• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತಿನಲ್ಲಿ ಗೆಲುವು ಸಾಧಿಸಲು ಹೊಸ ರಣತಂತ್ರ ː ದಿನೇಶ್

By ಅನುಷಾ ರವಿ
|

ಬೆಂಗಳೂರು, ಜುಲೈ 13: ಗುಜರಾತ್ ಹಾಗೂ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಎರಡೂ ಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಹಗಲು ರಾತ್ರಿ ನಿರತವಾಗಿವೆ. ಈ ಸಂದರ್ಭದಲ್ಲಿ ಎಐಸಿಸಿ ವಕ್ತಾರ, ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಒನ್ಇಂಡಿಯಾ ಪ್ರತಿನಿಧಿ ನಡೆಸಿದ ಸಂದರ್ಶನದ ಸಾರಾಂಶ ಇಲ್ಲಿದೆ.

* ಕರ್ನಾಟಕದಲ್ಲಿ ಉತ್ತರಪ್ರದೇಶದಂತೆ ಮ್ಯಾಜಿಕ್ ನಡೆಯಸಲು ಸಾಧ್ಯವೇ?

ಖಂಡಿತ ಸಾಧ್ಯವಿಲ್ಲ. ಉತ್ತರಪ್ರದೇಶದಲ್ಲಿ ಬಂದ ಫಲಿತಾಂಶ ಇಲ್ಲಿ ಕಾಣಲು ಬಿಜೆಪಿಗೆ ಸಾಧ್ಯವೇ ಇಲ್ಲ. ದಕ್ಷಿಣ ಭಾರತದ ರಾಜಕೀಯ ಪರಿಸ್ಥಿತಿಯೇ ಬೇರೆ. ಅಲ್ಲಿ ಎಲ್ಲಾ ಪಕ್ಷಗಳ ಮೇಲೆ ಜನರಿಗೆ ನಂಬಿಕೆ ಹೋಗಿತ್ತು. 15 ವರ್ಷಗಳ ನಂತರ ಬದಲಾವಣೆಗಾಗಿ ಜನ ವಿಧಿ ಇಲ್ಲದೆ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ.

ಆದರೆ, ಇಲ್ಲಿ ನಮಗೆ ಆತ್ಮವಿಶ್ವಾಸ, ಶಕ್ತಿ ಹಾಗೂ ಜನರ ಬಲವಿದೆ. ಜನರ ನೆರವಿಗೆ ಸರ್ಕಾರದ ವಿವಿಧ ಯೋಜನೆಗಳಿವೆ.ಹೀಗಾಗಿ ಜನರಿಗೆ ಬೇಸರವಾಗುವಂಥ, ಬದಲಾವಣೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಕೋಮುವಾದ ರಾಜಕೀಯ ಇಲ್ಲಿ ನಡೆಯಲ್ಲ: ಉತ್ತರಪ್ರದೇಶದಂಥ ಪರಿಸ್ಥಿತಿ ಎಂದಿಗೂ ನಿರ್ಮಾಣವಾಗಲು ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಸಮಾಜವಾದದ ನೆಲೆಯಿಂದ ಬಂದವರು, ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಕೋಮು ಗಲಭೆಗಳಂಥ ಘಟನೆಗಳಿಗೆ ಬಿಜೆಪಿಯೇ ನೇರ ಹೊಣೆಯಾಗಲಿದೆ.

ಯಡಿಯೂರಪ್ಪ ಅವರ ಶಕ್ತಿ ಕುಂದಿದೆ: ರಾಜಕೀಯವಾಗಿ ಯಡಿಯೂರಪ್ಪ ಅವರ ಶಕ್ತಿ ಕುಂದಿದೆ. ಹೀಗಾಗಿ ಕರ್ನಾಟಕ ಬಿಜೆಪಿಯಲ್ಲಿ ಈಗ ಸಮರ್ಥ ನಾಯಕರೇ ಇಲ್ಲ. ಮೋದಿ ಹಾಗೂ ಅಮಿತ್ ಶಾ ನೆರಳಿನಲ್ಲಿ ಜನರ ಮುಂದೆ ನಿಲ್ಲುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ನಡುವೆ ಮನಸ್ತಾಪ, ಭಿನ್ನಮತ ಉಂಟಾಗುವಂತೆ ಬಿಜೆಪಿ ಯತ್ನಿಸಿದ್ದನ್ನು ಮರೆಯುವಂತಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಎಲ್ಲರಿಗೂ ನಂಬಿಕೆಯಿದೆ ಹಾಗೂ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ.

ಗುಜರಾತಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆ ಇದೆಯೆ?

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ತವರು ರಾಜ್ಯದಲ್ಲಿ ಚುನಾವಣೆ ಎದುರಿಸಿ ಗೆಲ್ಲುವುದು ಕಷ್ಟದ ಕೆಲಸ. ಕರ್ನಾಟಕದಂತೆ ಅಲ್ಲಿ ರಣತಂತ್ರ ರೂಪಿಸಲು ಸಾಧ್ಯವಿಲ್ಲ. ಆದರೆ, ಗುಜರಾತ್ ಜನರು ಬದಲಾವಣೆ ಬಯಸಿದರೆ ಕಾಂಗ್ರೆಸ್ ಅವರ ನೆರವಿಗೆ ನಿಲ್ಲಲಿದೆ. ದಲಿತರು, ಶೋಷಿತರು, ಪಾಟಿದಾರ್ ಸಮುದಾಯಕ್ಕೆ ನ್ಯಾಯ ಸಿಗಬೇಕಿದೆ. ಅಪನಗದೀಕರಣ, ಜಿಎಸ್ ಟಿ ಯಿಂದ ಅಲ್ಲಿನ ಸಣ್ಣ ವ್ಯಾಪಾರಿಗಳು ಸಂಕಷ್ಟ ಅನುಭವಿಸಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ.

English summary
With the Congress and BJP slated for a head-on fight in assembly elections in major states of Gujarat and Karnataka in a matter of months, both parties are working overtime. OneIndia caught up with AICC spokesperson and Karnataka Congress Working President Dinesh Gundu Rao to get a peek into the Congress' strategy to counter the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X