'ಪ್ರಿಯಾಂಕ್ ಖರ್ಗೆ ಸುಪಾರಿ ಸ್ಪಾನ್ಸರ್': ಬಿಜೆಪಿ ಪೋಸ್ಟರ್ ಅಭಿಯಾನ
ಬೆಂಗಳೂರು, ಡಿಸೆಂಬರ್ 31: ಬೀದರ್ ಗುತ್ತಿಗೆದಾರರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಬಿಜೆಪಿಯು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ನಾಯಕರು ಪೋಸ್ಟರ್ ಅಭಿಯಾನ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ನಾಯಕರ ಮಧ್ಯೆ ನೂಕಾಟ ಉಂಟಾಯಿತು.
ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಹಾಗೂ ರವಿಕುಮಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರ ಸಚಿವ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆಗಾರರು ಎಂದು ಘೋಷಣೆ ಕೂಗಿದರು. ಕೈಲಿದ್ದ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದರು.

ಇದೊಂದು ಭ್ರಷ್ಟ ಸರ್ಕಾರ. ಏನೇ ಮಾಡಿದರೂ ತಮ್ಮನ್ನು ಯಾರು ಕೇಳುವುದಿಲ್ಲ ಎಂದುಕೊಂಡಿದ್ದಾರೆ. ಗುತ್ತಿಗೆದಾರರನ ಡೆತ್‌ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಹೆಸರು ಇದೆ. ಇದಕ್ಕೆ ಸಚಿವರೇ ಜವಾಬ್ದಾರರು ಎಂದು ಬಿಜೆಪಿ ನಾಯಕರು ಸಚಿವ 'ಪ್ರಿಯಾಂಕ್ ಖರ್ಗೆ ಸೂಪಾರಿ ಸ್ಪಾನ್ಸರ್' ಎಂಬ ಪೋಸ್ಟರ್ ಅನ್ನು ವಿವಿಧೆಡೆ ಗೋಡೆಗಳಿಗೆ ಅಂಟಿಸಿದರು. ಸಚಿವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಪೋಸ್ಟರ್‌ನಲ್ಲಿ ವಿವಿಧ ಸಚಿವರ ಪೋಟೋ
ಸೂಸೈಡ್ ಹಾಗೂ ಸಪಾರಿ ಭಾಗ್ಯ ನೀಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂಬ ಪೋಸ್ಟರ್‌ಗಳನ್ನು ಅಂಟಿಸಿ, ಕೈ ಹಿಡಿದು ಬಿಜೆಪಿ ಕಾಯರ್ತರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಹಿಂದೆ ನಡೆದಿದ್ದ ಕೆಲವು ಘಟನೆಗಳನ್ನು ವಿವರಿಸಿದ ಸಚಿವರಾದ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ ಮತ್ತು ಶಾಸಕ ಚೆನ್ನಾರೆಡ್ಡಿ ಅವರ ಫೋಟೋ ಪೋಸ್ಟರ್ ಮಾಡಿಸಿದ್ದಾರೆ.

ಖರ್ಗೆ ರಾಜೀನಾಮೆ ಏಕಿಲ್ಲ?
ಇದಷ್ಟೇ ಅಲ್ಲದೇ ವಿವಿಧ ಪ್ರಕರಣಗಳಲ್ಲಿ ಮಾಜಿ ಸಚಿವ ಈಶ್ವರಪ್ಪ, ಕೆ.ಜೆ.ಜಾರ್ಜ್, ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿರಬೇಕಾದರೆ, ಮಲ್ಲಿಕಾರ್ಜುನ್ ಖರ್ಗೆ ರಾಜೀನಾಮೆ ಏಕಿಲ್ಲ? ಎಂದು ಪ್ರಶ್ನೆ ಮಾಡಲಾಗಿದೆ.
ರಾಜೀನಾಮೆ ಕೊಡೋವರೆಗೂ ಬಿಜೆಪಿ ಹೋರಾಟ
ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಇದೊಂದು ಭ್ರಷ್ಟಾಚಾರ ಸರ್ಕಾರ. ಅಧಿಕಾರಿಗಳಿಗೆ ಸಾವಿನ ಭಾಗ್ಯ ನೀಡಿದೆ. ಕೊಲೆಗೆಡುಕ ಸರ್ಕಾರದಲ್ಲಿ ನಾಯಕರು ಏನೆ ಮಾಡಿದರು ಕೇಳೋರಿಲ್ಲ ಎಂದಿಕೊಂಡಂತಿದೆ. ಗುತ್ತಿಗೆದಾರನ ಸಾವಿನ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಇದಿಯೋ ಇಲ್ಲವೋ ಎಂದು ಮೊದಲು ಗೊತ್ತಾಗಬೇಕು. ಅದಕ್ಕಾಗಿ ತನಿಖೆ ನಡೆಯಬೇಕು. ಆದ್ದರಿಂದ ಸಚಿವರು ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು.












Click it and Unblock the Notifications