• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ

|

ಬೆಂಗಳೂರು, ಜನವರಿ 01: ಇಂದಿನಿಂದ ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರವನ್ನು ಕಡಿತಗೊಳಿಸಲಾಗುತ್ತಿದೆ.

ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಎಂಟಿಸಿ ಈ ನಿರ್ಧಾಕ್ಕೆ ಘೋಷಿಸಿದೆ. ಬಿಎಂಟಿಸಿಯು ಎಸಿ ಬಸ್‌ಗಳ ಟಿಕೆಟ್ ದರದಲ್ಲಿ ಶೇ.20ರಷ್ಟು ಕಡಿತ ಮಾಡಿದೆ.

ಜನವರಿ 1ರಿಂದ ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಳಿಕೆ

ದೈನಂದಿನ ಪಾಸ್‌ ದರವನ್ನು 147 ರೂ. ಗಳಿಂದ 120 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು 5 ರೂ. ನಿಂದ 20 ರೂ.ವರೆಗೆ ಇಳಿಕೆ ಮಾಡಲಾಗಿದೆ. ಸಾಮಾನ್ಯ ಸೇವೆಗಳ ಮಾಸಿಕ (1050 ರೂ.) ಮತ್ತು ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ (945 ರೂ.) ಪಾಸುದಾರರು ಚಾಲ್ತಿಯಲ್ಲಿರುವ ಪಾಸ್‌ ತೋರಿಸಿ ಭಾನುವಾರಗಳಂದು ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಟಿಕೆಟ್‌, ಪಾಸ್‌ ದರಗಳನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಇಳಿಕೆ ಮಾಡಿದ್ದು, ಮಾಸಿಕ ಪಾಸ್‌ 363 ರೂ. ಮತ್ತು ದೈನಂದಿನ ಪಾಸ್‌ ದರವನ್ನು 27 ರೂ.ನಷ್ಟು ಕಡಿಮೆ ಮಾಡಲಾಗಿದೆ. ವೋಲ್ವೊ ಮಾಸಿಕ ಬಸ್‌ ಪಾಸ್‌ನ ಪ್ರಸ್ತುತ ದರವು ಜಿಎಸ್‌ಟಿ ಸೇರಿ 2363 ರೂ. ಇದೆ. ಆದರೆ ಇಂದಿನಿಂದ ಈ ದರವನ್ನು 2000 ರೂ.ಗಳಿಗೆ ಇಳಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸಾಮಾನ್ಯ ಹಾಗೂ ವಜ್ರ ಬಸ್‌ಗಳ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

English summary
Travelling on the BMTC’s Vajra air-conditioned buses will be cheaper as the city transporter has slashed the fares by up to Rs 27 and cut the monthly and daily pass rates in order to boost ridership hit hard by the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X