್ಮೆ ಬಸ್‌ನಂತರ ದೊಡ್ಡ ವಾಹನಗಳ ಚಾಲನೆ ವೇಳೆ ಅಕ್ಕ ಪಕ್ಕದ ಬೈಕ್‌ಗಳು ಕಾಣದೇ ಹೋದಲ್ಲಿ ಇನ್ನೋ ದೊಡ್ಡ ಅಪಾಘಾತವಾಗಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು, ಇತರ ವಾಹನಗಳು ಚಾಲಕರು ಅಗತ್ಯ ಎಚ್ಚರಿಕೆ ವಹಿಸುವುದು ಅಗತ್ಯವಿರುತ್ತದೆ. ಸುರಕ್ಷತೆಗೆ ಆದ್ಯತೆ ಕೊಟ್ಟು ಚಾಲನೆ ಮಾಡುವಂತೆ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+