ಪ್ರಯಾಣಿಕನಿಗೆ 'ಕೂತಕೊಳ್ಳೊ ಗೂಬೆ ನನ್ಮಗನೇ' ಎಂದ ಬಿಎಂಟಿಸಿ ಕಂಡಕ್ಟರ್
ಬೆಂಗಳೂರು, ಮಾರ್ಚ್ 7: ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಸಾರ್ವಜನಿಕ ಸಾರಿಗೆಗೆ ಹೆಸರುವಾಸಿಯಾಗಿದೆ. ಆದರೆ, ಕೆಲವೊಮ್ಮೆ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ತೋರುವ ಅತಿರೇಕದ ವರ್ತನೆಯಿಂದ ಬಿಎಂಟಿಸಿ ಕುಖ್ಯಾತವೂ ಆಗಿದೆ.
ಬಿಎಂಟಿಸಿ ಬಸ್‌ನ ನಿರ್ವಾಹಕನೊಬ್ಬ ಪ್ರಯಾಣಿಕನ ಜೊತೆ ದುರ್ವರ್ತನೆ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಗೆ ಸಬಂಧಿಸಿದಂತೆ ಕನ್ನಡ ಬಾರದ ರಾಹುಲ್ ಸಿಂಗ್ ಎನ್ನುವರು ವಿಡಿಯೋ ಒಂದನ್ನು ಟ್ವೀಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಎಂಟಿಸಿ ಟ್ವಿಟ್ಟರ್ ಪೇಜ್‌ಗೆ ವಿಡಿಯೋವನ್ನು ಟ್ಯಾಗ್ ಮಾಡಿ, ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
@BMTC_BENGALURU @whitefieldtrfps
— Rahul Singh (@RahulSinghKanha) March 7, 2020
I need action on this . Asap pic.twitter.com/iDzIlEvBCs
ಆಸನದ ಸಂಬಂಧ ರಾಹುಲ್ ಸಿಂಗ್ ಹಾಗೂ ಬಿಎಂಟಿಸಿ ಚಾಲಕನ ನಡುವೆ ವಾಗ್ವಾದ ನಡೆಯುವಾಗ, ರಾಹುಲ್ ಸಿಂಗ್ ಹಿಂದಿಯಲ್ಲಿ ಮಾತನಾಡಿದ್ದಾರೆ. ಆಗ ನಿರ್ವಾಹಕ ಕೂತಕೊಳ್ಳೊ ಗೂಬೆ ನನ್ಮಗನೇ ಎಂದು ಬೈಯದಿದ್ದಾನೆ. ಇದರಿಂದ ಸಿಟ್ಟಾದ ರಾಹುಲ್ ವರ್ತನೆ ಸರಿಪಡಿಸಿಕೊಳ್ಳಿ ಎಂದು ವಾಗ್ವಾದ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ, ಅತಿರೇಕದ ವರ್ತನೆ ತೋರಿದ ಬಸ್ ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಬಸ್ ಓವರಟೇಕ್ ಮಾಡಿದಾ ಎಂದು ಬೈಕ್ ಸವಾರನೊಬ್ಬನನ್ನು ಬಿಎಂಟಿಸಿ ವಜ್ರ ಬಸ್ ಚಾಲಕ ಥಳಿಸಿರುವ ಘಟನೆ ನಡೆದಿತ್ತು. ಹಮೀದ್ ಎನ್ನುವರು, ರಸ್ತೆಗಿಳಿದು ಜನರನ್ನು ಥಳಿಸುವ ಅಧಿಕಾರವನ್ನು ಬಿಎಂಟಿಸಿ ಚಾಲಕನಿಗೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದರು.












Click it and Unblock the Notifications