ಬೆಂಗಳೂರಲ್ಲಿ ಅಮಿತ್ ಶಾ ರೋಡ್ ಶೋ, ಭಾಷಣ ಮಾಡದೆ ವಾಪಸ್

ಬೆಂಗಳೂರು, ಏಪ್ರಿಲ್ 02 : ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ಆರಂಭವಾಗಿದೆ. ಸಾವಿರಾರು ಕಾರ್ಯಕರ್ತರು ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಾ ರೋಡ್‌ ಶೋನದಲ್ಲಿ ಪಾಲ್ಗೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳವಾರ ರಾತ್ರಿ 9.10ಕ್ಕೆ ಬೆಂಗಳೂರು ನಗರಕ್ಕೆ ಅಮಿತ್ ಶಾ ಅವರು ಆಗಮಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಪರವಾಗಿ ಪ್ರಚಾರ ಮಾಡಲು ಅಮಿತ್ ಶಾ ಅವರು ಆಗಮಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವಥ್ ನಾರಾಯಣ, ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಶಾಸಕ ವಿ.ಸೋಮಣ್ಣ, ಸತೀಶ್ ರೆಡ್ಡಿ ಸೇರಿದಂತೆ ಹಲವು ನಾಯಕರು ರೋಡ್ ಶೋನದಲ್ಲಿ ಪಾಲ್ಗೊಂಡಿದ್ದಾರೆ.

Amit Shah

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

ಕರ್ನಾಟಕ ಬಿಜೆಪಿ ಈಗಾಗಲೇ 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಪಕ್ಷ ಬೆಂಬಲ ಘೋಷಣೆ ಮಾಡಿದೆ....

Apr 02, 2019, 10:08 pm IST

ಬನಶಂಕರಿ ದೇವಾಲಯದಿಂದ ಸಿಂಧೂರ ಕಲ್ಯಾಣ ಮಂಟಪದವರೆಗೆ ನಡೆದ ರೋಡ್ ಶೋನಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು
Apr 02, 2019, 10:01 pm IST

ರೋಡ್ ಶೋಗೆ ನಿಗದಿ ಮಾಡಿದ್ದ ಸಮಯ ಮೀರಿದ ಹಿನ್ನಲೆಯಲ್ಲಿ ಅಮಿತ್ ಶಾ ಅವರು ಭಾಷಣ ಮಾಡದೇ ವಾಪಸ್ ತೆರಳಿದರು.
Apr 02, 2019, 9:51 pm IST

ಬೆಂಗಳೂರು ದಕ್ಷಿಣ, ಉತ್ತರ, ಗ್ರಾಮಾಂತರ, ಸೆಂಟ್ರಲ್ ಕ್ಷೇತ್ರಗಳಲ್ಲಿ ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮ ಪಡುವುದಾಗಿ ಅಮಿತ್ ಶಾ ಅವರಿಗೆ ಭರವಸೆ ನೀಡಿದ ಬಿಜೆಪಿ ನಾಯಕರು
Apr 02, 2019, 9:50 pm IST

ಜೆ.ಪಿ.ನಗರ ತಲುಪಿದ ರೋಡ್ ಶೋ. ಬನಶಂಕರಿಯಿಂದ ಆರಂಭವಾಗಿದ್ದ ರೋಡ್ ಶೋ ಅಂತ್ಯ
Apr 02, 2019, 9:35 pm IST

ಹೌ ಈಸ್ ದಿ ಜೋಷ್..ಜೈ ಹಿಂದ್ ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಘೋಷಣೆ
Apr 02, 2019, 9:31 pm IST

ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 28 ವರ್ಷದ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿರುವ ಬಿಜೆಪಿ
Apr 02, 2019, 9:29 pm IST

ಮೋದಿ ಮತ್ತೊಮ್ಮೆ..ನಮೋ ಎಗೈನ್..ಭಾರತ್ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಸಾಗುತ್ತಿರುವ ರೋಡ್ ಶೋ
Apr 02, 2019, 9:27 pm IST

ಮೋದಿ ಮೋದಿ ಎಂಬ ಘೋಷಣೆಯೊಂದಿಗೆ ನಿಧಾನವಾಗಿ ಸಾಗುತ್ತಿರುವ ರೋಡ್ ಶೋ. ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
Apr 02, 2019, 9:25 pm IST

ರೋಡ್‌ ಶೋನಲ್ಲಿ ತೇಜಸ್ವಿನಿ ಅನಂತ ಕುಮಾರ್ ಭಾಗಿ
Apr 02, 2019, 9:18 pm IST

ರೋಡ್ ಶೋ ನಲ್ಲಿ ಭಾಗಿಯಾದ ತೇಜಸ್ವಿನಿ ಅನಂತ್ ಕುಮಾರ್. ಟಿಕೆಟ್ ಕೈ ತಪ್ಪಿದ ಬಳಿಕ ಮೊದಲ ಬಾರಿಗೆ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಬಿಜೆಪಿ ಉಪಾಧ್ಯಕ್ಷ ತೇಜಸ್ವಿನಿ ಅನಂತ್ ಕುಮಾರ್
Apr 02, 2019, 9:13 pm IST

ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ ರೋಡ್ ಶೋ ಆರಂಭ. ತೆರದ ವಾಹನ ಮೂಲಕ ರೋಡ್ ಶೋ. ಮುಗಿಲು ಮುಟ್ಟಿದ ಮೋದಿ ಮೋದಿ ಎಂಬ ಘೋಷಣೆ
Apr 02, 2019, 9:07 pm IST

ಅಮಿತ್ ಶಾ ಜೊತೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪಾಲ್ಗೊಂಡಿದ್ದಾರೆ.
Apr 02, 2019, 9:06 pm IST

ರೋಡ್‌ ಶೋ ಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
Apr 02, 2019, 9:03 pm IST

ಬೆಂಗಳೂರಿನ ಬನಶಂಕರಿ ದೇವಾಲಯದಿಂದ ಜೆ.ಪಿ.ನಗರದ ತನಕ ಸುಮಾರು 1 ಕಿ.ಮೀ.ರೋಡ್ ಶೋ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+