ಬೆಂಗಳೂರಿನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: "ಆರ್ಬಿಟ್ ವಾಲೆಟ್ ರುಪೇ ಕಾರ್ಡ್'...BMTC-BMRCL
ಬೆಂಗಳೂರು, ನವೆಂಬರ್ 12: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ಯೋಜನೆ, ಉಪಕ್ರಮ ಘೋಷಿಸುತ್ತಿರುತ್ತದೆ. ಇದೀಗ ಇವೆರೆಡು ಸಂಸ್ಥೆಗಳು ಮಾತ್ರವಲ್ಲೇ ಇತರ ಸಂಸ್ಥೆಗಳ ಜೊತೆಗೂ ಬೆಂಗಳೂರಿನ ಈ ಭಾಗದ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. "ಆರ್ಬಿಟ್ ವಾಲೆಟ್ ರುಪೇ ಕಾರ್ಡ್' (Orbit Wallet RuPay cards) ವಿತರಣೆಗೆ ಮುಂದಾಗಿದೆ. ಏನಿದು, ಪ್ರಯೋಜನ, ಬಳಕೆ ವಿವರ ಇಲ್ಲಿದೆ.
ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ ಸಿಟಿಗೆ ಇತ್ತೀಚೆಗೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸೇವೆ ವಿಸ್ತರಣೆ ಆಗಿದೆ. ಆಗಸ್ಟ್ ತಿಂಗಳಿನಿಂದ ಇಲ್ಲಿಗೆ ಸಾರಿಗೆ ಸಂಪರ್ಕ ಮತ್ತಷ್ಟು ಸುಲಭವಾಗಿದೆ. ಈ ಮಧ್ಯ ಎಲೆಕ್ಟ್ರಾನಿಕ್ ಸಿಟಿ ಉದ್ಯೋಗಿಗಳಿಗೆ ಮೆಟ್ರೋ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಲು BMRCL, ELCIA, ಟೊಯೋಟಾ ಮೊಬಿಲಿಟಿ ಫೌಂಡೇಶನ್ ಮತ್ತು WRI ಇಂಡಿಯಾ ಜೊತೆ BMTC ಸಹಯೋಗ ಘೋಷಿಸಲಾಗಿದೆ ಎಂದು ಸ್ವತಃ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಬುಧವಾರ ತಿಳಿಸಿದ್ದಾರೆ.

ಹೌದು, ಮೊದಲ 250 ಉದ್ಯೋಗಿಗಳು "ಆರ್ಬಿಟ್ ವಾಲೆಟ್ ರುಪೇ ಕಾರ್ಡ್'ಗಳ ಮೂಲಕ ₹1,500 ಪಡೆಯಲಿದ್ದಾರೆ.
STAMP ಕಾರ್ಯಕ್ರಮದ ಅಡಿಯಲ್ಲಿ ಈ ಉಪಕ್ರಮವು ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಸಾರ್ವಜನಿಕರಿಗೆ ಸುಸ್ಥಿರ ಮತ್ತು ಅನುಕೂಲಕರ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬಳಕೆ, ಏನಿದರ ಪ್ರಯೋಜನ
ಬೆಂಗಳೂರಿನ ದೀರ್ಘಕಾಲದ ಸಂಚಾರ ಸಮಸ್ಯೆಗಳ ನಡುವೆ ಮೆಟ್ರೋ ಮತ್ತು BMTC ಬಸ್ ಬಳಕೆಯನ್ನು ಈ ಕಾರ್ಡ್ ಉತ್ತೇಜಿಸುತ್ತದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬೆಂಬಲಿಸುವ ಮೂಲಕ ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಮೊದಲ 250 ಎಲೆಕ್ಟ್ರಾನಿಕ್ಸ್ ಸಿಟಿ ಉದ್ಯೋಗಿಗಳಿಗೆ ಆರ್ಬಿಟ್ ವಾಲೆಟ್ ರುಪೇ ಕಾರ್ಡ್‌ಗಳ ಮೂಲಕ 1,500 ರೂಪಾಯಿ ಸಾರಿಗೆ ಕ್ರೆಡಿಟ್ ಪಡೆಯುತ್ತಾರೆ. ಇದರಿಂದ ಅವರು ಮೆಟ್ರೋ, ಬಿಎಂಟಿಸಿಗಳನ್ನು ಸಂಚಾರ ಮಾಡಬಹುದಾಗಿದೆ. ಸ್ಟೇಷನ್ ಆಕ್ಸೆಸ್ ಮತ್ತು ಮೊಬಿಲಿಟಿ ಪ್ರೋಗ್ರಾಂ (STAMP) ಪ್ರೋತ್ಸಾಹಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
Thrilled to announce BMTC collaboration with BMRCL, ELCIA, Toyota Mobility Foundation, and WRI India, to launch a metro incentive scheme for Electronics City employees!
— Ramalinga Reddy (@RLR_BTM) November 11, 2025
The first 250 employees will receive ₹1,500 through Orbit Wallet RuPay cards.
This initiative under the… pic.twitter.com/JXAoJxh3M4
ಬ್ರಾಂಡೆಡ್ ರುಪೇ ಕಾರ್ಡ್, STAMP 2025 ಬ್ಯಾನರ್ ಅಡಿಯಲ್ಲಿ ELCIA ಪ್ರಧಾನ ಕಚೇರಿಯಲ್ಲಿ ಸಹಯೋಗಿಗಳ ಗುಂಪಿಗೆ ಕಾರ್ಡ್ ವಿತರಿಸಲಾಗಿದೆ. ಬೆಂಗಳೂರಿನ ಸಸ್ಥಿರ ಚಲನಶೀಲತೆ ಭಾಗವಾಗಿ ಈ ಉಪಕ್ರಮ ಘೋಷಿಸಲಾಗಿದೆ. ಪ್ರಯಾಣ ದರ ಕಡಿತ ಮತ್ತು ರೈಲು ಆವರ್ತನದಲ್ಲಿನ ಹೆಚ್ಚಳದಂತಹ ಪ್ರಯಾಣಿಕರ ಆದ್ಯತೆಗಳು ಗಮನದಲ್ಲಿವೆ ಎಂದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications