ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಭಾತ್ ಕಲಾವಿದರಿಂದ ಗೋಪಣ್ಣ ಜನ್ಮಶತಮಾನೋತ್ಸವ

By Mahesh
|
Google Oneindia Kannada News

ಬೆಂಗಳೂರು, ಜೂ.4: ಹರಿಕಥಾರತ್ನಾಕರ ಗೋಪಿನಾಥದಾಸರ ಜನ್ಮ ಶತಮಾನೋತ್ಸವವನ್ನು 'ಗೋಪಣ್ಣ 100' ಎಂಬ ಹೆಸರಿನಲ್ಲಿ ಪ್ರಭಾತ ಕಲಾವಿದರು ಜೂ.7 ರಿಂದ ಜೂ 29 ರ ತನಕ ಪ್ರತಿ ಶನಿವಾರ ಮತ್ತು ಭಾನುವಾರ ವೈವಿಧ್ಯಮಯವಾಗಿ ಆಚರಿಸುತ್ತಿದ್ದಾರೆ.

ಜೂ.7ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 6.15ಕ್ಕೆ 'ಗೋಪಣ್ಣ 100' ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಕಲಾ ಪೋಷಕರಾದ ಹರಿಖೋಡೆ ಉದ್ಘಾಟಿಸಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರಿ ಉಪಸ್ಥಿತರಿರುತ್ತಾರೆ.

Birth Centenary of Gopinath Dasaru

ಇದೇ ಸಂದರ್ಭದಲ್ಲಿ ಭದ್ರಗಿರಿ ಸರ್ವೋತ್ತಮ ಪೈ, ಹರಿಕಥಾ ವಿದ್ವಾಂಸರು ಹಾಗೂ ಶಾಂತಾ ಅನಂತಸ್ವಾಮಿ, ದಿ ಮೈಸೂರು ಅನಂತಸ್ವಾಮಿ ಅವರ ಪತ್ನಿ ಇವರಿಗೆ ಸನ್ಮಾನ ಮಾಡಲಾಗುತ್ತದೆ.

* ಜೂ. 8ರಂದು ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಐರಾವತ ತುಂಟ ಗಣಪ ಕಥಾ ಕೀರ್ತನೆ. ಸಂಜೆ ಮೈಸೂರು ಮಲ್ಲಿಗೆ ನಾಟಕ,
* ಜೂ. 14 ಹಾಗೂ ಜೂ.15ರಂದು ದಯಾನಂದ ಸಾಗರ್ ಕಾಲೇಜಿನ ಸಭಾಂಗಣದಲ್ಲಿ
ನೃತ್ಯಾರ್ಪಣ: ಹೇಮಾ ಪಂಚಮುಖಿ ಮತ್ತು ತಂಡ ಇನ್ನಿತರ ಕಾರ್ಯಕ್ರಮಗಳು
* ಜೂ .22ರಂದು ಕುವೆಂಪು ಕಲಾಕ್ಷೇತ್ರ, ವಿವಿಪುರಂನಲ್ಲಿ ಉತ್ತರ ಭೂಪ ನಾಟಕ, ಭೈರವಿ ನಾಟಕ, ವಿಜಯೋತ್ಸವ ನೃತ್ಯ ನಾಟಕವಿರುತ್ತದೆ.
* ಜೂ.29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಯವದನ ನಾಟಕ ಹಾಗೂ ಗೋಪಿನಾಥದಾಸರ ಜೀವನ ಕುರಿತ ಕಲಾ ತಪಸ್ವಿ ನಾಟಕ ಹಾಗೂ ಸಮಾರೋಪ ಸಮಾರಂಭವಿರುತ್ತದೆ.

ಕಲಾಸಕ್ತರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ಅನುಭವಿಸಬೇಕಾಗಿ ಪ್ರಭಾತ್ ಕಲಾವಿದರು ತಂಡ ಹರೀಶ್ ಅವರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗೆ ಪ್ರಭಾತ್ ಕಲಾವಿದರು ವೆಬ್ ಸೈಟ್ ಗೆ ಭೇಟಿ ಕೊಡಿ

English summary
Prabhath Kalavidaru, Bangalore is celebrating the birth centenary of founder Gopinath Dasaru through a eight day theatre, harikatha, music, dance and dance ballet festival in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X