ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ: ಅಶೋಕ್ ವಿರುದ್ಧ ಸಿಡಿದ ಸತೀಶ್ ರೆಡ್ಡಿ

ಬೆಂಗಳೂರು, ಡಿಸೆಂಬರ್ 5: ಬೆಂಗಳೂರು ಬಿಜೆಪಿಯಲ್ಲಿ ಆರ್ ಅಶೋಕ್ ನಾಯಕತ್ವದ ವಿರುದ್ಧ ಬಿಜೆಪಿಯಲ್ಲಿ ಆಗಾಗ ಅಪಸ್ವರ ಕೇಳಿಬರುತ್ತಲೇ ಇದ್ದು, ಇದೀಗ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ವೇಳೆ ಬಿಜೆಪಿ ಶಾಸಕರು ಆರ್ ಅಶೋಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯತ್ವ ಸ್ಥಾನಕ್ಕೆ ತಮ್ಮ ವಿಧಾನಸಭಾ ಕ್ಷೇತ್ರದ ಕಾರ್ಪೊರೇಟರ್‌ಗಳನ್ನೇ ಸದಸ್ಯರನ್ನಾಗಿ ಮಾಡಬೇಕೆಂದು ಬಿಜೆಪಿ ಶಾಸಕರಲ್ಲೇ ಪೈಪೋಟಿ ಏರ್ಪಟ್ಟಿದ್ದು, ಮಾಜಿ ಡಿಸಿಎಂ ಆರ ಅಶೋಕ್ ವಿರುದ್ಧ ಸತೀಶ್ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಬಿಬಿಎಂಪಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ನಡೆದ ಸ್ಥಾಯಿ ಸಮಿತಿ ಆಯ್ಕೆ ಸಂಬಂಧದ ಸಭೆಯಲ್ಲಿ ಅಶೋಕ್ ಹಾಗೂ ಸತೀಶ್ ರೆಡ್ಡಿ ನಡುವೆ ವಾಗ್ವಾದ ನಡೆದಿದೆ. ತಮ್ಮ ಕ್ಷೇತ್ರದ ವ್ಯಾಪ್ತಿಯವರಿಗೆ ನಾಲ್ಕು ಸ್ಥಾನಗಳನ್ನು ನೀಡಬೇಕು ಎಂದು ಅಶೋಕ್ ಪಟ್ಟು ಹಿಡಿದಿದ್ದರಿಂದ ಕೆರಳಿದ ಸತೀಶ್ ರೆಡ್ಡಿ ಪ್ರತಿ ಬಾರಿಯೂ ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಇನ್ನು ಈ ರೀತಿಯಾದರೆ ಸಹಿಸುವುದಿಲ್ಲ ಎಂದು ಗುಡುಗಿದರು.

Bjp leaders dispute over BBMP standing committee election

ಇಬ್ಬರ ನಡುವೆ ವಾಗ್ವಾದ ನಡೆಯುತ್ತಿರುವ ಸಂದರ್ಭದಲ್ಲೇ ಮಾಧ್ಯಮಗಳು ಸ್ಥಳದಲ್ಲಿರುವುದನ್ನು ಗಮನಿಸಿದ ಸಂಸದ ಪಿಸಿ ಮೋಹನ್ ಸುಮ್ಮನಿರುವಂತೆ ಅವರಿಗೆ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+