BJP MLA Munirathna: ಗೋಡೌನ್‌ನಲ್ಲಿ ಮುನಿರತ್ನ ಮಾಡಿದ್ದೇನು? ಮಹಿಳೆ ಹೇಳಿದ್ದೇನು? ಇಲ್ಲಿದೆ ಮಾಹಿತಿ

BJP MLA Munirathna Case: ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ, ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಪ್ರಕರಣದಲ್ಲಿ ಆರ್‌ಆರ್‌ ನಗರ ಬಿಜೆಪಿ ಶಾಸಕನಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಇದರ ಬೆನ್ನಲ್ಲೇ ಮತ್ತೆ ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಬಂಧಿಸಿದ್ದರು. ಇನ್ನು ಈ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮುನಿರತ್ನನ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಬೆಂಗಳೂರಿನ ಆರ್‌ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ತನ್ನ ಮೇಲೆ ನಡೆಸಿದ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಎಳೆ ಎಳೆಯಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಗೋಡೌನ್‌ನಲ್ಲಿ ಏನೆಲ್ಲ ನಡೆಯಿತು ಎನ್ನುವ ಬಗ್ಗೆಯೂ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಸಂತ್ರಸ್ತ ಮಹಿಳೆ ಪ್ರಕಾರ ಮನಿರತ್ನ ಗೌಡೌನ್‌ನಲ್ಲಿ ಏನೇನು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

BJP MLA Munirathna Case Victim Woman Reveales shocking Information about the warehous

ಸಂತ್ರಸ್ತೆ ಮಹಿಳೆ ಹೇಳಿದ್ದಿಷ್ಟು: ಕೊವಿಡ್ ಸಂದರ್ಭದಲ್ಲಿ ಮಹಿಳೆ ಸ್ಥಳೀಯ ಕಾರ್ಪೊರೇಟರ್ ಸಹಾಯದಿಂದ ಮಾಸ್ಕ್ ವಿತರಣೆ ಮಾಡಿದ್ದರು. ಈ ಬಗ್ಗೆ ತಿಳಿದ ಮುನಿರತ್ನ ಕರೆ ಮಾಡಿ ಭೇಟಿ ಆಗಲು ಹೇಳುತ್ತಾರೆ. ಅದರಂತೆಯೇ ಅವರ ಕಚೇರಿಗೆ ಹೋದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಮುಂದೊಂದು ದಿನ ನಿಮ್ಮ ಸಹಾಯ ಬೇಕಾಗುತ್ತದೆ. ಆಗ ಹೇಳುತ್ತೇನೆ ಎಂದಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ಸಂದೇಶಗಳನ್ನು ಕಳುಹಿಸುವ ಮೂಲಕ ಇಬ್ಬರ ನಡುವೆ ಸ್ನೇಹಕ್ಕೆ ತಿರುಗಿತು. ಬಳಿಕ ಅವರು ಪ್ರೇಮ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ದಿನ ಸ್ನಾನಕ್ಕೆ ಹೋದ ಸಮಯದಲ್ಲಿ ವಿಡಿಯೋ ಕರೆ ಮಾಡಿದಾಗ ನಾನು ರಿಸೀವ್ ಮಾಡುವುದಿಲ್ಲ. ಆದರೆ, ನಂತರ ಅವರ ಮಿಸ್ಡ್‌ ಕಾಲ್ ನೋಡಿ ಮರಳಿ ಕರೆ ಮಾಡುತ್ತೇನೆ. ಆದರೆ ಆಗ ಯಾಕೆ ರಿಸೀವ್ ಮಾಡಲಿಲ್ಲವೆಂದು ಕೇಳಿದಾಗ ಸ್ನಾನಕ್ಕೆ ಹೋಗಿದ್ದೆ ಎಂದಿದ್ದೆ.

ಆಗ ನಾನು ರೂಂನಲ್ಲಿದ್ದೇನೆ ಎಂದು ತಿಳಿದುಕೊಂಡು ವಿಡಿಯೋ ಕರೆ ಮಾಡಲು ಹೇಳುತ್ತಾರೆ. ಕರೆ ಮಾಡಿದಾಗ ನಿನ್ನ ನಗ್ನ ದೇಹ ತೋರಿದು ಎಂದು ಹೇಳುತ್ತಾರೆ. ಆಗ ನಾನು ಒಪ್ಪುವುದಿಲ್ಲ. ನನ್ನನ್ನು ಗೋಡೌನ್‌ಗೆ ಬಂದು ಭೇಟಿ ಮಾಡಲು ಹೇಳುತ್ತಾರೆ.

ಕೆಲವು ದಿನ ಬಿಟ್ಟು ಅವರ ಗೋಡೌನ್‌ಗೆ ಹೋದಾಗ ಅವರ ಜೊತೆ ಗನ್ ಮ್ಯಾನ್ ಸಹ ಇರುತ್ತಾರೆ. ನನ್ನ ನೋಡಿದ ತಕ್ಷಣ ನಿನ್ನ ನೋಡಿದರೆ ಮೈ ಝುಮ್ ಎನಿಸುತ್ತದೆ ಎಂದೆಲ್ಲಾ ಅಶ್ಲೀಲವಾಗಿ ಮಾತನಾಡಿ ತಬ್ಬಿಕೊಳ್ಳುತ್ತಾರೆ. ಪ್ರತಿರೋಧಿಸಿದಾಗ ಗನ್ ಮ್ಯಾನ್ ಅನ್ನು ಆಚೆ ಕಳುಹಿಸಿ ರೇಪ್ ಮಾಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಳಿಕ ವಿಡಿಯೋ ಮಾಡಿಕೊಂಡು ಹಲವು ಬಾರಿ ನನ್ನ ಮೇಲೆ ಮುನಿರತ್ನ ಅತ್ಯಾಚಾರ ಮಾಡುತ್ತಾರೆ. ನಾನು ಅಳುತ್ತಾ ಕೂತಿದ್ದಾಗ ಇದನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಅಭ್ಯಸವೂ ಅವರಿಗಿತ್ತು.

ಇದೇ ರೀತಿ ಆರ್‌ಆರ್‌ ನಗರದ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್‌ಐವಿ ಸೋಂಕಿತೆ ಜೊತೆ ಲೈಂಗಿಕ ಸಂಪರ್ಕ ನಡೆಸಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದರು. ಬಳಿಕ ಅವರ ಮಗನಿಗೂ ಲೈಂಗಿಕ ಸಂಪರ್ಕ ನಡೆಸುವಂತೆ ಎಚ್‌ಐವಿ ಸೋಂಕು ಇಂಜೆಕ್ಟ್ ಮಾಡುವಂತೆ ಬಲವಂತ ಮಾಡಿದ್ದರು. ಕಾರ್ಪೋರೇಟರ್ ಪತಿಯ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನನಗೂ ತೋರಿಸಿ ವಿಕೃತಿ ಮೆರೆದಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+