ಒತ್ತುವರಿ ಕಾರ್ಯಾಚರಣೆ ವಿರುದ್ಧ ಹೋರಾಟಕ್ಕೆ ಇಳಿದ ಬಿಜೆಪಿ
ಬೆಂಗಳೂರು, ಮೇ 5 : 'ಸರ್ಕಾರ ಸಾಮಾನ್ಯ ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮನೆ ಒಡೆಯುವ ಪ್ರವೃತ್ತಿಯನ್ನು ಸರ್ಕಾರ ನಿಲ್ಲಿಸಬೇಕು. ಭೂ ಒತ್ತುವರಿ ತೆರವಿನ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನವನ್ನು ಕರೆಯಬೇಕು' ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಬಾಣಸವಾಡಿ ಕೆರೆ ಒತ್ತುವರಿ ತೆರವಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್, ಹೆಬ್ಬಾಳ ಶಾಸಕ ಜಗದೀಶ್ ಮುಂತಾದವರು ಭೇಟಿ ನೀಡಿ ಮನೆಗಳನ್ನು ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ನಮಗೆ ನ್ಯಾಯ ಕೊಡಿಸಿ ಎಂದು ಜನರು ಕಣ್ಣೀರು ಹಾಕಿದರು. ['ಕೆಪಿಸಿಸಿ ಕಚೇರಿ ಕಟ್ಟಿರುವುದು ಕೆರೆಯೆ ಮೇಲೆ!']
'ಹಲವು ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಲಕ್ಷಾಂತರ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ಈಗ ಕೆರೆ ಒತ್ತುವರಿ ಎನ್ನುತ್ತಿದ್ದಾರೆ. ಒತ್ತುವರಿಯಾಗಿದ್ದರೆ, ಕಟ್ಟಡ ನಿರ್ಮಾಣದ ಪ್ಲಾನ್‌ಗೆ ಅಧಿಕಾರಿಗಳು ಹೇಗೆ ಸಹಿ ಹಾಕಿದರು? ಎಂದು ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. [ಸಾರಕ್ಕಿ ಕೆರೆ ತೆರವು ನಿರಾಶ್ರಿತರಿಗೆ ಡಿಸಿ ಶಂಕರ್ ಅಭಯ]
ಜನರಿಗೆ ಸಾಂತ್ವನ ಹೇಳಿದ ಸುರೇಶ್ ಕುಮಾರ್, 'ಜನರು ಖಾತೆ, ಕಂದಾಯ ಮಾಡಿಸಿಕೊಂಡು, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾ ಬಂದಿದ್ದಾರೆ. ಆದರೂ ಈ ರೀತಿ ತೆರವು ಮಾಡಿರುವುದು ಸರಿಯಲ್ಲ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಮಾಡಿ, ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ' ಎಂದು ಹೇಳಿದರು.

ಒತ್ತುವರಿ ತೆರವು ಬಿಜೆಪಿ ಹೋರಾಟ ಆರಂಭ
ಬೆಂಗಳೂರಿನಲ್ಲಿ ಕೆರೆ ಒತ್ತುವರಿ ತೆರವು ಮಾಡುವ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಲಿದೆ. ಸರ್ಕಾರ ಸಾಮಾನ್ಯ ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮನೆ ಒಡೆಯುವ ಪ್ರವೃತ್ತಿಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಾಣಸವಾಡಿಗೆ ಬಿಜೆಪಿ ನಾಯಕರ ಭೇಟಿ
ಮಂಗಳವಾರ ಬಾಣಸವಾಡಿ ಕೆರೆ ಒತ್ತುವರಿ ತೆರವಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್, ಹೆಬ್ಬಾಳ ಶಾಸಕ ಜಗದೀಶ್ ಮುಂತಾದವರು ಭೇಟಿ ನೀಡಿ ಮನೆಗಳನ್ನು ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ನಮಗೆ ನ್ಯಾಯ ಕೊಡಿಸಿ ಎಂದು ಜನರು ಕಣ್ಣೀರು ಹಾಕಿದರು.

ಇದು ಸರ್ಕಾರದ ಹುಚ್ಚಾಟ
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, 'ಸರ್ಕಾರ ಹುಚ್ಚಾಟ ನಡೆಸುತ್ತಿದೆ ಜನರು ಖಾತೆ, ಕಂದಾಯ ಮಾಡಿಸಿಕೊಂಡು, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾ ಬಂದಿದ್ದಾರೆ. ಆದರೂ ಈ ರೀತಿ ತೆರವು ಮಾಡಿರುವುದು ಸರಿಯಲ್ಲ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್ ಆದೇಶದ ವಿರುದ್ಧ ಹೋರಾಟ ಮಾಡಿ
'ಸರ್ಕಾರ ಒತ್ತುವರಿ ತೆರವುಗೊಳಿಸಲು ಕೋರ್ಟ್ ಆದೇಶ ನೀಡಿದೆ ಎಂದು ಹೇಳುತ್ತಿದೆ. ಸರ್ಕಾರ ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಸರ್ಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು. ಕೋರ್ಟ್ ಆದೇಶದ ವಿರುದ್ಧ ಹೋರಾಟ ಮಾಡಬೇಕು' ಎಂದು ಸುರೇಶ್ ಕುಮಾರ್ ಒತ್ತಾಯಿಸಿದರು.

ಬಿಜೆಪಿ ಹೋರಾಟ ನಡೆಸಲಿದೆ
ಬಿಜೆಪಿ ಸಂತ್ರಸ್ತರ ಪರವಾಗಿ ಹೋರಾಟ ಮಾಡಲಿದೆ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಮಾಡಿ, ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications