ನಮ್ಮ ಮೆಟ್ರೋ ಉತ್ತೇಜನ-ಟ್ರಾಫಿಕ್ ಕಡಿಮೆಗಾಗಿ ಸಾರಿಗೆ ನೀತಿ ಬದಲಾಯಿಸಿ: BMRCL

ಬೆಂಗಳೂರು, ಅಕ್ಟೋಬರ್ 13: ನಮ್ಮ ಮೆಟ್ರೋ ಸಾರಿಗೆ ಪ್ರಯಾಣಿಕರನ್ನು ಉತ್ತಜಿಸುವ ಮೂಲಕ ನಗರದ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.

ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲು ಶೇರ್ ಆಟೋಗಳಿಗೆ ಅನುಮತಿ ನೀಡುವ ಜೊತೆಗೆ ನಗರದಲ್ಲಿ ಕಾರ್ಯಾಚರಣೆಯಲ್ಲಿ ಬಿಎಂಟಿಸಿಗೆ ನೀಡಲಾದ ಏಕಸ್ವಾಮ್ಯವನ್ನು ಬದಲಾಯಿಸುವಂತೆ ಮನವಿ ಮಾಡಿದೆ.

bmrcl-requested-transport-policy-modification

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರು ಉಪಕ್ರಮ ಸಂಬಂಧ ಸರ್ಕಾರ ಮತ್ತು ಪೊಲೀಸ್ ಇಲಾಖೆಗಳ ಪ್ರಸ್ತುತ ಮತ್ತು ಹಿಂದಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಇಂತದ್ದೊಂದು ಮನವಿಯನ್ನು ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಮಾಡಿದೆ ಎಂದು TNIE ವರದಿ ಮಾಡಿದೆ.

ಸದ್ಯ ನಗರದಲ್ಲಿ ಸಾರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿ ನೀತಿ ತುಂಬ ಹಳೆಯದಾಗಿದೆ. ಹೀಗಾಗಿ ಅದನ್ನು ಅಗತ್ಯತೆಗೆ ಅನುಗುಣವಾಗಿ ಬದಲಾಯಿಬೇಕಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಗಮನ ಸೆಳೆದಿದ್ದಾರೆ.

ಶೇರ್ ಆಟೋಗಳಿಗೆ ಅನುಮತಿ ನೀಡಿ

ನಗರದದಲ್ಲಿನ ಪ್ರತಿ ಮೆಟ್ರೋ ನಿಲ್ದಾಣದ 2 ಕಿಮೀ ವ್ಯಾಪ್ತಿಯಲ್ಲಿ ಶೇರ್ ಆಟೋಗಳಿಗೆ ಅನುಮತಿ ನೀಡಬೇಕಿದೆ. ಈ ವ್ಯವಸ್ಥೆಗೆ ಅನುಮತಿ ನೀಡದೇ ಹಾಲಿ ನೀತಿ ಬದಲಾವಣೆ ಮಾಡದೇ ಒಂದಷ್ಟು ಸಮಸ್ಯೆಗಳು ಆಗಿವೆ. ಕೇವಲ ಮೆಟ್ರೋ ನಿಲ್ದಾಣಗಳ ಸುತ್ತ ಮುತ್ತ ಶೇರ್ ಆಟೋಗಳಿಗೆ ಅನುಮತಿ ನೀಡಬೇಕಿದೆ.

ಅತ್ಯಂತ ಕಡಿಮೆ ಬೆಲೆಯ ಆಟೋ ಪ್ರಯಾಣ ದರ ಇದಾಗುವುದರಿಂದ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ಮೈಲಿ ಸಂಪರ್ಕವನ್ನು ಸುಲಭ ತಲುಪಲು ಸಾಧ್ಯವಾಗುತ್ತದೆ. ವೈಟ್‌ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣದ ಸಂಪರ್ಕವನ್ನು ನಗರದ ಉಳಿದ ಭಾಗಗಳೊಂದಿಗೆ ಸ್ಥಾಪಿಸಲಾಗಿದೆ. ಪ್ರಸ್ತುತ ಬಿಎಂಟಿಸಿ ಮಾತ್ರ ಹೊಂದಿರುವ ಸ್ಟೇಜ್ ಕ್ಯಾರೇಜ್ ಪರವಾನಗಿಯನ್ನು ನಿಜವಾದ ಅಗತ್ಯವಿರುವ ಕೆಲವು ಖಾಸಗಿ ವ್ಯಕ್ತಿಗಳಿಗೆ ವಿಸ್ತರಿಸಬೇಕು ಎಂದು BMRCL ಒತ್ತಾಯಿಸಿದೆ.

bmrcl-requested-transport-policy-modification

ಸಾರಿಗೆ ನೀತಿಯಲ್ಲಿ ಮಾರ್ಪಾಡು ಅಗತ್ಯ

ಪ್ರಸ್ತುತ, ಇತರ ನಿರ್ವಾಹಕರು ಕೇವಲ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆಗಳನ್ನು ಹೊಂದಿದ್ದಾರೆ ಅಂದರೆ ಅವರು ಖಾಸಗಿ ಸಂಸ್ಥೆಗಳ ಬಸ್‌ಗಳು ಮಾಡುವಂತೆ ಪಾಯಿಂಟ್ ಟು ಪಾಯಿಂಟ್ ಮಾತ್ರ ಕಾರ್ಯ ನಿರ್ವಹಿಸಬಹುದು. ಇದಕ್ಕೆ ಸಾರಿಗೆ ನೀತಿಯಲ್ಲಿಯೂ ಮಾರ್ಪಾಡು ಅಗತ್ಯವಿದೆ. ಇದನ್ನು ಅನುಮತಿಸಿದರೆ, ಐಟಿ ಸಂಸ್ಥೆಗಳ ಗುಂಪು ಒಟ್ಟಾಗಿ ಬಸ್ ಅನ್ನು ನಿರ್ವಹಿಸಬಹುದು ಮತ್ತು ಸಾರ್ವಜನಿಕರು ಇಳಿಯಲು ಅಥವಾ ಹತ್ತಲು ಅಗತ್ಯವಿರುವ ಕಚೇರಿಗಳಲ್ಲಿ ನಿಲ್ಲಬಹುದು, ಎಂದು ಅವರು ವಿವರಿಸಿದರು. BMRCLಗೆ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಗಳಿಂದ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳು ಇವೆ.

ಕೊನೆ ಮೆಟ್ರೋ ನಿಲ್ದಾಣ ಬಳಿ ಬಸ್ ನಿಲುಗಡೆಗೆ ವ್ಯವಸ್ಥೆ

ಮೆಟ್ರೋ ಜಾಲದ ಅಂತ್ಯಗೊಳ್ಳುವ ನಿಲ್ದಾಣಗಳ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳು ನಿಲುಗಡೆ ಮಾಡಲು ಹಾಗೂ ಅವುಗಳ ನಗರ ಪ್ರವೇಶಿಸದಂತೆ ತಡೆಯಲು ಸದ್ಯ ನಾಲ್ಕು ನಿಲ್ದಾಣಗಳ ಬಳಿ ವ್ಯವಸ್ಥೆ ಮಾಡುವ ಯೋಜನೆ ಇದೆ. ಈ ಸಂಬಂಧ 10 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಹೀಗೆ ಮೆಟ್ರೋ ನಿಲ್ದಾಣಗಳ ಬಳಿ ksrtc ಬಸ್ ನಿಲುಗಡೆ ಆದರೆ ಅಲ್ಲಿಂದ ಬಿಎಂಟಿಸಿ ಬಸ್ಸುಗಳ ಮೂಲಕ ಪ್ರಯಾಣಿಕರುನಗರದ ಒಳಕ್ಕೆ ಸಂಚರಿಸಬಹದಾಗಿದೆ. ಇದರ ಜೊತೆಗೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಅನ್ನು ಒದಗಿಸಬಹುದು. ಹೀಗೆ ಮಾಡಿದಲ್ಲಿ ಮಟ್ರೋ ಸಾರಿಗೆಗೆ ಉತ್ತೇಜನ ಸಿಗುತ್ತದೆ ಎಂದು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮವಾಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+