ಮಹದೇವಪುರದಲ್ಲಿ ಬಿಜೆಪಿ ಪಾದಯಾತ್ರೆ, ಟ್ರಾಫಿಕ್ ಜಾಮ್
ಬೆಂಗಳೂರು, ಮಾರ್ಚ್ 11: ಇಂದು ನಗರದ ಮಹದೇವಪುರದಲ್ಲಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿಯು 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಯಿಂದ ವಾಹನ ಸವಾರರು ಭಾರಿ ಕಿರಿಕಿರಿ ಅನುಭವಿಸುವಂತಾಗಿದೆ.
ಬಿಜೆಪಿಯು ಕೆಲ ದಿನಗಳಿಂದ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದು, ಇಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮಹದೇವಪುರದಲ್ಲಿ ಪಾಡದಾಯಾತ್ರೆ ಹಮ್ಮಿಕೊಂಡಿದೆ.

ಪಾದಯಾತ್ರೆಯಲ್ಲಿ ಹೆಚ್ಚಿನ ಜನ ಸೇರಿರುವ ಕಾರಣ ಹೂಡಿ ಸರ್ಕಲ್ ಸೇರಿದಂತೆ ಮಹದೇವಪುರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನೀಗಿಸಲು ಹರಸಾಹಸ ಪಟ್ಟಿದ್ದಾರೆ.

ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರಾದ ಕೇಂದ್ರ ಸಚಿವ ಸದಾನಂದಗೌಡ, ಪಿಸಿ ಮೋಹನ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರುಗಳು ಭಾಗವಹಿಸಿದ್ದಾರೆ.












Click it and Unblock the Notifications