ಟಿಕ್ ಟಾಕ್ ನಲ್ಲಿ ಮಿಂಚುತ್ತಿದ್ದಾರೆ ಈ ಬಿಎಂಟಿಸಿ ಕಂಡಕ್ಟರ್

ಬೆಂಗಳೂರು, ಮೇ 27: ಟಿಕ್ ಟಾಕ್ ಎಂಬ ಜನಪ್ರಿಯ ಸಾಮಾಜಿಕ ಜಾಲತಾಣ ಬಂದ ಮೇಲೆ ಯಾರಿಗೂ ಗೊತ್ತಿರದಿದ್ದ ಅನೇಕ ಪ್ರತಿಭೆಗಳು ಇಂದು ಮಿಲಿಯನ್‌ಗಟ್ಟಲೆ ಪಾಲೋವರ್ ಗಳನ್ನು ಹೊಂದಿ ಸಿನಿಮಾ ತಾರೆಗಳ ಸಮವಾಗಿ ಮಿಂಚುತ್ತಿದ್ದಾರೆ.

ಕೆಲಸ ಮಾಡುವವರಿಗೂ ಬಿಡುವಿನ ವೇಳೆಯಲ್ಲಿ ತಮ್ಮ ಪ್ರತಿಭೆ ತೋರಿಸಲು ಟಿಕ್ ಟಾಕ್ ಅತ್ಯುತ್ತಮ ವೇದಿಕೆಯಾಗಿದೆ.

ನಮ್ಮ ಬೆಂಗಳೂರಿನ ಹೆಮ್ಮೆಯ ಬಿಎಂಟಿಸಿಯಲ್ಲಿಯೂ ಅನೇಕ ಸಿಬ್ಬಂದಿ ವಿವಿಧ ಕ್ಷೇತ್ರದಲ್ಲಿ ಪ್ರತಿಭಾವಂತರಿದ್ದಾರೆ. ಅಂತವರು ಸಮಯ ಸಿಕ್ಕಾಗ ತಮ್ಮ ಪ್ರತಿಭೆ ತೋರಿಸಿ ಉನ್ನತ ಅಧಿಕಾರಿಗಳಿಂದ ಶಹಬ್ಬಾಸಗಿರಿಯನ್ನು ಪಡೆದಿರುತ್ತಾರೆ. ಇವರ ಸಾಲಿಗೆ ಈಗ ಬಿಎಂಟಿಸಿ ಕಂಡಕ್ಟರ್ ಯೋಗಿಶ್ ಎನ್ನುವರು ಸೇರುತ್ತಾರೆ.

BMTC Bus Conductor Shining On TikTok

ಯೋಗೀಶ್ ಅವರು yogishachyogi ಯುಸರ್ ನೇಮ್ ನಲ್ಲಿ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾರೆ. ಅಲ್ಲದೆ ಇವರು ಬಿಎಂಟಿಸಿ ಬಗ್ಗೆ ಹಾಗೂ ಪ್ರಯಾಣಿಕರಿಗೆ ಕೊರೊನಾ ಜಾಗೃತಿ ಬಗ್ಗೆ ವಿಡಿಯೋ ಮಾಡಿ ಹಾಕುತ್ತಾರೆ. ಡ್ಯಾನ್ಸ್ ಕೂಡ ಮಾಡುತ್ತಾರೆ. ಸದ್ಯ ಇವರಿಗೆ ಟಿಕ್ ಟಾಕ್ ನಲ್ಲಿ 16 ಸಾವಿರ ಬಳಕೆದಾರರು ಪಾಲೋವರ್ಸ್ ಇದ್ದಾರೆ.

ತಮ್ಮ ಇತರ ಸಿಬ್ಬಂದಿ ಜೊತೆ ವಿಡಿಯೋಗಳನ್ನು ಕೂಡ ಯೋಗೀಶ್ ಮಾಡಿದ್ದಾರೆ. ಟಿಕ್ ಟಾಕ್ ನಿಂದ ಬಿಎಂಟಿಸಿ ಸಿಬ್ಬಂದಿ ಗೆ ಯೋಗೀಶ್ ಹೊಸ ಹುರುಪು ತಂದಿದ್ದಾರೆ. ಒಟ್ಟಿನಲ್ಲಿ ನಮ್ಮ ಬಿಎಂಟಿಸಿ ಸಿಬ್ಬಂದಿ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ಯೋಗೀಶ್ ತೋರಿಸಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಇತರ ಸಿಬ್ಬಂದಿಗೂ ಯೋಗೀಶ್ ಟಿಕ್ ಟಾಕ್ ಮಾಡಲು ಪ್ರೇರಣೆಯಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+