ಬಿಬಿಎಂಪಿ ಬಿಕ್ಕಟ್ಟು : ಬಿಜೆಪಿ ಸದಸ್ಯರು ರೆಸಾರ್ಟ್‌ನತ್ತ?
ಬೆಂಗಳೂರು, ಸೆಪ್ಟೆಂಬರ್, 09 : ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಲೆಕ್ಕಾಚಾರಗಳು ಇನ್ನೂ ಮುಂದುವರೆದಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಂತರ ಇದೀಗ ಬಿಜೆಪಿಯ ಸದಸ್ಯರು ರೆಸಾರ್ಟ್‌ನತ್ತ ಮುಖ ಮಾಡಿದ್ದಾರೆ.
ಸೆ.11ರ ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಸದಸ್ಯರನ್ನು ಬೇರೆ ಪಕ್ಷದವರು ಸೆಳೆಯಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಚುನಾವಣೆ ದಿನ ನೇರವಾಗಿ ಎಲ್ಲರೂ ಪಾಲಿಕೆ ಕಚೇರಿಗೆ ಆಗಮಿಸಲಿದ್ದಾರೆ. [ಮೇಯರ್ ಆಯ್ಕೆ, ಬುಧವಾರ ಕೋರ್ಟ್ ನಲ್ಲಿ ವಿಚಾರಣೆ]

ಇತ್ತ ಬಿಜೆಪಿ ಸದಸ್ಯರು ಬುಧವಾರ ಸಂಜೆ ರೆಸಾರ್ಟ್‌ಗೆ ತೆರಳುವ ಸಾಧ್ಯತೆ ಇದೆ. ಬೆಂಗಳೂರು ನಗರದ ಹೊರವಲಯದ ರೆಸಾರ್ಟ್‌ಗೆ ತೆರಳಲಿರುವ ಸದಸ್ಯರು ಮೇಯರ್ ಆಯ್ಕೆ ಸೇರಿ ಹಲವು ವಿಚಾರಗಳ ಕುರಿತು ಸಭೆ ನಡೆಸುವ ಸಾಧ್ಯತೆ ಇದೆ. [ಬಿಜೆಪಿಯವರು ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾದರು']
ಕೋರ್ಟ್‌ನಲ್ಲೇನಾಗುತ್ತೆ? : ಮೇಯರ್ ಆಯ್ಕೆ ಚುನಾವಣೆಯಲ್ಲಿ ಶಾಸಕರು, ಸಂಸದರು ಮತ್ತು ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದನ್ನು ಪ್ರಶ್ನಿಸಿ ಬಿಜೆಪಿಯ ಕೆಲವು ಸದಸ್ಯರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.['ಬಿಬಿಎಂಪಿಯಲ್ಲಿ ಮೈತ್ರಿ : ದೇವೇಗೌಡರಿಗೆ ಲಾಭ ಜಾಸ್ತಿ']
ಬುಧವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಬಿಜೆಪಿ ಪರವಾಗಿ ತೀರ್ಪು ಬಂದರೆ ರೆಸಾರ್ಟ್‌ಗೆ ಹೋಗುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪವಿತ್ರ ಎಂದು ಆರೋಪಿಸಿರುವ ಪಕ್ಷದ ನಾಯಕರು ಇಂದು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂದಹಾಗೆ ಕಾಂಗ್ರೆಸ್‌ನ 76 ಸದಸ್ಯರು ಮತ್ತು ಜೆಡಿಎಸ್‌ನ 14 ಸದಸ್ಯರು ಮತ್ತು ಪಕ್ಷೇತರರು ಕೇರಳ, ಮಡಿಕೇರಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯೂ ರೆಸಾರ್ಟ್‌ಗೆ ಹೋದರೆ ಇನ್ನೂ ಎರಡು ದಿನ ರೆಸಾರ್ಟ್ ರಾಜಕೀಯ ಮುಂದುವರೆಯಲಿದೆ.











Click it and Unblock the Notifications