ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೇಲ್‌ ಬಸ್‌ ಜಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು: ಭಾರೀ ಬದಲಾವಣೆಗೆ ಮುಂದಾದ ಬಿಎಂಟಿಸಿ- ಎಷ್ಟು ಬಸ್‌? ಎಷ್ಟು ಹಣ? ಯಾವ ಕಂಪನಿ?

ಡಿಸೇಲ್‌ ಬಸ್‌ ಜಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಬದಲಿಸಲು ಬಿಎಂಟಿಸಿ ಮುಂದಾಗಿದೆ. ಹಾಗಾದರೆ, ಬಿಎಂಟಿಸಿ ಎಷ್ಟು ಬಸ್‌ಗಳಿಗೆ ಆರ್ಡರ್ ಮಾಡಿದೆ? ಯಾವ ಕಂಪನಿಗೆ ಆರ್ಡರ್‌ ನೀಡಿದೆ? ಇ- ಬಸ್‌ಗಳಿಗೆ ಕೊಟ್ಟ ಹಣವೆಷ್ಟು? ಇ ಬಸ್‌ಗಳ ಬಗ್ಗೆ ಚಾಲಕರು ಏನಂತಾರೆ? ಅನ್ನೋದರ ಬ

|
Google Oneindia Kannada News

ಬೆಂಗಳೂರು, ಜನವರಿ 24: BMTC ಕೆಲವು ತಿಂಗಳುಗಳ ಹಿಂದೆ ಟಾಟಾ ಸಮೂಹದಿಂದ 900 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಮಾಡಿದೆ. JBM ಆಟೋ ಮತ್ತು ಸ್ವಿಚ್ ಮೊಬಿಲಿಟಿ, ಅಶೋಕ್ ಲಾಯ್‌ಲ್ಯಾಂಡ್‌ನ ಅಂಗಸಂಸ್ಥೆಯೊಂದಿಗೆ 390 ಹೊಸ ಬಸ್‌ಗಳ ಒಪ್ಪಂದಕ್ಕೆ ಸಹಿ ಹಾಕಿದೆ. BMTC ಇ-ಬಸ್‌ಗಳ ಖರೀದಿಗಾಗಿ JBM ಗೆ 130 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಅಶೋಕ್ ಲಾಯ್ಲ್ಯಾಂಡ್‌ನ ಪ್ರತಿ ಬಸ್‌ಗೆ 83 ಲಕ್ಷ ರೂಪಾಯಿ ಹೂಡಿಕೆ ಮಾಡಿದೆ. 2020 ರಲ್ಲಿ ನಗರದಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಪರಿಚಯಿಸಲಾಯಿತು. ಈಗ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಾಡಿಗೆ ಕಂಪನಿಗಳು ಸಹ ಈ ಎಲೆಕ್ಟ್ರಿಕ್ ವೆಹಿಕಲ್ಸ್‌ಗೆ (ಇವಿ) ಮೊರೆ ಹೋಗುತ್ತಿವೆ. ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ಬೆಂಗಳೂರಿಗರು ಹೆಚ್ಚು ಅವಲಂಬಿಸಿರುವುದು ಸಿಟಿ ಬಸ್ ಸೇವೆಗಳನ್ನು. ಈ ಸನ್ನಿವೇಶದಲ್ಲಿ ಡಿಸೆಂಬರ್ 2021 ರಲ್ಲಿ ಪ್ರಾರಂಭವಾದ ಎಲೆಕ್ಟ್ರಿಕ್ ಬಸ್‌ ಸೇವೆಯನ್ನು ಹೆಚ್ಚು ಕಾರ್ಯಗತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ. ಈ ಬಸ್‌ ಸಂಖ್ಯೆಗಳು ಸಾಧಾರಣವಾಗಿದ್ದರೂ, ಈ ಬಸ್ಸುಗಳು ಇಂದು ಬೆಂಗಳೂರಿನ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಕುರಿತು 'ಸಿಟಿಜನ್‌ ಮ್ಯಾಟರ್ಸ್‌' ವೆಬ್‌ಸೈಟ್‌ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಓಡಿಸಿದ ಹಳೇ BMTC ಬಸ್‌ಗಳನ್ನು ಬೆಳಗಾವಿಗೆ ಬಿಡಲು ನಿರ್ಧಾರ: ಈ ನಿಲುವು ಸರಿಯೇ?ಬೆಂಗಳೂರಿನಲ್ಲಿ ಓಡಿಸಿದ ಹಳೇ BMTC ಬಸ್‌ಗಳನ್ನು ಬೆಳಗಾವಿಗೆ ಬಿಡಲು ನಿರ್ಧಾರ: ಈ ನಿಲುವು ಸರಿಯೇ?

 ಆರಾಮದಾಯಕ ಪ್ರಯಾಣ

ಆರಾಮದಾಯಕ ಪ್ರಯಾಣ

ಪ್ರಸ್ತುತ, BMTC ಎರಡು ಮಾದರಿಗಳನ್ನು ಎಲಿಕ್ಟ್ರಿಕ್‌ ಬಸ್‌ಗಳನ್ನು ನಿರ್ವಹಿಸುತ್ತಿದೆ. ಅಶೋಕ್ ಲಾಯ್‌ಲ್ಯಾಂಡ್ ಒಡೆತನದ ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನಿಂದ ನೇರಳೆ ಬಸ್ ಮತ್ತು JBM ಆಟೋದಿಂದ ಹಸಿರು ಬಣ್ಣದ ಬಸ್. ಹಸಿರು ಬಸ್ಸುಗಳು 30 ಆಸನ ಸಾಮರ್ಥ್ಯದೊಂದಿಗೆ ಚಿಕ್ಕದಾಗಿದೆ ಮತ್ತು ನೇರಳೆ ಬಸ್ಸುಗಳು 40-45 ಜನರು ಕುಳಿತುಕೊಳ್ಳಬಹುದು.

 ಪ್ರಸ್ತುತ ಇ- ಬಸ್‌ಗಳ ಸಂಖ್ಯೆ

ಪ್ರಸ್ತುತ ಇ- ಬಸ್‌ಗಳ ಸಂಖ್ಯೆ

ಪ್ರಸ್ತುತ, ಸರಿಸುಮಾರು 390 ಇ-ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸ್ವಿಚ್ ಮೊಬಿಲಿಟಿಯಿಂದ 300 ಮತ್ತು ಜೆಬಿಎಂ ಆಟೋದಿಂದ 90 ಇವೆ. ಈ ಬಸ್‌ಗಳ ಚಾಲಕರು ಹೆಚ್ಚಾಗಿ ಪೂರೈಕೆದಾರ ಕಂಪನಿಯವರಾಗಿದ್ದರೆ, ಕಂಡಕ್ಟರ್‌ಗಳು ಬಿಎಂಟಿಸಿಯವರಾಗಿದ್ದಾರೆ. ಇ-ಬಸ್‌ಗಳು ಮೂರು ಡಿಪೋಗಳಿಂದ ಕಾರ್ಯನಿರ್ವಹಿಸುತ್ತವೆ: ಯಲಹಂಕ, ಬಿಡದಿ ಮತ್ತು ಅತ್ತಿಬೆಲೆ. 90 ಮಿನಿ (ಸಣ್ಣ) ಇ-ಬಸ್‌ಗಳು ಯಶವಂತಪುರ, ಕೆಆರ್ ಪುರಂ ಮತ್ತು ಕೆಂಗೇರಿ ಡಿಪೋಗಳಿಂದ ಮುಖ್ಯವಾಗಿ ಮೆಟ್ರೋ ಫೀಡರ್ (ಎಂಎಫ್) ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದವು ದೀರ್ಘ ಮಾರ್ಗದ ಬಸ್‌ಗಳು. ಇವುಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಕೆಂಪೇಗೌಡ ಬಸ್ ನಿಲ್ದಾಣ (ಕೆಬಿಎಸ್), ಕೆಂಗೇರಿ, ಯಶವಂತಪುರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳಲ್ಲಿ ಡಿಪೋಗಳಲ್ಲಿ ಸ್ಥಾಪಿಸಲಾಗಿದೆ.

 ಇ-ಬಸ್‌ಗಳನ್ನು ಓಡಿಸುವುದು ಸುಲಭ

ಇ-ಬಸ್‌ಗಳನ್ನು ಓಡಿಸುವುದು ಸುಲಭ

ಇ-ಬಸ್‌ನ ಚಾಲಕ ವಿನೋದ್, ಇ-ಬಸ್ ಮತ್ತು ಸಾಮಾನ್ಯ ಬಸ್‌ಗಳ ನಡುವಿನ ವ್ಯತ್ಯಾಸ ಮತ್ತು ಅವುಗಳಿಗೆ ನೀಡಲಾದ ವಿಶೇಷ ತರಬೇತಿಯನ್ನು ವಿವರಿಸಿದ್ದಾರೆ. '15 ದಿನಗಳ ಕಾಲ ವಿಶೇಷ ತರಬೇತಿ ಇತ್ತು. ಪುಟ್ಟೇನಹಳ್ಳಿಯ ಯಲಹಂಕ ಡಿಪೋದಲ್ಲಿ ತರಬೇತಿ ನಡೆಯುತ್ತದೆ. ಅವರು ಬಸ್‌ನ ಒಳ ಮತ್ತು ಹೊರಗಿನ ಪ್ರಕ್ರಿಯೆಯನ್ನು ಕಲಿಸುತ್ತಾರೆ. ಇದು ರಸ್ತೆಗಳಲ್ಲಿ ಸಂಚರಿಸುವ ಸಾಮಾನ್ಯ ಬಸ್‌ಗಳಿಗಿಂತ ಹೇಗೆ ಭಿನ್ನವಾಗಿದೆ? ಬಸ್‌ಗಳ ಚಾರ್ಜ್‌ಗಾಗಿ ತರಬೇತಿ ಅವಧಿಯೂ ಎಷ್ಟು? ಎಂಬುದನ್ನು ಕಲಿಸಿಕೊಡುತ್ತಾರೆ. 15 ದಿನಗಳ ಕೊನೆಯಲ್ಲಿ, ಕಲಿಸಿದ ಎಲ್ಲಾ ವಿಷಯಗಳ ಬಗ್ಗೆ ಪ್ರಯೋಗಿಕ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಬಸ್ ಓಡಿಸಲು ಅನುಮತಿ ಪಡೆಯಲು ಈ ಪರೀಕ್ಷೆಯಲ್ಲಿ ಪಾಸಾಗಬೇಕು. ಚಾಲನೆ ಮಾಡಲು ಸುಲಭವಾಗುವುದರಿಂದ ನಾನು ಖಂಡಿತವಾಗಿಯೂ ಎಲೆಕ್ಟ್ರಿಕ್ ಅನ್ನು ಇಷ್ಟಪಡುತ್ತೇನೆ. ಎಲೆಕ್ಟ್ರಿಕ್ ಬಸ್‌ಗಳಿಗೆ ಯಾವುದೇ ಗೇರ್ ಇಲ್ಲ. ಆದ್ದರಿಂದ ಅದನ್ನು ನಿಯಂತ್ರಿಸಲು ಸುಲಭವಾಗಿದೆ' ಎಂದು ವಿನೋದ್‌ ಹೇಳಿದ್ದಾರೆ.

 ಟಿಕೆಟ್‌ ದರಗಳ ಬಗ್ಗೆ ತಿಳಿಯಿರಿ

ಟಿಕೆಟ್‌ ದರಗಳ ಬಗ್ಗೆ ತಿಳಿಯಿರಿ

BMTC ನಲ್ಲಿ ಐದು ವರ್ಷಗಳಿಂದ ಕೆಲಸ ಮಾಡಿದ ಕಂಡಕ್ಟರ್ ಸುದೀಪ್, 'ದರಗಳು ಸಾಮಾನ್ಯ ಬಸ್‌ಗಳಂತೆಯೇ ಇರುತ್ತವೆ ಮತ್ತು ಸಾಮಾನ್ಯ ಬಸ್ ಪಾಸ್ ಅನ್ನು ಇ-ಬಸ್‌ಗಳಿಗೂ ಬಳಸಬಹುದು. ಕನಿಷ್ಠ ದರವು ರೂ 5 ರಿಂದ ಪ್ರಾರಂಭವಾಗುತ್ತದೆ. ಪ್ರತಿ ನಂತರದ ನಿಲ್ದಾಣಗಳು ಹೆಚ್ಚುವರಿ ರೂ 5 ಆಗಿರುತ್ತದೆ. ಅವರ ಬಸ್ ಸಿಲ್ಕ್ ಬೋರ್ಡ್‌ನಿಂದ ಪ್ರಾರಂಭವಾಗಿ ಹೆಬ್ಬಾಳದವರೆಗೆ ಹೋಗುತ್ತದೆ' ಎಂದು ತಿಳಿಸಿದ್ದಾರೆ.

English summary
BMTC has decided to implement more electric bus service which started in December 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X