ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜನರಕ್ಷಕ ಯಾತ್ರೆ' ಬೆಂಬಲಿಸಿದ ಬಿಜೆಪಿ ನಾಯಕರು ವಶಕ್ಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಕೇರಳದಲ್ಲಿ ನಡೆಯುತ್ತಿರುವ 'ಜನರಕ್ಷಕ ಯಾತ್ರೆ' ಬೆಂಬಲಿಸಿ ಜಾಥಾ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದಲ್ಲಿ ನಡೆದ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆ ಖಂಡಿಸಿ ಜನರಕ್ಷಕ ಯಾತ್ರೆ ನಡೆಯುತ್ತಿದೆ.

ಬೆಂಗಳೂರು ಬಿಜೆಪಿ ಯುವಮೋರ್ಚಾ ಸೋಮವಾರ ಜನರಕ್ಷಕ ಯಾತ್ರೆ ಬೆಂಬಲಿಸಿ ಜಾಥಾ ಹಮ್ಮಿಕೊಂಡಿತ್ತು. ಲಾಲ್ ಬಾಗ್ ಪಶ್ವಿಮ ದ್ವಾರದ ಬಳಿ ಆರಂಭವಾದ ಜಾಥಾವನ್ನು ಪೊಲೀಸರು ಬಸವನಗುಡಿ ಬಳಿ ತಡೆದು, ಜಾಥಾ ಹೊರಟಿದ್ದ ನಾಯಕರನ್ನು ವಶಕ್ಕೆ ಪಡೆದುಕೊಂಡರು.

ಕಮ್ಯೂನಿಸ್ಟರು ರಾಜಕೀಯ ಕೊಲೆಗಳನ್ನು ನಿಲ್ಲಿಸಬೇಕು : ಆದಿತ್ಯನಾಥ್ಕಮ್ಯೂನಿಸ್ಟರು ರಾಜಕೀಯ ಕೊಲೆಗಳನ್ನು ನಿಲ್ಲಿಸಬೇಕು : ಆದಿತ್ಯನಾಥ್

BJP leaders including Yeddyurappa detained by police

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಆರ್.ಆಶೋಕ್, ಶಾಸಕ ಬಿ.ಎನ್.ವಿಜಯಕುಮಾರ್ ಸೇರಿದಂತೆ ವಿವಿಧ ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಪಿಣರಾಯಿ ನೇರ ಹೊಣೆ : ಅಮಿತ್ ಶಾಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಪಿಣರಾಯಿ ನೇರ ಹೊಣೆ : ಅಮಿತ್ ಶಾ

BJP leaders including Yeddyurappa detained by police

ಕೇರಳದಲ್ಲಿ ಜನರಕ್ಷಕ ಯಾತ್ರೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಕೆಲವು ಬಿಜೆಪಿ ನಾಯಕರು ಅಮಿತ್ ಶಾ ಜೊತೆ ಜನರಕ್ಷಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

English summary
Several Karnataka BJP leaders including state BJP president B.S.Yeddyurappa were detained by the Bengaluru police on October 9, 2017. BJP began march to support Janaraksha Yatra in Kerala to create awareness against political murders in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X