• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಜಂಟಿ ರ‍್ಯಾಲಿ ಬೆನ್ನಲ್ಲೇ, ರಾಹುಲ್ ಗೆ ಬಿಎಸ್ವೈ ಓಪನ್ ಚಾಲೆಂಜ್

|
   Lok Sabha Elections 2019 : ಬೆಂಗಳೂರು ಜಂಟಿ ರ‍್ಯಾಲಿ ಬೆನ್ನಲ್ಲೇ, ರಾಹುಲ್ ಗೆ ಬಿಎಸ್ವೈ ಓಪನ್ ಚಾಲೆಂಜ್

   ಬೆಂಗಳೂರು, ಏ 1: ಜೆಡಿಎಸ್-ಕಾಂಗ್ರೆಸ್ ಸೀಟು ಹೊಂದಾಣಿಕೆಯ ನಂತರದ ಪ್ರಮುಖ ಸಾರ್ವಜನಿಕ ಸಭೆ ಬೆಂಗಳೂರು ಹೊರವಲಯದಲ್ಲಿ ಭಾನುವಾರ (ಮಾ 31) ನಡೆದಿದೆ. ನಿರೀಕ್ಷೆಯಂತೆ, ಎರಡೂ ಪಕ್ಷಗಳ ಮುಖಂಡರು ಬಿಜಿಪಿ ವಿರುದ್ದ ಕಿಡಿಕಾರಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಡೈರಿಯ ವಿಚಾರವನ್ನು ಮತ್ತು ಅದರ ಪ್ರಕಾರ ಸಲ್ಲಿಕೆಯಾದ ಕಪ್ಪದ ಹಣವನ್ನು ಪ್ರಸ್ತಾವಿಸಿದ್ದಾರೆ.

   ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್

   ಆದಾಯ ತೆರಿಗೆ ಇಲಾಖೆ ಆ ಡೈರಿ 'ಫೇಕ್' ಎಂದು ಕ್ಲೀನ್ ಚಿಟ್ ನೀಡಿದ ನಂತರವೂ ಈ ವಿಚಾರವನ್ನು ರಾಹುಲ್ ಪ್ರಸ್ತಾವಿಸಿದ್ದಕ್ಕೆ ಯಡಿಯೂರಪ್ಪ ತೀವ್ರ ಆಕ್ರೋಶ ಹೊರಹಾಕಿ, ಅವರಿಗೆ ಓಪನ್ ಚಾಲೆಂಜ್ ನೀಡಿದ್ದಾರೆ.

   ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆ ಇಂತಿದೆ, ' ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಮೊದಲು ಬೇಜವಬ್ದಾರಿ ಹೇಳಿಕೆಗಳನ್ನು ನಿಲ್ಲಿಸಬೇಕು. ಇಂದು, ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳೇ ನಕಲಿ ಎಂದು ಹೇಳಿದ 1800 ಕೋಟಿ ಡೈರಿಯ ಬಗ್ಗೆ ಮಾತನಾಡುತ್ತಾ ಅರುಣ್ ಜೇಟ್ಲಿಗೆ, ನಿತಿನ್ ಗಡ್ಕರಿಗೆ, ರಾಜನಾಥ್ ಸಿಂಗ್‍ರಂತಹ ಕಳಂಕರಹಿತ ನಾಯಕರುಗಳಿಗೆ ನೂರಾರು ಕೋಟಿ ಹಣ ಕೊಟ್ಟಿದ್ದೇನೆಂದು ಹೇಳಿ ನನಗೂ ಮತು ಆ ನಾಯಕರುಗಳಿಗೆ ಅವಹೇಳನ ಮಾಡಿದ್ದಾರೆ'.

   ರಾಹುಲ್ ಗಾಂಧಿಯವರು ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ

   ರಾಹುಲ್ ಗಾಂಧಿಯವರು ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ

   'ಇಂತಹ ಬೇಜವಾಬ್ದಾರಿ ಹೇಳಿಕೆಯಿಂದ ರಾಹುಲ್ ಗಾಂಧಿಯವರು ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ರಾಹುಲ್ ಗಾಂಧಿ ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಈ ರೀತಿ ಅಸಂಬದ್ಧ ಹೇಳಿಕೆಗಳು ಅವರ ಘನತೆಗೆ ತಕ್ಕದ್ದಲ್ಲ'. ರಾಹುಲ್ ಗಾಂಧಿಯವರಿಗೆ ನನ್ನ ಸವಾಲೆಂದರೆ ಅವರ ಹೇಳಿಕೆಗೆ ಬದ್ಧರಾಗಿ ನಮ್ಮ ಮತ್ತು ನಮ್ಮ ನಾಯಕರುಗಳ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಿಬೇಕು, ಇಲ್ಲದಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು'.

   ಜಂಟಿ ರ‍್ಯಾಲಿ ಬೆನ್ನಲ್ಲೇ, ರಾಹುಲ್ ಗೆ ಬಿಎಸ್ವೈ ಓಪನ್ ಚಾಲೆಂಜ್

   ಜಂಟಿ ರ‍್ಯಾಲಿ ಬೆನ್ನಲ್ಲೇ, ರಾಹುಲ್ ಗೆ ಬಿಎಸ್ವೈ ಓಪನ್ ಚಾಲೆಂಜ್

   'ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಹೇಳಿದ ನನ್ನ ಸವಾಲನ್ನು ರಾಹುಲ್ ಸ್ವೀಕರಿಸಬೇಕು, ಒಂದು ವೇಳೆ ನನ್ನ ಮೇಲೆ ಮಾಡಿದ ಆಪಾದನೆ ಸಾಬೀತಾದರೆ ನಾನು ರಾಜಕೀಯ ನಿವೃತಿಯನ್ನು ಪಡೆಯುತ್ತೇನೆ'. 1800 ಕೋಟಿ ಡೈರಿ ಬಗ್ಗೆ ಈ ದೇಶದ ಸಂವಿಧಾನ ಬದ್ಧವಾಗಿ ಸ್ಥಾಪಿತವಾದ ಸಂಸ್ಥೆಗಳ ಅಧಿಕಾರಿಗಳು ನಕಲಿ ಎಂದು ಹೇಳಿದ ಮೇಲೂ ರಾಹುಲ್ ಗಾಂಧಿಜೀ ಮತ್ತು ಅವರ ಪಕ್ಷದ ನಾಯಕರುಗಳು ಈ ದೇಶದ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ'. ಇದು ಯಡಿಯೂರಪ್ಪ ಅವರ ಪತ್ರಿಕಾ ಪ್ರಕಟಣೆಯ ಒಕ್ಕಣೆ.

   ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಸದಾನಂದ ಗೌಡರ ಪ್ರಶ್ನೆಗಳು

   ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ಹಣ ಹಾಕಲಿದೆ

   ‘ನ್ಯಾಯ' ಯೋಜನೆಯ ಮೂಲಕ ಕಾಂಗ್ರೆಸ್ ದೇಶದ ಶೇ.20 ಭಾಗವಿರುವ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ಹಣ ಹಾಕಲಿದೆ. ಯಡಿಯೂರಪ್ಪಜೀ, ಕರ್ನಾಟಕದ ರೈತರು ಮತ್ತು ಸಾಮಾನ್ಯ ವರ್ಗದ ಜನರ ಜೇಬಿನಿಂದ ಹಣ ತೆಗೆದು ದೆಹಲಿಯ ಬಿಜೆಪಿ ನಾಯಕರಿಗೆ 1800 ಕೋಟಿ ನೀಡುತ್ತಾರೆಂದು ಡೈರಿಯ ವಿಚಾರವನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದರು.

   ಮೋದಿ ಸರಕಾರ ಹದಿನೈದು ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ

   ಮೋದಿ ಸರಕಾರ ಹದಿನೈದು ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ

   ನರೇಂದ್ರ ಮೋದಿ ಸರಕಾರ ಹದಿನೈದು ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆಯೇ ಹೊರತು ದೇಶಕ್ಕಾಗಿ ಅಲ್ಲ. ರಫೇಲ್ ಡೀಲ್ ಅನಿಲ್ ಅಂಬಾನಿ ನೀಡಬೇಕು ಎನ್ನುವ ಕಾರಣಕ್ಕಾಗಿ ಲು ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ 30 ಸಾವಿರ ಕೋಟಿ ಹಣವನ್ನು ಅವರ ಜೇಬಿನಲ್ಲಿ ಹಾಕಿದರು. 15 ಉದ್ಯಮಿಗಳ ಮೂರುವರೆ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು, ಇವರು ಚೌಕಿದಾರಾ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಟೀಕಿಸಿದ್ದರು.

   ರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿ

   ಕರ್ನಾಟಕ ಈ ದೇಶದ ಸ್ಟಾರ್ಟ್ ಅಪ್ ಹಬ್

   ಕರ್ನಾಟಕ ಈ ದೇಶದ ಸ್ಟಾರ್ಟ್ ಅಪ್ ಹಬ್ ಎಂದು ಹೇಳಿದ ರಾಹುಲ್, ಹೊಸ ಉದ್ಯಮಕ್ಕೆ ಮೂರು ವರ್ಷ ಅನುಮತಿಯನ್ನು ನೀಡುವುದಿಲ್ಲ, ಟ್ಯಾಕ್ಸ್ ಸರಳೀಕರಣಗೊಳಿಸಲಾಗುವುದು. ಅನೇಕ ಯೋಜನೆಗಳನ್ನು ತಂದರೂ ದೇಶದಲ್ಲಿ ನಿರುದ್ಯೋಗ ತಾಂಡವಾಡುವುದು ಕಮ್ಮಿಯಾಗಿದೆಯಾ ಎಂದು ರಾಹುಲ್ ಗಾಂಧಿ, ಮೋದಿಯವರನ್ನು ಪ್ರಶ್ನಿಸಿದ್ದಾರೆ.

   English summary
   BJP State President Yeddyurappa challenges Rahul Gandhi to prove his allegation on 1800 diary issue. In a press release BSY challenges Rahul to stop false and baseless allegations else, he is becoming a laughing stock in public mind.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X