• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೂ ನಮಗೂ ಸಂಬಂಧವಿಲ್ಲ: ಆರ್ ಅಶೋಕ್

|

ಬೆಂಗಳೂರು, ಜುಲೈ 29: ರಾಜೀನಾಮೆ ಕೊಟ್ಟಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು ಹಾಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

ನೂರಕ್ಕೆ ನೂರು ಪರ್ಸೆಂಟ್ ಬಹುಮತ ಸಾಬೀತು ಪಡಿಸುತ್ತೇವೆ. ರಾಜ್ಯದ ಜನರು ಜೆಡಿಎಸ್‍ಗೆ 37 ಸ್ಥಾನ ಕೊಟ್ಟು ಥರ್ಡ್ ಪ್ಲೇಸ್‍ನಲ್ಲಿ ಇಟ್ಟಿದ್ದರು. ಆದರೆ ಮೂರನೇ ಸ್ಥಾನ ಬಂದವರು ಮೊದಲನೇ ಸ್ಥಾನಕ್ಕೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ. ಮತ್ತೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.

LIVE: ಶಕ್ತಿಸೌಧದಲ್ಲಿ ವಿಶ್ವಾಸ, ನ್ಯಾಯಾಲಯದಲ್ಲಿ ಅತೃಪ್ತರ ಅವಿಶ್ವಾಸLIVE: ಶಕ್ತಿಸೌಧದಲ್ಲಿ ವಿಶ್ವಾಸ, ನ್ಯಾಯಾಲಯದಲ್ಲಿ ಅತೃಪ್ತರ ಅವಿಶ್ವಾಸ

ನಾವು ಯಾರೂ ಅತೃಪ್ತ ಶಾಸಕರ ಜೊತೆ ಹೋಗಿಲ್ಲ, ಬಂದಿಲ್ಲ. ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಅವರ ಪಾಡಿಗೆ ಅವರು ಬಂದಿದ್ದಾರೆ ಅಷ್ಟೇ. ನಾನು ಅಶ್ವತ್ಥ್ ನಾರಾಯಣ್ ಬೇರೆ ಕೆಲಸಕ್ಕೆ ಹೋಗಿದ್ದೆವು ಎಂದು ಹೇಳಿದ್ದಾರೆ.

ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ನೀಡಬೇಕಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ. ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸ್ಪೀಕರ್ ತೀರ್ಪನ್ನು ಸುಪ್ರೀಂ ಎತ್ತಿಹಿಡಿದರೆ ಅತೃಪ್ತರ ರಾಜಕೀಯ ಜೀವನದಲ್ಲಿ ಆಷಾಢ!ಸ್ಪೀಕರ್ ತೀರ್ಪನ್ನು ಸುಪ್ರೀಂ ಎತ್ತಿಹಿಡಿದರೆ ಅತೃಪ್ತರ ರಾಜಕೀಯ ಜೀವನದಲ್ಲಿ ಆಷಾಢ!

ಸ್ಪೀಕರ್ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ. ರಮೇಶ್ ಕುಮಾರ್ ಅವರು ಕೂಡ ಒಬ್ಬ ಶಾಸಕರೇ. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ಮಾಡಬೇಕಿತ್ತು. ಈ ಹಿಂದೆ ಇಂತಹ ತೀರ್ಪು ಬಂದಿರಲಿಲ್ಲ ಎಂದರು.

English summary
BJP leader R Ashok stated that we don't have any relation with disqualified MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X