• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರ ಪೇಟಿಎಂನಲ್ಲಿ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್

|

ಬೆಂಗಳೂರು, ಜನವರಿ 18: ಶೀಘ್ರವೇ ಪೇಟಿಎಂ ಮೂಲಕ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡುವ ಅವಕಾಶವನ್ನು ಬಿಎಂಆರ್‌ಸಿಎಲ್ ಕಲ್ಪಿಸಿಕೊಡಲಿದೆ.

ಮೆಟ್ರೋ ನಿಗಮದ ವೆಬ್‌ಸೈಟ್, ಅಥವಾ ನಿಲ್ದಾಣದಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ, ನಿಗಮದ ಅಪ್ಲಿಕೇಷನ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು.

2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಬರಲಿವೆ ಮೆಟ್ರೋ ಬೋಗಿಗಳು2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಬರಲಿವೆ ಮೆಟ್ರೋ ಬೋಗಿಗಳು

ಆದರೆ ಸಾಕಷ್ಟು ಮಂದಿ ಕಾರ್ಡ್ ಬಳಸುತ್ತಿರಲಿಲ್ಲ, ಟೋಕನ್ ಮೂಲಕವೇ ಸಂಚರಿಸುತ್ತಿದ್ದರು, ಆದರೆ ಕೊರೊನಾ ನಂತರ ಕೇವಲ ಕಾರ್ಡ್ ಹೋಮದಿದವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ.

ಹಾಗಾಗಿ ಎಲ್ಲರೂ ಮೆಟ್ರೋ ಕಾರ್ಡ್ ಪಡೆಯುತ್ತಿದ್ದಾರೆ, ಆದರೆ ನಿಲ್ದಾಣದಲ್ಲಿ ನಿಂತು ರೀಚಾರ್ಜ್ ಮಾಡುವುದು ಕಷ್ಟವಾಗಿದೆ. ಹೀಗಾಗಿ ಪೇಟಿಎಂ ಮೂಲಕ ರೀಚಾರ್ಜ್ ಮಾಡಲು ಅವಕಾಶ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದರು.

ಇದೀಗ ಬಿಎಂಆರ್‌ಸಿಎಲ್ ಇದಕ್ಕೆ ಸಮ್ಮತಿ ನೀಡಿದ್ದು, ಪೇಟಿಯಂ ಮೂಲಕ ಕಾರ್ಡ್ ರೀಚಾರ್ಜ್‌ಗೆ ಶೀಘ್ರ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದೆ.

ಈ ಮೂಲಕ ಬಿಎಂಆರ್‌ಸಿಎಲ್ ಮತ್ತು ಆನ್‌ಲೈನ್ ಪಾವತಿ ಸೇವೆ ಒದಗಿಸುವ ಪೇಟಿಎಂ ಜತೆ ಒಪ್ಪಂದ ಮಾಡಿಕೊಂಡಿದೆ.ಪೇಟಿಎಂ ಅಲ್ಲದೆ ಫೋನ್ ಪೇ ಕೂಡ ಈ ಸೌಲಭ್ಯ ಒದಗಿಸಲು ಮುಂದೆ ಬಂದಿದೆ. ಹಾಗೆಯೇ ಇನ್ನೂ ಸಾಕಷ್ಟು ಸರ್ವೀಸ್ ಪ್ರೊವೈಡರ್‌ಗಳು ಈ ಕುರಿತು ಆಸಕ್ತಿಯನ್ನು ತೋರಿವೆ. ಕೆಲವೇ ದಿನಗಳ ಈ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನುವ ಭರವಸೆಯನ್ನು ಬಿಎಂಆರ್‌ಸಿಎಲ್ ನೀಡಿದೆ.

English summary
BMRCL will offer the opportunity to recharge Namma Metro Smart Card through Paytm soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X